October 17, 2026
Mumbai News Kannada
ತುಳುನಾಡು

ಬಪ್ಪನಾಡು: ಹೊಸ ಅಂಗಣ ದಶಮಾನೋತ್ಸವ ಸಂಭ್ರಮ-ಆಮಂತ್ರಣ ಪತ್ರಿಕೆ ಬಿಡುಗಡೆ



ಮುಲ್ಕಿ: ಹೊಸ ಅಂಗಣದ ದಶಮಾನೋತ್ಸವ ಸಂಭ್ರಮ ಅಕ್ಟೋಬರ್ 4 ಭಾನುವಾರ ಬಪ್ಪನಾಡು ಶ್ರೀ ಅನ್ನಪೂರ್ಣೇಶ್ವರಿ ಸಭಾಗೃಹ ದಲ್ಲಿ ನಡೆಯಲಿದ್ದು ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಂಗಳವಾರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕ್ಷೇತ್ರದ ಅರ್ಚಕರಾದ ನರಸಿಂಹ ಭಟ್ ರವರ ನೇತೃತ್ವದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಮೂಲಕ ನಡೆಯಿತು.

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಮಾತನಾಡಿ ಹೊಸ ಅಂಗಣದ ಕಾರ್ಯಕ್ರಮಗಳು ನಿರಂತರವಾಗಿ ನಡೆದು ಓದುಗರಿಗಾಗಿ ಒಳ್ಳೆಯ ಲೇಖಕರಿಂದ ಲೇಖನಗಳು ಬಂದು ಜನಪ್ರಿಯವಾಗಿದೆ. ದಶಮಾನೋತ್ಸವ ಕಾರ್ಯಕ್ರಮವು ಒಳ್ಳೆಯ ರೀತಿಯಿಂದ ನಡೆಯಲಿ ಎಂದು ಶುಭಹಾರೈಸಿದರು.

ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪರವರು ಮಾತನಾಡುತ್ತಾ ಮೂಲ್ಕಿಯಲ್ಲಿ ಒಂದೇ ಒಂದು ಪತ್ರಿಕೆ ಪ್ರಕಟವಾಗುವುದು ಇದರ ಸಂಪಾದಕರು ಪತ್ರಿಕೆಯ ಗುಣ ಮಟ್ಟವನ್ನು ಕಾಯ್ದುಕೊಂಡು ಬಂದು, ಲೇಖಕರಿಗೆ ಸಂತೋಷದ ವಿಷಯ ಎಂದು ಹೇಳಿದರು. ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತುರವರು ಮಾತನಾಡುತ್ತಾ ಹೊಸ ಅಂಗಣ ಪತ್ರಿಕೆಯನ್ನು ನಾನು ನೋಡುತ್ತಾ ಇದ್ದೇನೆ ಅದೊಂದು ಓದುಗರ ಪತ್ರಿಕೆಯಾಗಿದೆ. ಇದು ಬೆಂಗಳೂರು, ಮುಂಬೈಯಲ್ಲಿರುವ ಓದುಗರ ಕೈ ಸೇರುತ್ತದೆ. ಕಾರ್ಯಕ್ರಮದ ಮನರಂಜನೆ ಮಾಡಿದ ಸಂಪಾದಕರಿಗೂ ಎಲ್ಲಾ ರೀತಿಯಿಂದ ಸಹಕಾರ ಸಿಕ್ಕಿ ಯಶಸ್ವಿಯಾಗಲಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪ್ರಸಾದ್ ಭಟ್ ಬಪ್ಪನಾಡು, ವಾಸು ಪೂಜಾರಿ ಚಿತ್ರಾಪು,ಉದ್ಯಮಿ ಜಾನ್ ಕ್ವಾಡ್ರಾಸ್, ರಮೇಶ್‌ ಅಮೀನ್ ಕೊಕ್ಕರಕಲ್,ಸುರೇಂದ್ರ ಜಿ ಶೆಣೈ, ಮಹೀಮ್ ಹೆಗ್ಡೆ, ಸರೋಜಿನಿ ಸುವರ್ಣ, ಕರುಣಾಕರ ಪೂಜಾರಿ, ಉದಯಕುಮಾರ್ ಶೆಟ್ಟಿ ಅಧಿಧನ್, ಲತಾ ಶೇಖ‌ರ್ ಕೊಳಚಿ ಕಂಬಳ, ವಾಸು ಪೂಜಾರಿ ಕೊಲಕಾಡಿ, ಜಯಪಾಲ ಶೆಟ್ಟಿ ಐಕಳ, ಜೇಸಿ ದಿನೇಶ್ ಶೆಟ್ಟಿ, ರವಿಚಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು

ಹೊಸ ಅಂಗಣದ ಡಾ. ಹರಿಶ್ಚಂದ್ರ ಪಿ ಸಾಲ್ಯಾನ್ ಸ್ವಾಗತಿಸಿ ನಿರೂಪಿಸಿದರು.



Related posts

ಮೂಲ್ಕಿ : ಕೊಳಚಿ ಕಂಬಳ ಶ್ರೀ ಬೊಬ್ಬರ್ಯ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಶಿಲನ್ಯಾಸ

Mumbai News Desk

ಬಜ್ಪೆಯಲ್ಲಿ ಮುಂಬೈಯ ಪುರುಷೋತ್ತಮ ಬೆಲ್ಚಡ ದಂಪತಿಗಳಿಂದ ಹರಕೆಯ ಯಕ್ಷಗಾನ ಸೇವೆ: ಕಲಾವಿದರುಗಳಾದ ಅರವಿಂದ ಬೋಳಾರ್ ಹಾಗೂ ಮನ್ವಿತ್ ನಿಡ್ಡೋಡಿ ಅವರಿಗೆ ಸನ್ಮಾನ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಮಂಗಳ ಪ್ರಶ್ನೆಗೆ ಚಾಲನೆ

Mumbai News Desk

ಇಂದ್ರಾಳಿ ಮೇಲ್ಸೇತುವೆ ಸೆಪ್ಟೆಂಬರ್ 22 ವಾಹನ ಸಂಚಾರಕ್ಕೆ ಮುಕ್ತ, ಸೋಮವಾರದಿಂದಲೇ ಕೆಳ ಪರ್ಕಳ ರಸ್ತೆ ಕಾಮಗಾರಿ ಆರಂಭ : ಯಶ್ಪಾಲ್ ಸುವರ್ಣ

Mumbai News Desk

ಯುವವಾಹಿನಿ ಮೂಲ್ಕಿ ಆಟಿಡೊಂಜಿ ದಿನ :ಹಿಂದಿನ ಆಟಿಯ ದಿನಗಳನ್ನು ನೆನಪು ಮಾಡುವ ಕಾರ್ಯಕ್ರಮ

Mumbai News Desk

ಉಡುಪಿ: ವಿಶ್ವ ಗೀತಾ ಪರ್ಯಾಯದ ವೈಭವ; ಶ್ರೀಕೃಷ್ಣ ಮಠದಲ್ಲಿ 2 ಕೋಟಿ ರೂ. ವೆಚ್ಚದ ‘ಸ್ವರ್ಣ ಭಗವದ್ಗೀತೆ’ ಲೋಕಾರ್ಪಣೆ

Mumbai News Desk