ಡೊಂಬಿವಲಿ: ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ (ಸಂಚಾಲಕರು: ಮುಂಬ್ರಾ ಮಿತ್ರ ಭಜನಾ ಮಂಡಳಿ) ಇದರ ಆಶ್ರಯದಲ್ಲಿ ಮಂದಿರದ ಸುವರ್ಣ ಸಂಭ್ರಮದ ಅಂಗವಾಗಿ “ಸುವರ್ಣ ಸಂಭ್ರಮ – ದಾಸರ ಭಜನಾ ಸ್ಪರ್ಧೆ – 2026” ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭವು ಇದೇ ಬರುವ ಸೆಪ್ಟೆಂಬರ್ 27, 2026ರ ಭಾನುವಾರ ಡೊಂಬಿವಲಿ ಪೂರ್ವದ ಎಂಐಡಿಸಿ (MIDC) ಫೈರ್ ಬ್ರಿಗೇಡ್ ರಸ್ತೆಯಲ್ಲಿರುವ ಎಲ್.ಐ.ಸಿ. (L.I.C.) ಕಚೇರಿ ಸಮೀಪದ ಶಿವಂ (ಮೆಜೆಸ್ಟಿಕ್ ಬ್ಯಾಂಕ್ವೆಟ್ ಹಾಲ್) ಸಭಾಂಗಣದಲ್ಲಿ ಬೆಳಿಗ್ಗೆ 9.00ರಿಂದ ರಾತ್ರಿ 7.00ರ ವರೆಗೆ ಜರುಗಲಿದೆ.
ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ ದಾಸರ ಭಜನಾ ಸ್ಪರ್ಧೆಯ ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ಸಮಾಜ ಸೇವಕರಾದ ಶ್ರೀ ಕುಶಾಲ್ ಕೋಟ್ಯಾನ್, ಮುಂಬೈನ ಚಿಣ್ಣರ ಬಿಂಬ ಚಾರಿಟೇಬಲ್ ಟ್ರಸ್ಟ್ (ರಿ.) ಡೊಂಬಿವಲಿ ಪ್ರಾದೇಶಿಕ ಮುಖ್ಯಸ್ಥರಾದ ಶ್ರೀಮತಿ ಮೈನಾ ಪಿ. ಶೆಟ್ಟಿ ಹಾಗೂ ಸಮಾಜ ಸೇವಕಿ ಶ್ರೀಮತಿ ಶ್ಯಾಮಲಾ ಪೂಜಾರಿ ಉಪಸ್ಥಿತರಿದ್ದು ಚಾಲನೆ ನೀಡಲಿದ್ದಾರೆ.
ಭಜನಾ ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, ಕುಣಿತ ಭಜನಾ ಸ್ಪರ್ಧೆಯಲ್ಲಿ 10 ತಂಡಗಳು ಹಾಗೂ ಕುಳಿತ ಭಜನಾ ಸ್ಪರ್ಧೆಯಲ್ಲಿ 12 ತಂಡಗಳು ಭಾಗವಹಿಸಲಿವೆ.
ಸಂಜೆ 6.00ಕ್ಕೆ ಸಭಾ ಕಾರ್ಯಕ್ರಮ: ಸಂಜೆ 6.00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ:
- ಶ್ರೀ ಸತೀಶ್ ಶೆಟ್ಟಿ – ಮಾಜಿ ಕಾರ್ಯಾಧ್ಯಕ್ಷರು, ಬಂಟರ ಸಂಘ ಮುಂಬೈ, ಭಿವಂಡಿ–ಬದ್ಲಾಪುರ ಪ್ರಾದೇಶಿಕ ಸಮಿತಿ
- ಶ್ರೀ ಜಯಂತ್ ಶೆಟ್ಟಿ – ಜೊತೆ ಕಾರ್ಯದರ್ಶಿ, ಬಂಟರ ಸಂಘ ಮುಂಬೈ, ಡೊಂಬಿವಲಿ ಪ್ರಾದೇಶಿಕ ಸಮಿತಿ
- ಶ್ರೀ ಹರೀಶ್ ಸಾಲಿಯಾನ್ – ಕಾರ್ಯಾಧ್ಯಕ್ಷರು, ಬಿಲ್ಲವರ ಅಸೋಸಿಯೇಷನ್ ಮುಂಬೈ, ಕಲ್ವಾ ಸ್ಥಳೀಯ ಕಚೇರಿ
ಹಾಗೂ ಮಂದಿರದ ಪದಾಧಿಕಾರಿಗಳಾದ:
- ಡಾ. ದಿವಾಕರ್ ಶೆಟ್ಟಿ (ಇಂದ್ರಾಳಿ) – ಕಾರ್ಯಾಧ್ಯಕ್ಷರು, ಸುವರ್ಣ ಮಹೋತ್ಸವ ಸಮಿತಿ
- ಶ್ರೀ ಆನಂದ್ ಶೆಟ್ಟಿ (ಎಕ್ಕಾರ್) – ಕಾರ್ಯಾಧ್ಯಕ್ಷರು, ನಿಧಿ ಸಂಗ್ರಹ ಸಮಿತಿ
- ಶ್ರೀ ಸುಬ್ಬಯ್ಯ ಶೆಟ್ಟಿ (ಸೂರಿಂಜೆ) – ಕಾರ್ಯಾಧ್ಯಕ್ಷರು, ಸ್ಮರಣ ಸಂಚಿಕೆ ಸಮಿತಿ
- ಶ್ರೀ ಸುಕುಮಾರ್ ಶೆಟ್ಟಿ – ಕಾರ್ಯಾಧ್ಯಕ್ಷರು, ಕಾರ್ಯಕ್ರಮ ಸಮಿತಿ
- ಶ್ರೀ ಇಂದುಶೇಖರ್ ಸುವರ್ಣ – ಅಧ್ಯಕ್ಷರು, ಮಂದಿರ ಸಮಿತಿ
- ಶ್ರೀ ನಿತಿನ್ ಪ್ರಕಾಶ್ ಪುತ್ರನ್ – ಗೌರವ ಅಧ್ಯಕ್ಷರು
- ಶ್ರೀ ಅರವಿಂದ್ ಪದ್ಮಶಾಲಿ – ಉಪಾಧ್ಯಕ್ಷರು
- ಶ್ರೀ ಪ್ರವೀಣ್ ಶೆಟ್ಟಿ – ಕೋಶಾಧಿಕಾರಿ
- ಶ್ರೀ ಚಂದ್ರಶೇಖರ್ ಸಾಲಿಯಾನ್ – ಜೊತೆ ಕಾರ್ಯದರ್ಶಿ
- ಶ್ರೀ ಲತೇಶ್ ಸಾಲಿಯಾನ್ – ಜೊತೆ ಕೋಶಾಧಿಕಾರಿ
- ಶ್ರೀಮತಿ ಸವಿತಾ ಸಾಲಿಯಾನ್ – ಕಾರ್ಯಾಧ್ಯಕ್ಷರು, ಮಹಿಳಾ ವಿಭಾಗ ಇವರು ಉಪಸ್ಥಿತರಿರಲಿದ್ದಾರೆ.
ಹಿರಿಯ ಸದಸ್ಯರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ಮಂದಿರದ ಸುವರ್ಣ ಸಂಭ್ರಮದ ಅಂಗವಾಗಿ ಹಿರಿಯ ಸದಸ್ಯರಾದ ಶ್ರೀ ನಾರಾಯಣ್ ಸಾಲಿಯಾನ್ ದಂಪತಿ, ಶ್ರೀ ಸುರೇಶ್ ನಾಯಕ್ ದಂಪತಿ, ಶ್ರೀಮತಿ ಮನೋರಮಾ ಮೆಂಡನ್, ಶ್ರೀಮತಿ ದೇವಕಿ ಪೂಜಾರಿ ಹಾಗೂ ಶ್ರೀಮತಿ ದೇವಕಿ ಸುವರ್ಣ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಗುವುದು.
ಈ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮಸ್ತ ತುಳು–ಕನ್ನಡಿಗರು, ಭಕ್ತಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



