ಮುಂಬಯಿ (ಫೆ. 19): ದಹಿಸರ್ ಪೂರ್ವದ ರಾವಲ್‌ಪಾಡ ಗೋಕುಲ್ ನಗರ್‌ನಲ್ಲಿರುವ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ (ರಿ.) ಸಂಚಾಲಕತ್ವದ ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನದ 40ನೇ ವಾರ್ಷಿಕ ಮಹಾಪೂಜೆ, ಧಾರ್ಮಿಕ ಸಭೆ ಹಾಗೂ ಯಕ್ಷಗಾನ ಬಯಲಾಟವು ಫೆಬ್ರವರಿ 14 ಮತ್ತು 15 ರಂದು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಡೊಂಬಿವಲಿಯ ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ವಿಜಯ್ ಉಪಾಧ್ಯಾಯ ಅವರ ನೇತೃತ್ವದಲ್ಲಿ, ತೇಜಸ್ ಭಟ್ ಮತ್ತು ಪುರೋಹಿತರ ಸಹಯೋಗದೊಂದಿಗೆ ವಿವಿಧ ಪೂಜಾ ಕಾರ್ಯಗಳು ನಡೆದವು. ಗಣಹೋಮ, ಶ್ರೀ ಶನಿದೇವರ ನವಕಲಶ ಪ್ರಧಾನ ಹೋಮ, ಶನಿಶಾಂತಿ, ನಾಗದೇವರಿಗೆ ಪವಮಾನ ಕಲಶಾಭಿಷೇಕ, ಗುಳಿಗ ದೈವಕ್ಕೆ ಪಂಚ ಕಲಶಾಭಿಷೇಕ ಹಾಗೂ ಶ್ರೀದೇವಿಯ ಸನ್ನಿಧಾನದಲ್ಲಿ 25 ಕಲಶಾರಾಧನೆ ಮತ್ತು ಮಹಾಪೂಜೆ ನೆರವೇರಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಸ್ವರ್ಣಾಲಂಕಾರ ಸೇವೆ, ಪಲ್ಲ ಪೂಜೆ, ಭಜನೆ ಹಾಗೂ ಶನಿ ಗ್ರಂಥ ಪಾರಾಯಣ ಜರುಗಿತು.
ಕಿಶನ್ ಹೊಳ್ಳ ನೂಜಿಪಾಡಿ ಅವರ ನೇತೃತ್ವದಲ್ಲಿ ನಡೆದ ಬಲಿಮೂರ್ತಿ ಉತ್ಸವ ಮೆರವಣಿಗೆಯು ಭಕ್ತರ ಗಮನ ಸೆಳೆಯಿತು. ದಿನೇಶ್ ಕೋಟ್ಯಾನ್ ಬಳಗದ ಡೋಲು-ತಾಸೆ, ಚೆಂಡೆ, ಹುಲಿವೇಷ, ಕೊಂಬು-ಗೊಂಬೆ ಹಾಗೂ ಕುಣಿತ ಭಜನೆಯು ಮೆರವಣಿಗೆಗೆ ಕಳೆ ತಂದವು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಲ್ಲಿಕಾ ಶೇಖರ್ ಪೂಜಾರಿ, ವಿಶಾಲ ಸಂತೋಷ್ ಪೂಜಾರಿ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ ಸಾಂತಾಕ್ರೋಸ್‌ನ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯಿಂದ ‘ಶ್ರೀ ದೇವಿ ಮಹಾತ್ಮೆ’ ತುಳು ಯಕ್ಷಗಾನ ಪ್ರದರ್ಶನಗೊಂಡಿತು.

ಕಾರ್ಯಕ್ರಮದ ಮಧ್ಯಾಂತರದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಸಂತೋಷ್ ಪೂಜಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಹಿತೈಷಿ ಜಯ ಪೂಜಾರಿ ಹಾಗೂ ಸದಸ್ಯರಾದ ಪದ್ಮಾವತಿ ಸದಾಶಿವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಧನಸಂಗ್ರಹದಲ್ಲಿ ವಿಶೇಷ ಸಹಕಾರ ನೀಡಿದ ಅಮಿತಾ ಶೆಟ್ಟಿ, ಸುರೇಶ್ ಇರ್ವತ್ತೂರು, ಶೋಭಾ ಪಿ. ಕೋಟಿಯನ್ ಮತ್ತು ಶೇಖರ್ ಪಿ. ಶೆಟ್ಟಿ ಅವರನ್ನು ಗೌರವಿಸಲಾಯಿತು.

ಅಧ್ಯಕ್ಷ ಸಂತೋಷ್ ಪೂಜಾರಿ ಮಾತನಾಡಿ, “ಈ ಕ್ಷೇತ್ರವು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಪುಣ್ಯಕ್ಷೇತ್ರವಾಗಿ ಹೊರಹೊಮ್ಮಿದೆ. ದಾನಿಗಳ ಮತ್ತು ಭಕ್ತರ ಸಹಕಾರದಿಂದಾಗಿ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಗಳು ವರ್ಷಪೂರ್ತಿ ನಡೆಯುತ್ತಿವೆ,” ಎಂದರು. ಗೌರವ ಪ್ರಧಾನ ಕಾರ್ಯದರ್ಶಿ ಜಯರಾಮ್ ಎನ್. ಮೆಂಡನ್ ದೇವಸ್ಥಾನದ 40 ವರ್ಷಗಳ ಹಾದಿಯ ಕುರಿತು ವಿವರಿಸಿದರು. ಲಕ್ಷ್ಮಣ್ ಎಂ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಗೌರವ ಕೋಶಾಧಿಕಾರಿ ದೀಪಕ್ ಕೆ. ಪೂಜಾರಿ, ಜೊತೆ ಕಾರ್ಯದರ್ಶಿ ಉಷಾ ದೀಪಕ್ ಪೂಜಾರಿ, ಜೊತೆ ಕೋಶಾಧಿಕಾರಿಗಳಾದ ಅಡ್ವಕೇಟ್ ಸೌಮ್ಯ ಎಸ್. ಶೆಟ್ಟಿ ಮತ್ತು ಪ್ರಜ್ಞಾ ಪಿ. ಕೋಟಿಯನ್, ಆಂತರಿಕ ಲೆಕ್ಕ ಪರಿಶೋಧಕ ಲಕ್ಷ್ಮಣ್ ಎಂ. ಪೂಜಾರಿ ಶ್ರಮಿಸಿದರು.
ಪ್ರಕಾಶ್ ವಿ. ಅಮೀನ್ (ಭುವಜಿ), ಜಗದೀಶ್ ಎನ್. ಶೆಟ್ಟಿ (ಸಹಾಯಕ ಭುವಜಿ) ಹಾಗೂ ಸಮಿತಿಯ ಸದಸ್ಯರಾದ ಜಯ ಕೆ. ಪೂಜಾರಿ, ಸುಂದರ್ ಎಸ್. ಪೂಜಾರಿ, ಚೆನ್ನಪ್ಪ ಎನ್. ಪೂಜಾರಿ, ಗಣೇಶ್ ಬಿ. ಸಾಲಿಯಾನ್, ಕರುಣಾಕರ್ ಎಂ. ಅಮೀನ್, ಸಂತೋಷ್ ಕೆ. ಪೂಜಾರಿ, ರವಿ ಎಂ. ಅಮೀನ್, ಉಮೇಶ್ ಎಸ್. ಅಮೀನ್, ಸುರೇಶ್ ಬಿ. ಇರ್ವತ್ತೂರು, ಶ್ಯಾಮ್ ನಾಯಕ್, ಮೋಹನ್ ಪಿ. ಸುವರ್ಣ, ಜಯ ಜಿ. ಪೂಜಾರಿ, ದೇವಕಿ ಸಿ. ಪೂಜಾರಿ, ಪದ್ಮಾವತಿ ಎಸ್. ಶೆಟ್ಟಿ, ರಾಜೀವಿ ಕೆ. ಪೂಜಾರಿ, ವಿಮಲಾ ಎಸ್. ಕೋಟ್ಯಾನ್, ಸುಮತಿ ಜಿ. ಮೂಲ್ಯ, ವೀಣಾ ಸಿ. ಪೂಜಾರಿ, ಪ್ರಭಾತ ಆರ್. ಹೆಗಡೆ, ಶೋಭಾ ಪಿ. ಕೋಟಿಯನ್, ಸುನಿತಾ ಎ. ಸುವರ್ಣ, ಮಲ್ಲಿಕಾ ಎಸ್. ಪೂಜಾರಿ, ಅಂಕಿತಾ ವೈ. ಸಾಲಿಯಾನ್, ಶಶಿಕಲಾ ಎಸ್. ಕರ್ಕೇರ, ಸವಿತಾ ಎಸ್. ಕುಂದರ್ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.




