31 C
Mumbai
March 6, 2026
Mumbai News Kannada
ಸುದ್ದಿ

ಜಾರಿಗೆ ಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ್ ಪೂಜಾರಿ ನಿಧನ





ಮುಂಡ್ಕೂರು ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ (60) ಫೆಬ್ರವರಿ 15 ರಂದು ನಿಧನ ಹೊಂದಿದರು.ಕಾಸರಗೋಡಿನಲ್ಲಿ‌ದೈವ ದರ್ಶನಕ್ಕೆಂದು ತೆರಳಿದ್ದ ಸಂದರ್ಭ ಹೃದಯಾಘಾತಕ್ಕೊಳಗಾದ ದಿವಾಕರ ಪೂಜಾರಿಯವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಫಲಕಾರಿಯಾಗದೆ ಮೃತಪಟ್ಟರು.ಮುಂಡ್ಕೂರಿನ ಜಾರಿಗೆಕಟ್ಟೆಯಲ್ಲಿ ಕೊರಗಜ್ಜ,ಕೊರಗರ ಪಂಜುರ್ಲಿ ಸಹಿತ ವಿವಿಧ ಪರಿವಾರ ಶಕ್ತಿಗಳ ಕೇಂದ್ರಕ್ಕೆ ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಿದ್ದು ಕ್ಷೇತ್ರದಲ್ಲಿ ನಿರಂತರ ಕೋಲ,ಅಗೇಲು ಸೇವೆಗಳು ನಡೆಯುತ್ತಿದ್ದವು.ಕ್ಷೇತ್ರದಲ್ಲಿ‌ ಕ್ರೈಸ್ತ,ಮುಸ್ಲಿಂ ಸಮಾಜದ ಬಂಧುಗಳೂ ಹರಕೆಯ ಕೋಲ‌ ಹಾಗೂ ಅಗೇಲು ಸೇವೆ ನೀಡುತ್ತಿದ್ದು ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರ ಕಾರಣಿಕ ಕ್ಷೇತ್ರವೆನಿಸಿತ್ತು. ಮೃತರು ಮುಂಡ್ಕೂರು ಪೊಸ್ರಾಲು ಬ್ರಹ್ಮ ಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷರಾಗಿದ್ದು ಇತ್ತೀಚೆಗೆ ಸಂಘದ ನೂತನ ಕಟ್ಟಡ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಮೃತರು ಪತ್ನಿ,ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ‌ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್,ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ, , ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಸಂತಾಪ ಸೂಚಿಸಿದ್ದಾರೆ.



Related posts

70ನೇ ಕನ್ನಡ ರಾಜ್ಯೋತ್ಸವ: ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

Mumbai News Desk

ಕಾಪು ಮೊಗವೀರ ಮಹಾಸಭಾ, ಮುಂಬಯಿ ಇದರ 84 ನೇ ವಾರ್ಷಿಕ ಮಹಾಸಭೆ

Mumbai News Desk

ಕಾಪು ತಾಲೂಕು ಪಂಚಾಯತ್ : ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆ.

Mumbai News Desk

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ * ಭಕ್ತವೃಂದದವರಿಂದ ಐದನೆಯ ವರ್ಷದ ಶ್ರೀ ದೇವೀ ಜಪಪಾರಾಯಣ ಅನುಷ್ಟಾನ ಸಂಪನ್ನ.

Mumbai News Desk

ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ನಿಧನ

Mumbai News Desk

ಸಂಘಟಕ, ಕಲಾ ಪೋಷಕ ರಾಜು ಮೆಂಡನ್ ವಂಡ್ಸೆ ಅವರಿಗೆ ಮಾತೃ ವಿಯೋಗ.

Mumbai News Desk