30.5 C
Mumbai
June 8, 2026
Mumbai News Kannada
ಪ್ರಕಟಣೆ

ವಿದ್ಯಾವಿಹಾರ್‌ನಲ್ಲಿ ನಾಳೆ ‘ಶ್ರೀ ರಾಮ ಕಥಾ ಹೃದಯಂ’ ತಾಳಮದ್ದಳೆ





ಮುಂಬಯಿ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ, ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ಶ್ರೀ ರಾಮ ಕಥಾ ಹೃದಯಂ’ ತಾಳಮದ್ದಳೆ ಸರಣಿಯ ಎರಡನೇ ಭಾಗವು ಮಾರ್ಚ್ 1ರಂದು ಜರುಗಲಿದೆ.

​ವಿದ್ಯಾವಿಹಾರ್‌ನ ಗಾಮ್‌ದೇವಿ ರಸ್ತೆಯಲ್ಲಿರುವ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ದೇವಸ್ಥಾನದಲ್ಲಿ ಅಪರಾಹ್ನ 3 ಗಂಟೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಭು ರಾಮಚಂದ್ರನ ಅವತಾರದಿಂದ ನಿರ್ಯಾಣದವರೆಗಿನ ಸಂಪೂರ್ಣ ರಾಮ ಚರಿತ್ರೆಯನ್ನು 24 ಕಂತುಗಳಲ್ಲಿ ಪ್ರಸ್ತುತಪಡಿಸುವ ಈ ಸರಣಿಯ ಎರಡನೇ ಭಾಗದಲ್ಲಿ ‘ಯಜ್ಞ ಸಂರಕ್ಷಣೆ, ಸೀತಾ ಕಲ್ಯಾಣ ಹಾಗೂ ಭಾರ್ಗವ ಗರ್ವಭಂಗ’ ಪ್ರಸಂಗಗಳು ಮೇಳೈಸಲಿವೆ.

​ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ ಹಾಗೂ ಆಡಳಿತ ಮುಕ್ತೇಸರ ಹರಿದಾಸ ಗೋಪಾಲ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಯೋಜಕರಾದ ವಾಸು ಶೆಟ್ಟಿ ಮಾರ್ನಾಡ್ ಮತ್ತು ಸುರೇಶ್ ನಂದ್ರೋಳ್ಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.



Related posts

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿಮೇ 10ರಂದು ಬಾಲಭೋಜನಾಲಯ ಮತ್ತು ಧ್ಯಾನ ಮಂದಿರ ಲೋಕಾರ್ಪಣೆ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿ, ಮಾ 16 ರಂದು ವಿದ್ಯಾರ್ಥಿ ವೇತನ, ವಿಕಲಚೇತನ ಹಾಗೂ ವಿಧವಾ ವೇತನಗಳಿಗೆ ಅರ್ಜಿಗಳ ಆಹ್ವಾನ,

Mumbai News Desk

ಗೀತಾ ಮಂದಿರ ಸೇವಾ ಸಮಿತಿ ಹೆಜಮಾಡಿ : ನಾಳೆ (ಅ. 17) 7ನೇ ವರ್ಷದ ಕಥಾ ಮಂಗಳೋತ್ಸವ

Mumbai News Desk

ಮಲಾಡ್   ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆ ಪೆ 23 ರಂದು 12ನೇ ವಾರ್ಷಿಕ ಮಹಾಪೂಜೆ

Mumbai News Desk

ನಡಿಕುದ್ರು ಶ್ರೀ ಜಾರಂದಾಯ ದೈವಸ್ಥಾನ: ಫೆ. 21ಕ್ಕೆ ಭಜನಾ ಮಂಗಳೋತ್ಸವ; ಫೆ. 28ಕ್ಕೆ ಧರ್ಮ ದೈವದ ನೇಮೋತ್ಸವ

Mumbai News Desk

 ನ 29,30 ಮತ್ತು ಡಿ 1 ಸತತ ಮೂರು ದಿವಸ  ಮಕ್ಕಳ ಕಲರವದಲ್ಲಿ ನಾಟಕೋತ್ಸವ, ಯಕ್ಷಗಾನೋತ್ಸವ, ವಾರ್ಷಿಕೋತ್ಸವಗಳ ವಿಜೃಂಭಣೆಯ ಮಹಾಮೇಳ.

Mumbai News Desk