32 C
Mumbai
March 7, 2026
Mumbai News Kannada
ಸುದ್ದಿ

ಅಜಿತ್ ಪವಾರ್ ನಿಧನ : ಮಹಾರಾಷ್ಟ್ರ ಸರ್ಕಾರದ ಅಧಿಕೃತ ಪ್ರಕಟಣೆ





ಮಹಾರಾಷ್ಟ್ರ ಸರ್ಕಾರದ ಗೌರವಾನ್ವಿತ ಉಪಮುಖ್ಯಮಂತ್ರಿಗಳಾದ ಶ್ರೀ ಅಜಿತ್ ಅಶಾತಾಯಿ ಅನಂತರಾವ್ ಪವಾರ್ ಅವರು ಇಂದು, ಜನವರಿ 28, 2026 ರಂದು ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ನಿರ್ಗಮಿತ ಗಣ್ಯರಿಗೆ ಗೌರವ ಸೂಚಕವಾಗಿ ಮಹಾರಾಷ್ಟ್ರ ರಾಜ್ಯಾದ್ಯಂತ ಮೂರು ದಿನಗಳ ಕಾಲ, ಅಂದರೆ ಜನವರಿ 28 ರಿಂದ ಜನವರಿ 30, 2026 ರವರೆಗೆ ರಾಜ್ಯ ಶೋಕಾಚರಣೆಯನ್ನು ಆಚರಿಸಲಾಗುವುದು. ಈ ಅವಧಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು ಮತ್ತು ಯಾವುದೇ ಅಧಿಕೃತ ಸರ್ಕಾರಿ ಮನೋರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ಗೌರವಾನ್ವಿತ ಉಪಮುಖ್ಯಮಂತ್ರಿಗಳ ನಿಧನದ ಹಿನ್ನೆಲೆಯಲ್ಲಿ, ಬುಧವಾರ, ಜನವರಿ 28, 2026 ರಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಮಹಾರಾಷ್ಟ್ರ ಸರಕಾರದ ಅದೀನ ಕಾರ್ಯದರ್ಶಿ ಎಚ್. ಪಿ. ಬಾವಿಸ್ಕಿರ್ ಪ್ರಕಟಣೆ ಮೂಲಕ ಸಂದೇಶ ತಿಳಿಸಿದ್ದಾರೆ.



Related posts

  ಬಿಲ್ಲವ ಸಮಾಜದ  ಜನನಾಯಕ  ಜಯ ಸಿ. ಸುವರ್ಣ ಸಂಸ್ಮರಣೆ

Mumbai News Desk

ರಾಕ್ಷಸ ಪಾತ್ರಗಳಲ್ಲಿ ಮೆರೆದು, ಯಕ್ಷರಂಗದಲ್ಲಿ ಮಿಂಚಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ

Mumbai News Desk

ಮಹಾರಾಷ್ಟ್ರ ಬಂದ್! ತೆರಿಗೆ ಹೆಚ್ಚಳ ಖಂಡಿಸಿ ಜುಲೈ 14 ರಂದು ಭಾರತೀಯ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಂಘ (AHAR) ಮುಷ್ಕರಕ್ಕೆ ಕರೆ.

Mumbai News Desk

ಶ್ರೀ ಶಿವ ಪಂಚಾಕ್ಷರಿ ಭಜನಾ ಮಂದಿರ ಕೊಳ, ಮಲ್ಪೆ – ರಕ್ತದಾನ ಶಿಬಿರ

Mumbai News Desk

ಬಂಟರ ಯಾನೆ ನಾಡವರ ಮಾತೃಸಂಘದ ಶತಮಾನೋತ್ಸವ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ  ಕೆ. ಪ್ರಕಾಶ್ ಶೆಟ್ಟಿ.

Mumbai News Desk

ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಗೆ ಶಿಲಾನ್ಯಾಸ* ಉತ್ತಮ ನಾಯಕತ್ವ ಇದ್ದರೆ ಎಲ್ಲವೂ ಸಾಧ್ಯ: ತೋನ್ಸೆ ಆನಂದ ಶೆಟ್ಟಿ*

Mumbai News Desk