29 C
Mumbai
September 29, 2026
Mumbai News Kannada
ಪ್ರಕಟಣೆ

ಬೋರಿವಲಿ ನ್ಯಾನ್ಸಿ ಕಾಂಫ್ಲೆಕ್ಸ್ ಶ್ರೀ ಜಗದೀಶ್ವರಿ ಮಂದಿರ: ಆ.17, ನಾಗಪಂಚಮಿಯಂದು ಆಶ್ಲೇಷ ಬಲಿ ಪೂಜೆ



ಬೋರಿವಲಿ ಪೂರ್ವದ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನದ ಸನಿಹದ ಶ್ರೀಕೃಷ್ಣ ನಗರದ ನ್ಯಾನ್ಸಿ ಕಾಂಫ್ಲೆಕ್ಸ್ (ನವನಿರ್ಮಿತವಾಗಿರುವ ಶೀತಲ್ ರಿಗಾಲಿಯಾ) ಇಲ್ಲಿಯ ಶ್ರೀ ಜಗದೀಶ್ವರಿ ಮಂದಿರದಲ್ಲಿ ಇದೇ ಸೋವವಾರ ದಿನಾಂಕ ಆ.17, ನಾಗಪಂಚಮಿಯಂದು ಬೆಳಿಗ್ಗೆ 6-00 ರಿಂದ 7-00ರ ತನಕ ಪಂಚಾಮೃತ ಮಹಾ ಅಭಿಷೇಕ, 7-00 ರಿಂದ 9-00ರ ತನಕ ಆಶ್ಲೇಷ ಬಲಿ ಮಹಾಪೂಜೆ ನಡೆಯಲಿದೆ.

ಕ್ಷೇತ್ರದ ಆಡಳಿತ ಮಂಡಳಿ ಇದರ ಸಂಕಲ್ಪದಂತೆ, ಮಂದಿರದಲ್ಲಿ ಹತ್ತು-ಹಲವು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಜರಗುತ್ತಲಿರುವುದು. ಅಂತೆಯೇ ಮಂದಿರದ ಪ್ರಧಾನ ಅರ್ಚಕರಾದ ವಿದ್ವಾನ್ ವಿಜಯ ಉಪಾಧ್ಯಾಯ ಇವರ ನೇತೃತ್ವದಲ್ಲಿ, ನಾಗಪಂಚಮಿಯಂದು ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿರುವುದು.
ಭಕ್ತಾದಿಗಳೆಲ್ಲರು ಸಕಾಲದಲ್ಲಿ ಆಗಮಿಸಿ, ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾಗಿದ್ದು, ಶ್ರೀ ಜಗದೀಶ್ವರಿ ಮಾತೆಯ ಹಾಗೂ ನಾಗದೇವರ ತೀರ್ಥಪ್ರಸಾದ ಸ್ವೀಕರಿಸಿ, ಪುನೀತರಾಗಬೇಕಾಗಿ ಆಡಳಿತ ಮಂಡಳಿ, ವಿಪ್ರವೃಂದ ಹಾಗೂ ಸರ್ವ ಸದಸ್ಯರು ವಿನಂತಿಸುತ್ತಿದ್ದಾರೆ.



Related posts

ಅ 11: ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ವತಿಯಿಂದ ಆಟಿದ ಸೊಗಸ್ ಕಾರ್ಯಕ್ರಮ

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ಮಂದಿರ ಡೊಂಬಿವಲಿ ಪೂರ್ವ : ಫೆ. 8ಕ್ಕೆ ವಾರ್ಷಿಕ ಮಂಗಳೂತ್ಸವ

Mumbai News Desk

ಶ್ರೀ ಅಯ್ಯಪ್ಪ ಭಕ್ತ ವೃಂದ ಜೆರಿಮೆರಿ, ಡಿ.31ಕ್ಕೆ 34ನೇ ವಾರ್ಷಿಕ ಮಹಾಪೂಜೆ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ (ರಿ), ಕಿಸಾನ್ ನಗರ ಥಾಣೆ :ಡಿ. 19ರಿಂದ 21ರ ತನಕ ರಜತ ಮಹೋತ್ಸವ, 25ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk

ಶ್ರೀ ಮಕ್ಕೆಕಟ್ಟು ಮೇಳ ಮತ್ತು ಶ್ರೀ ಹಟ್ಟಿಯಂಗಡಿ ಮೇಳದ ಪ್ರಮುಖ ಕಲಾವಿದರು ತಂಡ, ಜುಲೈ 9 ರಿಂದ 20 ರವರೆಗೆ  ಮಹಾನಗರದ ವಿವಿಧ ಉಪ ನಗರಗಳಲ್ಲಿ    ವೈಶಿಷ್ಟ್ಯ ಪೂರ್ಣವಾದ ಯಕ್ಷಗಾನ ಪ್ರದರ್ಶನ

Mumbai News Desk

 ವರ್ಲಿ :ಅಪ್ಪಾಜಿ ಬೀಡು ಫೌಂಡೇಶನ್  ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ಜು 28:ಆಟಿದ ಕೂಟ.

Mumbai News Desk