ಮಂಗಳೂರಿನ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಸಿ-105, ಸುವರ್ಣ ರೆಸಿಡೆನ್ಸಿ, ಮಾರಿಕಾಂಬ ದೇವಸ್ಥಾನದ ರಸ್ತೆ, ತಾರೆತೋಟ, ಮಂಗಳೂರು – 5 ಇಲ್ಲಿ 4ನೇ ವರ್ಷದ “ಮೂಲತ್ವ ದಸರಾ ಮಹೋತ್ಸವ”ವು ದಿನಾಂಕ 11-10-2026 ರಿಂದ 21-10-2026 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಶ್ರೀ ಪ್ರಕಾಶ್ ಮೂಲತ್ವ ಹಾಗೂ ಸರ್ವಸದಸ್ಯರು ಈ ಶುಭ ಸಮಾರಂಭಕ್ಕೆ ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ. ಮಹೋತ್ಸವದ ಪ್ರತಿದಿನ ರಾತ್ರಿ 8.00 ಗಂಟೆಯಿಂದ ಅನ್ನಸಂತರ್ಪಣೆ ಸೇವೆಯು ನೆರವೇರಲಿದೆ.
ದಿನಾಂಕ 11-10-2026 ಆದಿತ್ಯವಾರ ಬೆಳಿಗ್ಗೆ 6.00 ಗಂಟೆಗೆ ಶ್ರೀ ನವಾರ್ಣ ಮಂತ್ರ ಜಪ ಹಾಗೂ ಬೆಳಿಗ್ಗೆ 7.00 ಗಂಟೆಗೆ ತೆನೆ ಮುಂಜಾವುದು ನಡೆಯಲಿದೆ. ಶ್ರೀ ರವಿ ತಂತ್ರಿ ಆಯುರ್ವೇದೀಅ ಇವರ ಪೌರೋಹಿತ್ಯದಲ್ಲಿ ಲೋಕಕಲ್ಯಾಣಕ್ಕಾಗಿ ಶ್ರೀ ದೇವಿ ಪಾರಾಯಣ ಸಂಜೆ 6.00 ರಿಂದ 7.30 ರವರೆಗೆ ನೆರವೇರಲಿದೆ. ಇದೇ ವೇಳೆ ಸಂಜೆ 6.00 ರಿಂದ 7.30 ರವರೆಗೆ ಶ್ರೀ ರಾಮ ಭಜನಾ ಮಂಡಳಿ, ಮುಲ್ಕಿ ಇವರಿಂದ ಭಜನಾ ಸಂಕೀರ್ತನೆ ಜರುಗಲಿದ್ದು, ಶ್ರೀ ಪ್ರಕಾಶ್ ಮೂಲತ್ವ ಮತ್ತು ಕುಟುಂಬಸ್ಥರು ಸೇವೆ ಸಲ್ಲಿಸಲಿದ್ದಾರೆ.
ದಿನಾಂಕ 12-10-2026 ಸೋಮವಾರ ಸಂಜೆ 6.00 ರಿಂದ 7.30 ರವರೆಗೆ ಶ್ರೀ ರಾಮ ಭಜನಾ ಮಂಡಳಿ, ಮಿತ್ರಪಟ್ನ, ಮುಲ್ಕಿ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಶ್ರೀಮತಿ ಜಯಶ್ರೀ ಸಂತೋಷ್ ಸೇವೆ ಸಲ್ಲಿಸಲಿದ್ದಾರೆ.
ದಿನಾಂಕ 13-10-2026 ಮಂಗಳವಾರ ಸಂಜೆ 6.00 ರಿಂದ 7.30 ರವರೆಗೆ ಶ್ರೀ ನಾರಾಯಣ ಗುರು ಭಜನಾ ವೃಂದ, ಬಾಬುಗುಡ್ಡ ಮಂಗಳೂರು ಇವರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಶ್ರೀ ಮನೀಶ್ ಮತ್ತು ಕುಟುಂಬಸ್ಥರು ಸೇವೆ ಸಲ್ಲಿಸಲಿದ್ದಾರೆ.
ದಿನಾಂಕ 14-10-2026 ಬುಧವಾರ ಶ್ರೀ ರವಿ ತಂತ್ರಿ ಆಯುರ್ವೇದೀಅ ಇವರ ಪೌರೋಹಿತ್ಯದಲ್ಲಿ ಲೋಕಕಲ್ಯಾಣಕ್ಕಾಗಿ ಶ್ರೀ ಲಲಿತ ಸಹಸ್ರನಾಮ ಜರುಗಲಿದೆ. ಸಂಜೆ 6.00 ರಿಂದ 7.30 ರವರೆಗೆ ಶ್ರೀ ಶಿವಶಕ್ತಿ ಭಜನಾ ವೃಂದ, ಕಾವೂರು ಇವರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಶ್ರೀ ರಾಮ್ ಪ್ರಸಾದ್ ಮತ್ತು ಕುಟುಂಬಸ್ಥರು ಸೇವೆ ಸಲ್ಲಿಸಲಿದ್ದಾರೆ.
ದಿನಾಂಕ 15-10-2026 ಗುರುವಾರ ಸಂಜೆ 6.00 ರಿಂದ 7.30 ರವರೆಗೆ ಶ್ರೀ ಬಾಲಮುರಿ ಸಿದ್ಧಿ ವಿನಾಯಕ ಭಜನಾ ಮಂಡಳಿ, ಜಜ್ಜಿನಕಟ್ಟೆ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಶ್ರೀ ನವೀನ್ ಕುಮಾರ್ ಗುಳೇಬೆಟ್ಟು ಕಮ್ಮಜೆ ಮತ್ತು ಕುಟುಂಬಸ್ಥರು ಸೇವೆ ಸಲ್ಲಿಸಲಿದ್ದಾರೆ.
ದಿನಾಂಕ 16-10-2026 ಶುಕ್ರವಾರ ಸಂಜೆ 6.00 ರಿಂದ 7.30 ರವರೆಗೆ ಶ್ರೀ ಕಾಲಭೈರವ ಭಜನಾ ಮಂಡಳಿ, ಮಂಗಳೂರು ಇವರಿಂದ ಭಜನಾ ಸಂಕೀರ್ತನೆ ಜರುಗಲಿದ್ದು, ಶ್ರೀ ಪ್ರಶಾಂತ್ ರೈ ಸೇವೆ ಸಲ್ಲಿಸಲಿದ್ದಾರೆ.
ದಿನಾಂಕ 17-10-2026 ಶನಿವಾರ ಸಂಜೆ 6.00 ರಿಂದ 7.30 ರವರೆಗೆ ಶ್ರೀ ಆದಿಲಕ್ಷ್ಮಿ ಭಜನಾ ಮಂಡಳಿ, ಕಪ್ಪಿನಗರ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಶ್ರೀಮತಿ ಅಕ್ಷಿಮಾ ಸುಶೀಲ್ ಚಂದ್ರ ಮಂಚಿ ಸೇವೆ ಸಲ್ಲಿಸಲಿದ್ದಾರೆ.
ದಿನಾಂಕ 18-10-2026 ಆದಿತ್ಯವಾರ ಸಂಜೆ 6.00 ರಿಂದ 7.30 ರವರೆಗೆ ಶ್ರೀ ಸದ್ಗತಿ ಭಜನಾ ಮಂಡಳಿ, ಪದವಿನಂಗಡಿ ಇವರಿಂದ ಭಜನಾ ಸಂಕೀರ್ತನೆ ಜರುಗಲಿದ್ದು, ಶ್ರೀ ಮಹೇಶ್ ಅಮೀನ್ ಮತ್ತು ಕುಟುಂಬಸ್ಥರು ಸೇವೆ ಸಲ್ಲಿಸಲಿದ್ದಾರೆ.
ದಿನಾಂಕ 19-10-2026 ಸೋಮವಾರ ಸಂಜೆ 6.00 ರಿಂದ 7.30 ರವರೆಗೆ ಮೂಲತ್ವ ಕುಟುಂಬಸ್ಥರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಶ್ರೀಮತಿ ಉಷಾ ಶೆಟ್ಟಿ ಮತ್ತು ಕುಟುಂಬಸ್ಥರು ಸೇವೆ ಸಲ್ಲಿಸಲಿದ್ದಾರೆ.
ದಿನಾಂಕ 20-10-2026 ಮಂಗಳವಾರ ಸಂಜೆ 6.00 ರಿಂದ 7.30 ರವರೆಗೆ ಶ್ರೀ ಶೇಷಶಯನ ಉಣಿತ ಭಜನಾ ಮಂಡಳಿ, ಬೈಕಂಪಾಡಿ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಶ್ರೀಮತಿ ಶ್ರೇಣಿ ಮತ್ತು ಪ್ರೇಮ್ ಸೇವೆ ಸಲ್ಲಿಸಲಿದ್ದಾರೆ.
ದಿನಾಂಕ 21-10-2026 ಬುಧವಾರ ಬೆಳಿಗ್ಗೆ 9.00 ರಿಂದ ಪುಷ್ಪಾರ್ಚನೆ ಹಾಗೂ ಕುಂಕುಮಾರ್ಚನೆ ನಡೆಯಲಿದೆ. ಬೆಳಿಗ್ಗೆ 11.00 ರಿಂದ 12.30 ರವರೆಗೆ ಶ್ರೀ ಸಜೀ ಭಜನಾ ತಂಡ, ಮಂಗಳೂರು ಇವರಿಂದ ಕಾರ್ಯಕ್ರಮ ಜರುಗಲಿದ್ದು, ಮೂಲತ್ವ ಕುಟುಂಬಸ್ಥರಿಂದ ಸೇವೆ ಸಲ್ಲಿಕೆಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಫೋನ್ ಸಂಖ್ಯೆ 9036478093 ಅನ್ನು ಸಂಪರ್ಕಿಸಬಹುದು.



