26 C
Mumbai
October 1, 2026
Mumbai News Kannada
ಪ್ರಕಟಣೆ

ಫಲಿಮಾರಿನಲ್ಲಿ ಆ.17ರಂದು ಕುಮಾರವ್ಯಾಸ ವಿರಚಿತ ‘ಮಹಾಭಾರತ’ ಸಪ್ತಾಹ ವಾಚನ ಮಂಗಲೋತ್ಸವ



ಶ್ರೀ ಸೀತಾರಾಮ ಭಜನಾ ಮಂದಿರ (ರಿ.)ಫಲಿಮಾರು ಹೊಸಗ್ಮೆ ಯಲ್ಲಿ ಕಳೆದ 67 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಕುಮಾರವ್ಯಾಸ ವಿರಚಿತ “ಮಹಾಭಾರತ” ಎಂಬ ಸಪ್ತಾಹ ವಾಚನದ ಮಂಗಲೋತ್ಸವವು ಆಗಸ್ಟ್ 17, 2026ರ ಸೋಮವಾರ ಸಾಯಂಕಾಲ 8 ಗಂಟೆಗೆ ನಡೆಯಲಿದೆ. ಈ ವರ್ಷದ ಸಪ್ತಾಹ ವಾಚನವು ಜುಲೈ 16, 2026ರಿಂದ ಶ್ರೀ ಜಯ ದೇವಾಡಿಗ, ಸುರತ್ಕಲ್ ಇವರಿಂದ ವಾಚನ ಹಾಗೂ ಪ್ರವಚನಕಾರರಾದ ಶ್ರೀ ಭಾಸ್ಕರ ಕೆ. ಪಡುಬಿದ್ರಿ ಮತ್ತು ಶ್ರೀ ಮನೋಹರ ಕುಂದರ್ ಅವರಿಂದ ಪ್ರಾರಂಭವಾಗಿದ್ದು, ಆಗಸ್ಟ್ 17ರಂದು ಮಂಗಲೋತ್ಸವದೊಂದಿಗೆ ಸಮಾಪನಗೊಳ್ಳಲಿದೆ.
ಶ್ರೀ ಸೀತಾರಾಮ ಭಜನಾ ಮಂದಿರ (ರಿ.)ದ ವತಿಯಿಂದ ಆಯೋಜಿಸಲಾಗಿರುವ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಸೀತಾರಾಮ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ವಿನಂತಿಸಲಾಗಿದೆ. ಸಪ್ತಾಹ ವಾಚನದ ಮಂಗಲೋತ್ಸವವು ಸೋಮವಾರ ಸಾಯಂಕಾಲ 8 ಗಂಟೆಗೆ ನೆರವೇರಲಿದ್ದು, ಭಕ್ತರ ಸಾನ್ನಿಧ್ಯದಲ್ಲಿ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಫಲಿಮಾರು ಮೊಗವೀರ ಸಭಾ (ರಿ.), ಫಲಿಮಾರು, ಫಲಿಮಾರು ಮೊಗವೀರ ಸಭಾ, ಮುಂಬಯಿ, ಫಲಿಮಾರು ಮೊಗವೀರ ಮಹಿಳಾ ಮಂಡಳಿ, ಫಲಿಮಾರು ಹಾಗೂ ಶ್ರೀ ಸೀತಾರಾಮ ಸೇವಾ ಸಮಿತಿ, ಫಲಿಮಾರು ಇವರು ತಮ್ಮ ಆಗಮನಾಭಿಲಾಷಿಗಳಾಗಿದ್ದಾರೆ.

ವಿಶೇಷ ಕಾರ್ಯಕ್ರಮ : ಫಲಿಮಾರು ಮೊಗವೀರ ಮಹಿಳಾ ಮಂಡಳಿಯ ವತಿಯಿಂದ “ಶ್ರೀ ಹರಿ ಲೀಲಾರ್ಣವ ” ಎಂಬ ಯಕ್ಷಗಾನ ಆಗಸ್ಟ್ 18, 2026ರಂದು ಮಂಗಳವಾರ ಸಾಯಂಕಾಲ 4.30 ಗಂಟೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ನೀಡುವ ಉದಾರ ಧನ ಸಹಾಯವನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ತಿಳಿಸಲಾಗಿದೆ.



Related posts

ಸೆ.7: ಸಾಫಲ್ಯ ಸೇವಾ ಸಂಘ, ಮುಂಬೈ – ವಿದ್ಯಾರ್ಥಿ ಸಹಾಯಧನ, ಮಹಿಳೆಯರಿಗೆ ಘರ್‌ಘಂಟಿ ವಿತರಣೆ ಹಾಗೂ ನಾನಾ ಸಮಾಜಮುಖಿ ಕಾರ್ಯಕ್ರಮಗಳು

Mumbai News Desk

ಡಿ. 29. ಕನಕದಾಸ ಜಯಂತಿ, ಕುವೆಂಪು ಜಯಂತಿ ಗೌರವಾರ್ಥ,ಕರ್ನಾಟಕ ರಾಜ್ಯೋತ್ಸವ ಸಂಭ್ರಮ – ಕರುನಾಡ ಡಿಂಡಿಮ – 2024.

Mumbai News Desk

ವಿದ್ಯಾವಿಹಾರ್‌ನಲ್ಲಿ ನಾಳೆ ‘ಶ್ರೀ ರಾಮ ಕಥಾ ಹೃದಯಂ’ ತಾಳಮದ್ದಳೆ

Mumbai News Desk

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಕೋಟೆ, ನಾಲಾಸೋಪಾರ : ಫೆ. 1ರಿಂದ 81ನೇ ವಾರ್ಷಿಕ ಶನಿಮಹಾ ಪೂಜೆ ಮತ್ತು ಜಾತ್ರಾ ಮಹೋತ್ಸವ

Mumbai News Desk

ಕೊಡ್ಯಡ್ಕ ದೇವಸ್ಥಾನಕ್ಕೆ ಹೋದಾಗ ಆದ ಪ್ರೇರಣೆಯಂತೆ ಬೆಳಗಾವಿಯಲ್ಲಿ ನೆಲೆ ನಿಂತ ಅನ್ನಪೂರ್ಣೇಶ್ವರಿ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ, ಎ. 12ಕ್ಕೆ ಏಕಾಹ ಭಜನೆ

Mumbai News Desk