
ಡೊಂಬಿವಲಿ: ಇಲ್ಲಿನ ಮಹಾತ್ಮ ಫುಲೆ ರಸ್ತೆಯಲ್ಲಿರುವ ಜಗಜ್ಯೋತಿ ಕಲಾವೃಂದದ (ರಿ.) ವತಿಯಿಂದ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 15ರ ಭಾನುವಾರ ಪಶ್ಚಿಮ ದೊಂಬಿವಲಿಯ ವಿವೇಕಾನಂದ ಶಾಲೆಯ ಸಮೀಪವಿರುವ ‘ಪಂಚಮ್’ ಸಹಕಾರಿ ಗೃಹನಿರ್ಮಾಣ ಸಂಘದ ಸಂಕೀರ್ಣದಲ್ಲಿರುವ ವೃಂದದ ಕಚೇರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಕಾರ್ಯಕ್ರಮದ ವಿವರ:
ಅಂದು ಮಧ್ಯಾಹ್ನ 4.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ಭಕ್ತಾದಿಗಳಿಂದ ಮತ್ತು ಕಲಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7.15ಕ್ಕೆ ಮಹಾಶಿವರಾತ್ರಿಯ ಮಂಗಳಾರತಿ ನೆರವೇರಲಿದ್ದು, ತದನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಈ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ವೃಂದದ ಎಲ್ಲಾ ಸದಸ್ಯರು, ಹಿತೈಷಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಗಜ್ಯೋತಿ ಕಲಾವೃಂದದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸ್ಥಳ: ಜಗಜ್ಯೋತಿ ಕಲಾವೃಂದ (ರಿ.),
ಪಂಚಮ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ,
ಮಹಾತ್ಮ ಫುಲೆ ರಸ್ತೆ, ಡೊಂಬಿವಲಿ (ಪಶ್ಚಿಮ) – 421 202.




