ವಸಾಯಿ ಪಶ್ಚಿಮ, ನವಯುಗ ನಗರ, ವಿಜಯಶ್ರೀ ಕೋ. ಹೌ. ಸೊಸೈಟಿಯ ತಳ ಮಹಡಿಯಲ್ಲಿ ಮಂದಿರವನ್ನು ಸ್ಥಾಪಿಸಿ, ಶ್ರೀ ಶನೀಶ್ವರನನ್ನು ಆರಾಧಿಸಿಕೊಂಡು ಬರುತ್ತಿರುವ ಶ್ರೀ ಶನಿಶ್ಚರ ಸೇವಾ ಸಮಿತಿ, ವಸಾಯಿ (ರಿ),ಇದರ ವತಿಯಿಂದ 27ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿಶ್ಚರ ಮಹಾಪೂಜೆಯು ಇದೇ ಬರುವ ತಾ. 14-02-2026ನೇ ಶನಿವಾರದಂದು, ನವಯುಗ ನಗರ, ದಿವಾನ್ ಮಾನ್ ತಲಾವಿನ ಹತ್ತಿರ, ವಸಾಯಿ (ಪಶ್ಚಿಮ) ಇಲ್ಲಿ ನಡೆಯಲಿದೆ.
ಆ ಪ್ರಯುಕ್ತ ಸದ್ಭಕ್ತರೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ತನು, ಮನ, ಧನದಿಂದ ಸಹಕರಿಸಿ ಈ ಸದರಿ ಪುಣ್ಯ ಸೇವೆಗಳಲ್ಲಿ ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ತೀರ್ಥಪ್ರಸಾದವನ್ನು ಸ್ವೀಕರಿಸಬೇಕಾಗಿ
ಜಯ ಎಮ್. ಶೆಟ್ಟಿ (ಸ್ಥಾಪಕ ಅಧ್ಯಕ್ಷರು), ಪಾಂಡು ಎಲ್. ಶೆಟ್ಟಿ (ಗೌ. ಅಧ್ಯಕ್ಷರು), ಕೆ. ಟಿ. ಬಂಗೇರ (ಅಧ್ಯಕ್ಷರು), ಉಮೇಶ್ ಎಮ್. ಕರ್ಕೇರ (ಗೌ. ಪ್ರ. ಕಾರ್ಯದರ್ಶಿ), ದಿನೇಶ್ ಜೆ. ಕರ್ಕೇರ (ಗೌ. ಕೋಶಾಧಿಕಾರಿ), ದಿನೇಶ್ ಭಂಡಾರಿ (ಉಪಾಧ್ಯಕ್ಷರು), ಪ್ರಭಾಕರ ಎನ್. ಬಂಗೇರ (ಉಪಾಧ್ಯಕ್ಷರು), ಕೆ. ಪಿ. ಶಾಮ (ಜೊತೆ ಕಾರ್ಯದರ್ಶಿ), ಶಂಕರ್ ಬಿಲ್ಲವ (ಜೊತೆ ಕೋಶಾಧಿಕಾರಿ), ಸುಧಾಕರ್ ಸುವರ್ಣ (ಆಂತರಿಕ ಲೆಕ್ಕ ಪರಿಶೋಧಕ), ಶಶಿ ಕರ್ಕೇರ (ಪ್ರಧಾನ ಅರ್ಚಕರು),ಸದಸ್ಯರುಗಳಾದ ಬಿ. ವಿಠ್ಠಲ್ ರೈ, ಸಂಜೀವ ಪೂಜಾರಿ, ಉಮೇಶ್ ಎಚ್. ಕರ್ಕೇರ, ಆನಂದ ಕುಂದರ್, ಸದ ಎಮ್. ಪೂಜಾರಿ, ಸುಧಾಕರ್ ಎನ್. ಬಂಗೇರ, ತಾರಾನಾಥ ಶೆಟ್ಟಿ, ದೇವೇಂದ್ರ ಸುರತ್ಕಲ್, ಶೇಖರ್ ಮೈಂದನ್, ಸುರೇಶ್ ಶೆಟ್ಟಿ, ಹರೀಶ್ ಶೆಟ್ಟಿ, ಚಂದ್ರಶೇಖರ್ ಎಮ್. ಕರ್ಕೇರ, ಲಕ್ಷ್ಮಣ್ ಅಂಚನ್, ತೇಜ್ ಪಾಲ್ ಕಿದಿಯೂರು, ಶ್ರೀನಿವಾಸ್ ಆಚಾರ್ಯ, ಪ್ರಕಾಶ್ ಶೆಟ್ಟಿ, ಉಮೇಶ್ ಮೂಲ್ಯ ವಿನಂತಿಸಿದ್ದಾರೆ.
ಗಣಹೋಮ ಮತ್ತು ಸತ್ಯನಾರಾಯಣ ಪೂಜೆ : ಕೆ. ಮುರಲೀಧರ್ ಆಚಾರ್ಯ, ಮೀರೋಡ್
ಕಾರ್ಯಕ್ರಮಗಳು :
ಬೆಳಿಗ್ಗೆ 6.00 ರಿಂದ ಬೆಳಿಗ್ಗೆ 7.30 ರ ವರೆಗೆ : ಗಣಹೋಮ
ಬೆಳಿಗ್ಗೆ 7.30 ರಿಂದ ಬೆಳಿಗ್ಗೆ 8.30 ರ ವರೆಗೆ : ನಾಗಾಭಿಷೇಕ
ಬೆಳಿಗ್ಗೆ 8.30 ರಿಂದ ಬೆಳಿಗ್ಗೆ 9.00ರ ವರೆಗೆ : ಶ್ರೀ ಹನುಮಾನ್ ಪೂಜೆ
ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.30ರ ವರೆಗೆ : ಶ್ರೀ ಸತ್ಯನಾರಾಯಣ ಮಹಾಪೂಜೆ
ಮಧ್ಯಾಹ್ನ 12.30 ರಿಂದ 1.00ರ ವರೆಗೆ : ಶ್ರೀ ಶನಿದೇವರ ಕಲಶ ಪ್ರತಿಷ್ಠೆ
ಮಧ್ಯಾಹ್ನ 01.00 ರಿಂದ ಸಾಯಂಕಾಲ 7.30 ವರೆಗೆ : ಶನಿ ಗ್ರಂಥ ಪಾರಾಯಣ (ಶ್ರೀ ಶನಿಶ್ಚರ ಪೂಜಾ ಸಮಿತಿ, ಮೌಲಾನ ಕಂಪೌಂಡ್, ಘಾಟ್ಕೋಪರ್)
ಸಾಯಂಕಾಲ 7.30 ರಿಂದ 8.30ರ ವರೆಗೆ : ಭಕ್ತಿ ಭಜನೆ
ರಾತ್ರಿ 8.30 ರಿಂದ : ಮಂಗಳಾರತಿ ಮತ್ತು ತೀರ್ಥಪ್ರಸಾದ ವಿತರಣೆ
ರಾತ್ರಿ 7.30 ರಿಂದ 11.30ರ ವರೆಗೆ : ಸಾರ್ವಜನಿಕ ಅನ್ನಸಂತರ್ಪಣೆ.




