
ಡೊಂಬಿವಲಿ: ಇಲ್ಲಿನ ಬಿಲ್ಲವರ ಅಸೋಸಿಯೇಶನ್ ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯ ವತಿಯಿಂದ ಫೆಬ್ರವರಿ 28, ಶನಿವಾರದಂದು ಅನಂತ ಸ್ಮೃತಿ ಕಟ್ಟಡದ ಸ್ಥಳೀಯ ಕಚೇರಿ ಸಂಕೀರ್ಣದಲ್ಲಿ ‘ಸಮೂಹಿಕ ಶ್ರೀ ಶನೀಶ್ವರ ಮಹಾಪೂಜೆ’ ಮತ್ತು ‘ಶ್ರೀ ಶನೀಶ್ವರ ಮಹಾತ್ಮೆ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ವಿವರ:
ಶನಿವಾರ ಬೆಳಿಗ್ಗೆ 11:30ಕ್ಕೆ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಪ್ರಧಾನ ಅರ್ಚಕ ಸತೀಶ್ ಕೋಟ್ಯಾನ್ ಅವರಿಂದ ಕಲಶ ಪ್ರತಿಷ್ಠಾಪನೆ ನೆರವೇರಲಿದೆ. ಮಧ್ಯಾಹ್ನ 12:00 ಗಂಟೆಗೆ ದೀಪ ಪ್ರಜ್ವಲನೆ ಹಾಗೂ 12:15ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1:30ರಿಂದ ‘ಶ್ರೀ ಶನೀಶ್ವರ ಮಹಾತ್ಮೆ’ ಯಕ್ಷಗಾನ ತಾಳಮದ್ದಳೆ ಜರುಗಲಿದ್ದು, ರಾತ್ರಿ 7:30ಕ್ಕೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆ ನಡೆಯಲಿದೆ.
ಬಿಲ್ಲವರ ಅಸೋಸಿಯೇಶನ್ ಮುಂಬೈ ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಎಲ್. ವಿ. ಅಮೀನ್ (ಗೌರವ ಅಧ್ಯಕ್ಷರು), ಹರೀಶ್ ಜಿ. ಅಮೀನ್ (ಅಧ್ಯಕ್ಷರು), ಹರೀಶ್ ಜಿ. ಸಾಲ್ಯಾನ್ (ಗೌರವ ಪ್ರಧಾನ ಕಾರ್ಯದರ್ಶಿ), ರವಿ ಎಸ್. ಸನಿಲ್ (ಗೌರವ ಪ್ರಧಾನ ಕೋಶಾಧಿಕಾರಿ), ಶಕುಂತಲಾ ಕೆ. ಕೋಟ್ಯಾನ್ (ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರು), ಧರ್ಮಪಾಲ ಜಿ. ಅಂಚನ್, ಸದಾಶಿವ ವೈ. ಕೋಟ್ಯಾನ್, ಪುರುಷೋತ್ತಮ ಎಸ್. ಕೋಟ್ಯಾನ್ ಹಾಗೂ ನವೀನ್ ಎಲ್. ಬಂಗೇರ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಸಮೂಹಿಕ ಶನಿ ಪೂಜೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಭಕ್ತರು ₹300 ಸೇವಾ ಶುಲ್ಕದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು.
ಡೊಂಬಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ್ ಬಿ. ಅಮೀನ್, ಗೌರವ ಅಧ್ಯಕ್ಷ ಮಂಜಪ್ಪ ಕೆ. ಪೂಜಾರಿ, ಉಪಾಧ್ಯಕ್ಷರುಗಳಾದ ಚಂದ್ರಹಾಸ ಎಸ್. ಪಾಲನ್ ಮತ್ತು ಸಚಿನ್ ಜಿ. ಪೂಜಾರಿ, ಗೌರವ ಕಾರ್ಯದರ್ಶಿ ಜೆ. ಜೆ. ಕೋಟ್ಯಾನ್ ಹಾಗೂ ಗೌರವ ಕೋಶಾಧಿಕಾರಿ ಆನಂದ್ ಡಿ. ಪೂಜಾರಿ, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರು ಈ ಸಮಾರಂಭಕ್ಕೆ ಭಕ್ತಾಭಿಮಾನಿಗಳನ್ನು ಹಾರ್ದಿಕವಾಗಿ ಆಮಂತ್ರಿಸಿದ್ದಾರೆ..




