35 C
Mumbai
May 11, 2026
Mumbai News Kannada
ಪ್ರಕಟಣೆ

ಮೇ 12 :ರವಿನಾಥ್ ಶೆಟ್ಟಿ ತೋನ್ಸೆ ನೇತೃತ್ವದಲ್ಲಿ ಗುಜರಾತ್ ಭರೂಚ್ ಶ್ರೀ ಗುಮನ್ ದೇವ್ ಮಂದಿರದಲ್ಲಿ ಶ್ರೀ ಬಾಲಾಜಿ ವೆಂಕಟೇಶ್ವರ ಸ್ವಾಮಿ ಪ್ರಾಣಪ್ರತಿಷ್ಠೆ , ಬ್ರಹ್ಮಕಲಶೋತ್ಸವ , ಶ್ರೀನಿವಾಸ ಕಲ್ಯಾಣ. 





 

ಗುಜರಾತ್‌ನ ಭರೂಚ್ ಜಿಲ್ಲೆಯ ಝಗಾಡಿಯಾ ಬಳಿ ಇರುವ ಶ್ರೀ ಗುಮನ್ ದೇವ್ ಮಂದಿರವು ಅತ್ಯಂತ ಪ್ರಸಿದ್ಧವಾದ ದೇವಸ್ಥಾನವಾಗಿದೆ.  ಗುಜರಾತ್‌ನ ಭರೂಚ್‌ನಿಂದ ಝಗಾಡಿಯಾಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಈ ದೇವಸ್ಥಾನವಿದೆ. ಈ ದೇವಾಲಯವು ಸುಮಾರು 450 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಗುಮಾನ್ ಸಿಂಗ್ ಎಂಬ ಉದ್ಯಮಿಯೊಬ್ಬರನ್ನು ಹನುಮಂತನು ಅಪಾಯದಿಂದ ಪಾರು ಮಾಡಿದ ನಂತರ ಅವರು ಈ ದೇವಾಲಯವನ್ನು ನಿರ್ಮಿಸಿದರು ಎಂಬ ಪ್ರತೀತಿಯಿದೆ. ಇಲ್ಲಿನ ದೈವಿಕ ಶಕ್ತಿಯ ಬಗ್ಗೆ ಭಕ್ತರಿಗೆ ಅಪಾರ ನಂಬಿಕೆಯಿದ್ದು, ದೇಶಾದ್ಯಂತದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ದೇವಾಲಯವು ಶಾಂತಿಯುತವಾಗಿದ್ದು, ಧ್ಯಾನಕ್ಕೆ ಸೂಕ್ತವಾಗಿದೆ. ಪಕ್ಕದ ಕಟ್ಟಡದಲ್ಲಿ ರಾಮ ದೇವಾಲಯವೂ ಇದೆ, ಅಲ್ಲಿ ನಿರಂತರವಾಗಿ ರಾಮನಾಮ ಜಪ ನಡೆಯುತ್ತದೆ.  ಶ್ರಾವಣ ಮಾಸದ ಪ್ರತಿ ಶನಿವಾರದಂದು ಇಲ್ಲಿ ವಿಶೇಷ ಜಾತ್ರೆ ನಡೆಯುತ್ತದೆ. ಈ ಸಮಯದಲ್ಲಿ ಅನೇಕ ಭಕ್ತರು ಪಾದಯಾತ್ರೆ ಮೂಲಕ ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ.

ಭರೂಚ್ ಶ್ರೀ ಗುಮನ್ ದೇವ್ ಮಂದಿರದಲ್ಲಿ ಭಗವಾನ್ ಶ್ರೀ ಬಾಲಾಜಿ ವೆಂಕಟೇಶ್ವರ ಸ್ವಾಮಿ ಪ್ರಾಣಪ್ರತಿಷ್ಠೆ / ಬ್ರಹ್ಮಕಲಶೋತ್ಸವ  ಭಗವಾನ್ ಶ್ರೀ ವೇಣುಗೋಪಾಲ ಕೃಷ್ಣ ಶ್ರೀಮದ್ ಭಾಗವತ ಸಪ್ತಾಹ, ಸಂಪೂರ್ಣ ರಾಮಾಯಣ ನೃತ್ಯರೂಪಕಲಾ, ಶ್ರೀ ತಿರುಪತಿ ಬಾಲಾಜಿ ವಿವಾಹ ಮಹೋತ್ಸವ  ನಿಮಿತ್ತ ಈಗಾಗಲೇ ಮೇ. 6 ರಿಂದ  ಅಂಕಲೇಶ್ವರದ ಖ್ಯಾತ ಉದ್ಯಮಿ ರವಿನಾಥ್ ಶೆಟ್ಟಿ ತೋನ್ಸೆ  ಮತ್ತು ಪರಿವಾರ ಮತ್ತು ಗುಮನ್ ದೇವ್ ಪೀಠಾದೀಶರಾದ ಮಹಂತ್ ಶ್ರೀ ಮನಮೋಹನ್ ದಾಸ್ ಜೀ ಇವರ ನೇತೃತ್ವದಲ್ಲಿ ದೇವೀ ದಾಮೋದರ ದಾಸ್ ಜೀ ದವೆ, ಶ್ರೀಮತಿ ಲಕ್ಷ್ಮೀ ವಿಶ್ವನಾಥ ಶೆಟ್ಟಿ ಮತ್ತು ಶ್ರೀಮತಿ ರಾಮ್ ರತಿ ಬಾಯಿ ಮಖನ್ ಲಾಲ್ ಜೀ ಹರ್ದೇನಿಯಾ ಇವರ ಶುಭಾಶ್ರೀರ್ವಾದದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಮೇ 11 ಬೆಳಗ್ಗೆ 8 ರಿಂದ ತತ್ವ ಹವನ, ಮಹಾವಿಷ್ಣು ಯಾಗ, ಕಳಸ ಅಭಿಷೇಕ, ಮತ್ತು ಪ್ರಸನ್ನ ಪೂಜೆ, ಅಪರಾಹ್ನ 3 ರಿಂದ 5 ತನಕ ಮಂಡಲ ಪೂಜೆ, ಕಳಸಹಾರಾಧನೆ ಬ್ರಹ್ಮಕಲಶ ಅಧಿವಾಸ, ಅಧಿವಾಸ ಹವನ, ರಾತ್ರಿ 8 ರಿಂದ ಲಾತೂರಿ ಲಾತ್ ಅವರಿಂದ ಹಾಸ್ಯ ಕಲಾಕಾರ್ ಕಾರ್ಯಕ್ರಮ ನಡೆಯಲಿದೆ. ಮೇ 12 ರಂದು ಬೆಳಿಗ್ಗೆ 9 ರಿದ ಕಲಶಾಭಿಷೇಕದ ಆರಂಭ, ಬೆಳಗ್ಗೆ 10 ರಿಂದ ಬ್ರಹ್ಮಕಲಶಾಭಿಷೇಕ ತಿರುಪತಿ ಬಾಲಾಜಿಯಲ್ಲಿ ಗೋಪಾಲಕೃಷ್ಣ ಮತ್ತು ನಾಗದೇವತಾ ಕಲಾಶಾಭಿಷೇಕ ಪ್ರಸನ್ನ ಪೂಜೆ, ಮಧ್ಯಾಹ್ನ 1 ರಿಂದ ಮಹಾಪ್ರಸಾದ ವಿತರಣೆ. ಅಂದು ಅಪರಾಹ್ನ 3 ರಿಂದ ಶ್ರೀ ಮಹಂತ್ ಶ್ರೀ ಮತ್ತು ಸಾಧು ಸಂತರ ಆಶೀರ್ವಚನ, ಸಂಜೆ 4ರಿಂದ ಶ್ರೀಮದ್ ಭಗವತ್ ಕಥಾ ಸಮಾಪನ. ಸಂಜೆ 6 ರಿಣ್ದ ಅದ್ದೂರಿಯ ಶ್ರೀನಿವಾಸ ಕಲ್ಯಾಣೋತ್ಸವ (ಶ್ರೀ ತಿರುಪತಿ ಬಾಲಾಜಿ ವಿವಾಹ ಮಹೋತ್ಸವ), ಸಂಜೆ 7.45 ಮಹಾಪ್ರಸಾದ ವಿತರಣೆ ನಡೆಯಲಿದೆ.

ಭರೂಚ್ ಮುಖ್ಯವಾಗಿ ಗುಜರಾತ್‌ನಲ್ಲಿ ಮೊದಲ ಬಾರಿಗೆ ಇಂತಹ ಮಹತ್ವದ ಧಾರ್ಮಿಕ ಕಾರ್ಯಕ್ರಮವನ್ನು ತಿರುಮಲ ತಿರುಪತಿ ದೇವಸ್ಥಾನಗಳ ಪ್ರತಿಷ್ಠಿತ ಪುರೋಹಿತರು ಮತ್ತು ವೈದಿಕ ವಿದ್ವಾಂಸರ ಮಾರ್ಗದರ್ಶನದಲ್ಲಿ ನೆರವೇರಿಸಲಾಗುವುದು. ಈ ಎಲ್ಲಾ ಕಾರ್ಯಕ್ರಮಕ್ಕೆ ಸುಮಾರು 50 ಮಂದಿ ಸಂತರನ್ನು ಆಹ್ವಾನಿಸಲಾಗಿದೆ. ಭರೂಚ್ ಪರಿಸರದ ನೂರಾರು ರಾಜಕೀಯ ಧುರೀಣರು, ಉದ್ಯಮಿಗಳು, ಸಮಾಜ ಸೇವಕರು, ಗಣ್ಯರು ಹಾಗೂ ಧಾರ್ಮಿಕ ಮುಂದಾಳುಗಳು ಬಾಗವಹಿಸಲಿದ್ದಾರೆ. 

ಬ್ರಹ್ಮಕಲಶೋತ್ಸವ ಮತ್ತು ಇತರ ಪವಿತ್ರ ಆಚರಣೆಗಳ ಮೊದಲು ಪ್ರಾಣ ಪ್ರತಿಷ್ಠೆಯನ್ನು ಗುರು ಶ್ರೀ ರಾಮಲಕ್ಷ್ಮಣ ದಾಸ್ ಜಿಯವರ  ಆಶೀರ್ವಾದದೊಂದಿಗೆ, ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ್ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆಸಲಾಗುವುದು. ಶ್ರೀನಿವಾಸ ಕಲ್ಯಾಣೋತ್ಸವವನ್ನು ತಿರುಪತಿಯ ಅರ್ಚಕ ಡಾ. ಎನ್. ಕೆ. ವಿಷ್ಣುವರ್ಧನ್ ಅವರು ನೆರವೇರಿಸಲಿದ್ದಾರೆ.

ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ಕೃಪೆಗ ಪಾತ್ರರಾಗಬೇಕಾಗಿ  ರವಿನಾಥ್ ಶೆಟ್ಟಿ ತೋನ್ಸೆ  ಮತ್ತು ಪರಿವಾರ ಹಾಗೂ ಭರುಚ್ ಶ್ರೀ ಗುಮನ್ ದೇವ್ ಮಂದಿರ ಆಡಳಿತ ಸಮಿತಿ ವಿನಂತಿಸಿದೆ.


ಧಾರ್ಮಿಕ ಕಾರ್ಯದ ನೇತೃತ್ವವನ್ನು ಉದ್ಯಮಿ ರವಿನಾಥ್ ಶೆಟ್ಟಿ ತೋನ್ಸೆ ; 

ಅದ್ದೂರಿಯಾಗಿ ನಡೆಯುತ್ತಿರುವ ಈ ಧಾರ್ಮಿಕ ಕಾರ್ಯದ ನೇತೃತ್ವವನ್ನು ವಹಿಸಿರುವ ಗುಜರಾತ್ ನ ಖ್ಯಾತ ಉದ್ಯಮಿ ರವಿನಾಥ್ ಶೆಟ್ಟಿ , ಮೂಲತ ದಕ್ಷಿಣ ಕನ್ನಡ ಜಿಲ್ಲೆಯ ತೋನ್ಸೆಯವರು. ಒರ್ವ ಉದ್ಯಮಿ ಮಾತ್ರವಲ್ಲದೆ ಸಮಾಜ ಸೇವಕ ಹಾಗೂ ಧಾರ್ಮಿಕ ಮುಂದಾಳು ಆಗಿರುವ ಇವರು  ಅಂಕಲೇಶ್ವರ ತುಳು ಸಂಘದ ಗೌರವ ಅಧ್ಯಕ್ಷರು, ಮುಂಬೈ ಬಂಟರ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟ ದಾನಿ. ಬಂಟರ ಸಂಘಗಳು ಮಾತ್ರವಲ್ಲದೆ ಸಮಾಜ ಸೇವಾ ನಿರತ ಇತರ ಸಂಘಟನೆಗಳಿಗೆ ಕೊಡುಗೈ ದಾನಿಯೂ ಆಗಿದ್ದಾರೆ. ಗುಜರಾತಿನ ಬರೋಡ, ಸೂರತ್, ಅಂಕ್ಲೇಶ್ವರ್ ಮತ್ತಿತರ ಪ್ರದೇಶದಲ್ಲಿರುವ ತುಳು ಕನ್ನಡಿಗರ ಸಂಘ ಸಂಸ್ಥೆಗಳಿಗೆ ದಾನಿಯಾಗಿ ಜವಾಬ್ದಾರಿತ ಸೇವೆಗಳನ್ನು ಮಾಡುತ್ತಾ ಬಂದವರು.



Related posts

ಬೊಯಿಸರ್ ಸೋಮೇಶ್ವರ ಮಂದಿರ ನಾಳೆ (ಮಾ. 1)17ನೇ ವರ್ಧಂತ್ಯುತ್ಸವ

Mumbai News Desk

ಮಾ.9ರಂದು ಶ್ರೀ ಕ್ಷೇತ್ರ ಉಮಾಮಹೇಶ್ವರಿ ದೇವಸ್ಥಾನ ಜೆರಿಮರಿ ವರ್ಷಾವಧಿ ಉತ್ಸವ.

Mumbai News Desk

ವಸಯಿ ತಾಲೂಕು ಮೊಗವೀರ ಸಂಘ : ನಾಳೆ (ಮಾ.16) ಮಹಿಳಾ ದಿನಾಚರಣೆ

Mumbai News Desk

ಮಾ.15 ರಂದು ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ

Mumbai News Desk

ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಹೆಜಮಾಡಿ : ಜ. 25ಕ್ಕೆ ವಾರ್ಷಿಕ ಬಂಡಿ ನೇಮೋತ್ಸವದ

Mumbai News Desk

ಕನ್ನಡ ಸಂಘ ಸಯನ್ ವತಿಯಿಂದ ಅಗಸ್ಟ್ 3 ರಂದು ಯಕ್ಷಗಾನ ತಾಳಮದ್ದಳೆ

Mumbai News Desk