October 17, 2026
Mumbai News Kannada
ಮುಂಬಯಿ

ಕಲ್ವಾದಲ್ಲಿ ಶನಿ ಮಹಾಪೂಜೆ: ಶ್ರೀ ಗುರುನಾರಾಯಣ ಭಜನಾ ಮಂಡಳಿ ಉದ್ಘಾಟನೆ



ಠಾಣೆ (ಮಹಾರಾಷ್ಟ್ರ): ಇಲ್ಲಿನ ಕಲ್ವದಲ್ಲಿ ಬಿಲ್ಲವ ಸಮಾಜ ಹಾಗೂ ಶ್ರೀ ಗುರುನಾರಾಯಣ ಭಜನಾ ಮಂಡಳಿಯ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಉತ್ಸವ, ಗಣಯಾಗ, ಶನಿದೇವರ ಮಹಾಪೂಜೆ ಹಾಗೂ ನೂತನ ಭಜನಾ ಮಂಡಳಿಯ ಉದ್ಘಾಟನಾ ಸಮಾರಂಭ ಭಕ್ತಿ-ಸಂಭ್ರಮದಿಂದ ನೆರವೇರಿತು.

ಬೆಳಿಗ್ಗೆ ಗಣಪತಿ ಹೋಮ ಮತ್ತು ಗುರುಜಯಂತಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ಮಧ್ಯಾಹ್ನ ವಿದ್ವಾಂಸ ಚಂದ್ರಶೇಖರ ಪೂಜಾರಿ ಅವರ ನೇತೃತ್ವದಲ್ಲಿ ಕಲಶ ಪ್ರತಿಷ್ಠಾಪನೆ, ಶನಿ ಮಹಾತ್ಮೆ ಕಥಾ ಪಾರಾಯಣ ಹಾಗೂ ಮಹಾಮಂಗಳಾರತಿ ಸಂಪನ್ನಗೊಂಡಿತು. ಧಾರ್ಮಿಕ ವಿಧಿ ವಿಧಾನಗಳನ್ನು ರವೀಂದ್ರ ಶಾಂತಿ ನೆರವೇರಿಸಿದರು. ಪೂಜಾ ವೃತವನ್ನು ನಾರಾಯಣ ಸುವರ್ಣ ಮತ್ತು ಗೀತಾ ಸುವರ್ಣ ದಂಪತಿ ಕೈಗೊಂಡರು.

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರುನಾರಾಯಣ ಭಜನಾ ಮಂಡಳಿಯ ಅಧ್ಯಕ್ಷ ಅಶೋಕ್ ಕುಕ್ಯಾನ್ ಮಾತನಾಡಿ, “ಸಮಾಜ ಬಾಂಧವರಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಲು ಭಜನಾ ಸಂಸ್ಕೃತಿ ಸಹಕಾರಿ” ಎಂದರು.

ಸಮಾಜದ ಮುಖಂಡ ನಾರಾಯಣ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, “ದಿವಂಗತ ಜಯ ಸಿ. ಸುವರ್ಣರ ಆದರ್ಶ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜದ ಏಳಿಗೆಗೆ ಶ್ರಮಿಸಬೇಕು” ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಭಾರತ್ ಬ್ಯಾಂಕ್ ಉಪಾಧ್ಯಕ್ಷ ಸೋಮನಾಥ್ ಅಮೀನ್ ಅವರು ನೂತನ ಮಂಡಳಿಯ ಸೇವಾ ಕಾರ್ಯಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಭಾರತ್ ಬ್ಯಾಂಕ್ ನಿರ್ದೇಶಕರಾದ ಗಂಗಾಧರ್ ಪೂಜಾರಿ, ಅಶೋಕ್ ಕೋಟ್ಯಾನ್, ಅನ್ನಸಂತರ್ಪಣೆ ಉಸ್ತುವಾರಿ ಗಣೇಶ್ ಪೂಜಾರಿ, ಜ್ಯೋತಿಷಿ ಪ್ರವೀಣ್ ಭಟ್, ಮುಖಂಡರಾದ ಮಹೇಶ್ ಕರ್ಕೇರ, ಕೃಷ್ಣ ಪೂಜಾರಿ (ನವಿ ಮುಂಬೈ), ದಯಾನಂದ ಆರ್. ಪೂಜಾರಿ, ಸಂಜೀವ ಪೂಜಾರಿ, ಕೆ.ಆರ್. ಪೂಜಾರಿ, ಎಸ್.ಎಸ್. ಪೂಜಾರಿ, ಪ್ರದೀಪ್, ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ: ಇದೇ ಸಂದರ್ಭದಲ್ಲಿ ಶ್ರೀ ಗುರುನಾರಾಯಣ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳನ್ನು ಪದಗ್ರಹಣ ಮಾಡಿಸಲಾಯಿತು.

  • ಗೌರವಾಧ್ಯಕ್ಷರು: ದಯಾನಂದ ಆರ್. ಪೂಜಾರಿ, ಸಂಜೀವ ಪೂಜಾರಿ
  • ಅಧ್ಯಕ್ಷರು: ನಾರಾಯಣ ಸುವರ್ಣ
  • ಉಪಾಧ್ಯಕ್ಷರು: ಶ್ರೀಮತಿ ಬೇಬಿ ಪೂಜಾರಿ, ಕೆ.ಆರ್. ಪೂಜಾರಿ, ಭಾಸ್ಕರ್ ಪೂಜಾರಿ
  • ಪ್ರಧಾನ ಕಾರ್ಯದರ್ಶಿ: ರತ್ನಾಕರ್ ಬಿ. ಪೂಜಾರಿ
  • ಜಂಟಿ ಕಾರ್ಯದರ್ಶಿ: ಸತೀಶ್ ಸುಂದರ್ ಪೂಜಾರಿ
  • ಖಜಾಂಚಿ: ವಿಕಾಸ್
  • ಜಂಟಿ ಖಜಾಂಚಿ: ಶ್ರೀಮತಿ ಪದ್ಮಾವತಿ ಉಮೇಶ್ ಪೂಜಾರಿ

ಕಾರ್ಯಕಾರಿ ಸಮಿತಿ ಸದಸ್ಯರು: ಮೋನಪ್ಪ ಕೋಟ್ಯಾನ್, ಗಣಪ ಪೂಜಾರಿ, ಯಶೋಧರ ಸಾಲ್ಯಾನ್, ಶ್ರೀಮತಿ ಶಾಲಿನಿ ಎಸ್. ಕೋಟ್ಯಾನ್, ಅಮಿತಾ ಅಂಚನ್, ಹೇಮಾವತಿ ಸಾಲ್ಯಾನ್, ರೇಖಾ ಪೂಜಾರಿ, ಸವಿತಾ ಕೋಟ್ಯಾನ್, ಗೀತಾ ಕೋಟ್ಯಾನ್, ಮಾಬಲ ಸಾಲ್ಯಾನ್, ನಾರಾಯಣ ಎಸ್. ಕೋಟ್ಯಾನ್, ಶ್ರೀಮತಿ ಜಯಶ್ರೀ ಕೋಟ್ಯಾನ್, ಧನಪಾಲ್ ಸಾಲ್ಯಾನ್, ಸುಚಿತ್ರಾ ವಿ. ಅಂಚನ್ ಹಾಗೂ ನೀಲಾ ಕರ್ಕೇರ.

ಅನಿತಾ, ಸಬಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮದ ನಂತರ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಜರುಗಿತು.



Related posts

ಮುಂಬಯಿಯ  ಕುಲಾಲ ಸಂಘದ ಯುವ ವಿಭಾಗದವತಿಯಿಂದ ಕ್ರೀಡೋತ್ಸವ, ಬಹುಮಾನ ವಿತರಣೆ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬಯಿಯ 84ನೇ ವಾರ್ಷಿಕೋತ್ಸವ

Mumbai News Desk

ಕನ್ನಡ ಸಂಘ ಸಾಂತಾಕ್ರೂಜ್ ಆಷಾಢ ಆಚರಣೆ: ಕರಾವಳಿ ಜನತೆಗೆ ಆಟಿ (ಆಷಾಢ) ತಿಂಗಳು ಮಹತ್ವದ್ದು – ಸುಜಾತಾ ಆರ್. ಶೆಟ್ಟಿ

Mumbai News Desk

ಕಿಸನ್ ನಗರ ಶ್ರೀ ಅಯ್ಯಪ್ಪ ಸೇವ ಸಮಿತಿಯ 23 ನೇ ವಾರ್ಷಿಕ ಮಹಾಪೂಜೆ

Mumbai News Desk

ಮಹಾರಾಷ್ಟ್ರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಬಡ್ತಿ: ಕನ್ನಡಿಗ ಡಾ. ಕೆ. ಎಚ್. ಗೋವಿಂದರಾಜ್ (ಐಎಎಸ್) ಅವರಿಗೆ ಒಕ್ಕಲಿಗರ ಸಂಘ ಮಹಾರಾಷ್ಟ್ರ ವತಿಯಿಂದ ಗೌರವ

Mumbai News Desk

ಕಲ್ವಾದಲ್ಲಿ ವಿಜೃಂಭಣೆಯಿಂದ ಜರುಗಿದ ‘ಆಟಿಡೊಂಜಿ ದಿನ’ ಸಂಭ್ರಮ

Mumbai News Desk