32 C
Mumbai
March 7, 2026
Mumbai News Kannada
ಮುಂಬಯಿ

ಗೋರೆಗಾಂವ್: ಜಯ ಸುವರ್ಣ ನಿವಾಸದಲ್ಲಿ ಭಕ್ತಿ ಸಂಭ್ರಮದ ಶ್ರೀ ಶನೀಶ್ವರ ಗ್ರಂಥ ಪಾರಾಯಣ





ಮುಂಬಯಿ, ಜ. 20: ಬಿಲ್ಲವ ಸಮಾಜದ ಅಭಿವೃದ್ಧಿಯ ಹರಿಕಾರ ಹಾಗೂ ಭಾರತ್ ಬ್ಯಾಂಕಿನ ಆಧುನಿಕ ರೂಪಶಿಲ್ಪಿ ಎಂದೇ ಖ್ಯಾತರಾದ ದಿವಂಗತ ಜಯ ಸಿ. ಸುವರ್ಣ ಅವರ ಗೋರೆಗಾಂವ್ ಪೂರ್ವದ ‘ನೀಲಗಿರಿ’ ನಿವಾಸದಲ್ಲಿ ವಾರ್ಷಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಹಾಗೂ ಮಹಾಪೂಜೆಯು ಮಂಗಳವಾರ ಅತ್ಯಂತ ಭಕ್ತಿ-ಭಾವ ಮತ್ತು ಸಂಭ್ರಮದೊಂದಿಗೆ ನೆರವೇರಿತು.

​ಜಯ ಸಿ. ಸುವರ್ಣ ಮಾರ್ಗದಲ್ಲಿರುವ ಅವರ ಸ್ವಗೃಹದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದ ಯಜಮಾನಿಕೆಯನ್ನು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರು ಹಾಗೂ ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜೆ. ಸುವರ್ಣ ಮತ್ತು ನಿಶಿತಾ ಎಸ್. ಸುವರ್ಣ ದಂಪತಿ ವಹಿಸಿದ್ದರು. ಬಿಲ್ಲವರ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷರು ಹಾಗೂ ಭಾರತ್ ಬ್ಯಾಂಕಿನ ನಿರ್ದೇಶಕರೂ ಆದ ಚಂದ್ರಶೇಖರ್ ಎಸ್. ಪೂಜಾರಿ ಅವರು ಶ್ರೀ ಶನೀಶ್ವರ ಮಹಾಪೂಜೆಯನ್ನು ವಿಧಿವಿಧಾನಗಳೊಂದಿಗೆ ನೆರವೇರಿಸಿದರು.

​ಈ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಸುನೀಲ್ ಪ್ರಭು ಸೇರಿದಂತೆ ಉದ್ಯಮಿಗಳಾದ ಉದಯ ಎಸ್. ಶೆಟ್ಟಿ, ಗುಣಪಾಲ್ ಎಸ್. ಶೆಟ್ಟಿ (ಸಾಯಿ ಪ್ಯಾಲೇಸ್), ಪ್ರೇಮನಾಥ ಎಸ್. ಸಾಲಿಯಾನ್ (ಅಭ್ಯುದಯ), ಮುಂಡ್ಕೂರು ರತ್ನಾಕರ್ ಶೆಟ್ಟಿ, ಗಣೇಶ್ ಕರ್ಕೇರ ಥಾಣೆ, ಸುಭಾಷ್ ಪಾಲನ್ ಡೊಂಬಿವಿಲಿ, ಪ್ರದೀಪ್ ಪೂಜಾರಿ (ಸಾಗರ್) ಹಾಗೂ ಗಣೇಶ್ ಪೂಜಾರಿ ಥಾಣೆ ಮೊದಲಾದ ಗಣ್ಯರು ಭಾಗವಹಿಸಿದ್ದರು.

​ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖರಾದ ಭಾರತ್ ಬ್ಯಾಂಕ್‌ನ ಉಪಕಾರ್ಯಾಧ್ಯಕ್ಷ ನ್ಯಾಯವಾದಿ ಸೋಮನಾಥ್ ಬಿ. ಅಮೀನ್, ನಿರ್ದೇಶಕರುಗಳಾದ ಭಾಸ್ಕರ್ ಎಂ. ಸಾಲಿಯಾನ್, ಗಂಗಾಧರ ಜೆ. ಪೂಜಾರಿ, ಅಶೋಕ್ ಎಂ. ಕೋಟ್ಯಾನ್, ಮೋಹನದಾಸ್ ಜಿ. ಪೂಜಾರಿ, ನಿರಂಜನ್ ಲಕ್ಷ್ಮಣ ಪೂಜಾರಿ, ಸಂತೋಷ್ ಕೆ. ಪೂಜಾರಿ, ದಯಾನಂದ ಆರ್. ಪೂಜಾರಿ, ಗಣೇಶ್ ಡಿ. ಪೂಜಾರಿ, ಹರೀಶ್ ವಿ. ಪೂಜಾರಿ, ನಾರಾಯಣ ಎಲ್. ಸುವರ್ಣ, ಸುರೇಶ್ ಬಿ. ಸುವರ್ಣ, ಅನ್ಬಲಗನ್ ಸಿ. ಹರಿಜನ, ಗೌರೇಶ್ ಆರ್. ಕೋಟ್ಯಾನ್, ಜಯಲಕ್ಷ್ಮಿ ಪಿ. ಸಾಲಿಯಾನ್, ಜಯಶ್ರೀ ಎಂ. ಹೆಜಮಾಡಿ ಅವರು ಉಪಸ್ಥಿತರಿದ್ದರು.

​ಅಲ್ಲದೆ, ಆಡಳಿತ ಮಂಡಳಿ ಸದಸ್ಯರಾದ ಅಶೋಕ್ ಕೆ. ಕೋಟ್ಯಾನ್, ನಿತ್ಯಾನಂದ ಡಿ. ಕೋಟ್ಯಾನ್, ಆಡಳಿತ ನಿರ್ದೇಶಕ ಮತ್ತು ಸಿಇಒ ವಿದ್ಯಾನಂದ ಎಸ್. ಕರ್ಕೇರ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ. ಸಾಲ್ಯಾನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸುವರ್ಣ ಪರಿವಾರದ ಹಿತೈಷಿಗಳು ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು.



Related posts

ಭಾರತ್ ಬ್ಯಾಂಕಿನ ಅಂಧೇರಿ ಪೂರ್ವದ ಶಾಖೆಯ 30ನೇ ವರ್ಷ ಆಚರಣೆಯ ಸಂಭ್ರಮ.

Mumbai News Desk

ಮುಂಬೈ ನಗರದಲ್ಲಿ ಭಾರೀ ಮಳೆ: ಕರಾವಳಿ ಪ್ರದೇಶಗಳಿಗೆ ತೆರಳದಂತೆ, ಒಳಾಂಗಣದಲ್ಲಿಯೇ ಇರುವಂತೆ ಪೊಲೀಸರು ನಾಗರಿಕರಿಗೆ ಮನವಿ

Mumbai News Desk

12ನೇ ತರಗತಿಯ ಪರೀಕ್ಷೆಯಲ್ಲಿ. ಅನನ್ಯ ಬಿ ಕುಲಾಲ್. ಶೇ  86.50% 

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅನುಷಾ ಗಣೇಶ್ ಮೂಲ್ಯ ಗೆ ಶೇ 89.40 ಅಂಕ.

Mumbai News Desk

ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ ಇದರ 10ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬೈ ವಸಯಿ ಸ್ಥಳೀಯ ಕಚೇರಿಯ ವತಿಯಿಂದ ಆಟಿ ಡೊಂಜಿ ದಿನ ತುಳು ಕಾರ್ಯಕ್ರಮ

Mumbai News Desk