32 C
Mumbai
March 7, 2026
Mumbai News Kannada
ಮುಂಬಯಿ

ಮೂರು ದಶಕಗಳ ಅವಿರತ ಸೇವಾ ಪಯಣ: ಭಾರತ್ ಬ್ಯಾಂಕಿನ ಹಿರಿಯ ಅಧಿಕಾರಿ ಸುಧೀರ್ ಸುವರ್ಣರಿಗೆ ಅಭಿನಂದನಾ ಪೂರ್ವಕ ಬೀಳ್ಕೊಡುಗೆ





ಭಾರತ್ ಬ್ಯಾಂಕಿನ ಮುಂಬೈಯ ಮಲಾಡ್ ಪೂರ್ವ ರಾಣಿ ಸತಿ ಮಾರ್ಗ,ಶಾಖೆಯಲ್ಲಿ ಉಪ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಧೀರ್ ಬಿ. ಸುವರ್ಣ ಅವರು 37 ವರ್ಷಗಳ ಸುದೀರ್ಘ ಹಾಗೂ ಸ್ತುತ್ಯಾರ್ಹ ಸೇವೆಯ ನಂತರ ದಿನಾಂಕ 31/01/2026 ರಂದು ಅಧಿಕೃತವಾಗಿ ಸೇವಾ ನಿವೃತ್ತಿ ಹೊಂದಿದರು.


1989ರ ಏಪ್ರಿಲ್‌ನಲ್ಲಿ ಮುಂಬೈನ ಮೋದಿ ಸ್ಟ್ರೀಟ್ ಶಾಖೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇವರು, ನಂತರ ಗೊರೇಗಾಂವ್ (ಪಶ್ಚಿಮ )ದಹಿಸರ್, ಬೊರಿವಿಲಿ (ಪಶ್ಚಿಮ), ಬೆಂಗಳೂರು ಶಾಖೆಗಳು ಹಾಗೂ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು. ಬ್ಯಾಂಕಿನ ಏಳಿಗೆಗಾಗಿ ಶ್ರಮಿಸಿದ ಇವರು ಅತ್ಯಂತ ಶಿಸ್ತುಬದ್ಧ, ಕಾರ್ಯದಕ್ಷ ಹಾಗೂ ಗ್ರಾಹಕ ಸ್ನೇಹಿ ಅಧಿಕಾರಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.


ಇವರ ನಿವೃತ್ತಿಯ ಅಂಗವಾಗಿ ದಿನಾಂಕ 03/02/2026 ರಂದು ಅವರ ಸ್ವಗ್ರಹ ಗೊರೇಗಾಂವ್ ಪೂರ್ವ ಗೋಕುಲ್ಧಾಮ್ ನಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಅವರ ಆತ್ಮೀಯರಾದ ನವೀನ್ ಜೆ ಸುವರ್ಣ,ನರೇಶ್ ಟಿ. ಅಮೀನ್, ಸತೀಶ್ ಜೆ. ಬಂಗೇರ, ರೋಹಿತ್ ಜಿ. ಬಂಗೇರ, ತಾರಾನಾಥ್ ಎಸ್. ಅಮೀನ್ ಮತ್ತು ಉಮೇಶ್ ಜಿ. ಕೋಟ್ಯಾನ್ ಹಾಗೂ ಅಪಾರ ಹಿತೇಷಿಗಳ ಪರವಾಗಿ ಸುಧೀರ್ ಬಿ. ಸುವರ್ಣ ಅವರ ನಿಷ್ಠಾವಂತ ಸೇವೆಯನ್ನು ಗೌರವಿಸಿ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಭವ್ಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಮಮತಾ ಸುವರ್ಣ ಹಾಗೂ ಪುತ್ರ ಪರಿತೋಷ್ ಸುವರ್ಣ ಅವರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಸುಧೀರ್ ಬಿ. ಸುವರ್ಣ ಅವರಿಗೆ ಮುಂದಿನ ನಿವೃತ್ತ ಜೀವನವು ಸುಖ, ಶಾಂತಿ ಮತ್ತು ಸುದೀರ್ಘ ಆರೋಗ್ಯದಿಂದ ಕೂಡಿರಲಿ ಎಂದು ಅವರ ಹಿತೇಷಿಗಲ್ಲರ ಶುಭ ಹಾರೈಕೆ.



Related posts

ಭಾರತ್ ಬ್ಯಾಂಕ್ ಕಾಂದಿವಿಲಿ ಪೂರ್ವ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ: 49ನೇ ವಾರ್ಷಿಕ ಮಹಾಪೂಜೆ; ಶನೇಶ್ವರ ಪೂಜೆ

Mumbai News Desk

ಮುಂಬಯಿ ಕನ್ನಡ ಸಂಘದ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ ಕೋಟ್ಯಾನ್ ಆಯ್ಕೆ.

Mumbai News Desk

ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು,  ಮಹಾರಾಷ್ಟ್ರ ಘಟಕದ ರಜತ ಮಹೋತ್ಸವ ಸಂಭ್ರಮಾಚರಣೆಯ ಪತ್ರಿಕಾಗೋಷ್ಠಿ, 

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ವೈಭವಮಯ ನವರಾತ್ರಿ

Mumbai News Desk