
ಸಮಾಜ ಬಾಂಧವರು ಒಗ್ಗಟ್ಟಿನಿಂದ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು: ಆನಂದ್ ಕುಲಾಲ್ ಬಂಟ್ವಾಳ
ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಚರ್ಚ್‌ಗೇಟ್-ದಹಿಸರ್ ಸ್ಥಳೀಯ ಸಮಿತಿಯ ವತಿಯಿಂದ ನವೆಂಬರ್ 29ರಂದು ನಡೆಯಲಿರುವ 9ನೇ ವಾರ್ಷಿಕೋತ್ಸವದ (ಸ್ನೇಹಕೂಟ) ಆಮಂತ್ರಣ ಪತ್ರಿಕೆಯನ್ನು ಸೆಪ್ಟೆಂಬರ್ 27ರಂದು ಗೋರೆಗಾಂವ್ ಪೂರ್ವದ ಶ್ರೀ ದುರ್ಗಾದೇವಿ ಮಂದಿರದಲ್ಲಿ ನಡೆದ ವಿಶೇಷ ಸಭೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಆನಂದ್ ಕುಲಾಲ್ ಬಂಟ್ವಾಳ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಆನಂದ್ ಕುಲಾಲ್ ಬಂಟ್ವಾಳ, “ದಿನಪೂರ್ತಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಸಮಾಜದ ಪ್ರತಿಭಾವಂತರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ,” ಎಂದು ನುಡಿದರು.
ಸಮಿತಿಯ ಕಾರ್ಯದರ್ಶಿ ಸುಕುಮಾರ್ ಸಾಲಿಯಾನ್ ಮುಂಡ್ಕೂರು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಆರತಿ ಕೆ. ಸಾಲ್ಯಾನ್, ಯುವ ವಿಭಾಗದ ವಿನಯ್ ಸಾಲ್ಯಾನ್ ಹಾಗೂ ಉಪಸ್ಥಿತರಿದ್ದ ಸದಸ್ಯರು ಉಪಯುಕ್ತ ಸಲಹೆ-ಸೂಚನೆಗಳನ್ನು ನೀಡಿದರು.
ಸಮಿತಿಯ ಕೋಶಾಧಿಕಾರಿ ಮುಂಡಪ್ಪ ಮೂಲ್ಯ ವಂದಿಸಿದರು.



