35 C
Mumbai
October 3, 2026
Mumbai News Kannada
ಸುದ್ದಿ

38 ವರ್ಷಗಳ ಸುದೀರ್ಘ ಸೇವೆಯ ಬಳಿಕ ಭಾರತ್ ಬ್ಯಾಂಕ್ ಉಪ ಶಾಖಾ ಪ್ರಬಂಧಕಿ ಶೋಭಾ ಎಸ್. ಸುವರ್ಣ ನಿವೃತ್ತಿ



ಬೆಂಗಳೂರು: ಭಾರತ್ ಬ್ಯಾಂಕ್‌ನ ಬೆಂಗಳೂರು ಕೆ.ಎಚ್. ರಸ್ತೆಯ ಶಾಖೆಯಲ್ಲಿ ಉಪ ಶಾಖಾ ಪ್ರಬಂಧಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಶೋಭಾ ಎಸ್. ಸುವರ್ಣ ಅವರು 38 ವರ್ಷಗಳ ಸುದೀರ್ಘ ಸೇವೆಯ ಬಳಿಕ ಸೆಪ್ಟೆಂಬರ್ 30, 2026ರಂದು ನಿವೃತ್ತರಾದರು.

ಮೂಲತಃ ಮುಂಬಯಿಯ ಸಾಯನ್ ಕೋಳಿವಾಡ ನಿವಾಸಿಯಾಗಿದ್ದ ಶೋಭಾ ಎಸ್. ಸುವರ್ಣ ಅವರು ತಮ್ಮ ವೃತ್ತಿಜೀವನವನ್ನು ಭಾರತ್ ಬ್ಯಾಂಕಿನ ಚೆಂಬೂರು ಶಾಖೆಯಲ್ಲಿ ಆರಂಭಿಸಿದರು. ಬಳಿಕ ಬೆಂಗಳೂರಿಗೆ ವರ್ಗಾವಣೆಗೊಂಡು, ಬ್ಯಾಂಕಿನ ಬೆಂಗಳೂರಿನ ಹಲವು ಶಾಖೆಗಳಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ನಿವೃತ್ತಿಗೆ ಕೆಲವು ವರ್ಷಗಳ ಮೊದಲು ಉಪ ಶಾಖಾ ಪ್ರಬಂಧಕಿಯಾಗಿ ಬಡ್ತಿ ಪಡೆದು, ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರು.

ಅವರ ನಿವೃತ್ತಿಯ ಅಂಗವಾಗಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಮುಖ್ಯಸ್ಥ ನಾಗರಾಜ್ ಸುವರ್ಣ, ಶಾಖಾ ಪ್ರಬಂಧಕರುಗಳಾದ ಸುರೇಖಾ ಎಸ್. ಪೂಜಾರಿ, ರವಿಕುಮಾರ್, ಗೋಪಾಲ್ ಎನ್. ಪೂಜಾರಿ, ರವಿಶಂಕರ್ ಎನ್., ಅಭಿಜಿತ್ ಉಮೇಶ್, ಸಂದೀಪ್ ಶೆಟ್ಟಿ, ವಿಶಾಲ್ ವಿ. ಬಂಗೇರ, ಉಪ ಶಾಖಾ ಪ್ರಬಂಧಕರುಗಳಾದ ಸತೀಶ್ ಪಿ. ಪೂಜಾರಿ, ಪ್ರೀತಿ ನಾಯ್ಕ್, ಸಂಧ್ಯಾ ಸೂರ್ಯಕಾಂತ್, ಹರಿಣಾ ಸನಿಲ್, ಕಿರಣ್ ಪೂಜಾರಿ, ಅಜಯ್ ಭಟ್, ಅಧಿಕಾರಿಗಳಾದ ದಾಕ್ಷಾಯಣಿ ಅಮೀನ್, ಮೇಘನಾ ಅಶ್ವತ್ಥ್, ಅಕ್ಷಯ್ ಪೂಜಾರಿ, ಸುಜ್ಞೇಶ್ ಇಡ್ಯಾ, ಪ್ರದೀಪ್ ಕುಟ್ಟಿತಡ್ಕ, ಅಮಿತಾ ಪೂಜಾರಿ, ಶ್ವೇತಾ ಪೂಜಾರಿ, ಸ್ನೇಹಲ್ ಸಾಲ್ಯಾನ್, ಪ್ರಥಮ್ ಕುಮಾರ್ ಸೇರಿದಂತೆ ಬೆಂಗಳೂರಿನ ವಿವಿಧ ಶಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.

ಶೋಭಾ ಸುವರ್ಣ ಅವರ ಪತಿ ಸುರೇಶ್ ಡಿ. ಸುವರ್ಣ, ಪುತ್ರಿ ಸುರುಚಿ, ಸ್ನೇಹಿತರಾದ ಶ್ರೀ ಮತ್ತು ಶ್ರೀಮತಿ ವಿಜಯನಾಥ್ ಹೆಗ್ಡೆ ಹಾಗೂ ಬ್ಯಾಂಕಿನ ಮಾಜಿ ಅಧಿಕಾರಿ ಸುಜಾತಾ ಎಲ್. ಕುಂದರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಧ್ಯಾ ಸೂರ್ಯಕಾಂತ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಹೋದ್ಯೋಗಿಗಳು ಹಾಗೂ ಸ್ನೇಹಿತರು ಶೋಭಾ ಎಸ್. ಸುವರ್ಣ ಅವರ ದೀರ್ಘಕಾಲದ ಸೇವೆಯನ್ನು ಸ್ಮರಿಸಿ, ನಿವೃತ್ತ ಜೀವನ ಸುಖ-ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು. ಸುರೇಖಾ ಎಸ್. ಪೂಜಾರಿ ವಂದಿಸಿದರು. ಬೀಳ್ಕೊಡುಗೆ ಕಾರ್ಯಕ್ರಮದ ಆಯೋಜನೆಯಲ್ಲಿ ಸತೀಶ್ ಎಲ್. ಸುವರ್ಣ, ಸುದೇಶ್ ಸುವರ್ಣ ಹಾಗೂ ಇತರರು ಮುತುವರ್ಜಿ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ: ಜಯ ಸಿ. ಪೂಜಾರಿ ಕೆಳಾರ್ಕಳಬೆಟ್ಟು



Related posts

ವಿಶ್ವ ಬಂಟರ ಸಮ್ಮೇಳನದ ಖರ್ಚು ವೆಚ್ಚಗಳ ಸಭೆ

Mumbai News Desk

ರಾಮಚಂದ್ರ ಬೈಕಂಪಾಡಿಯವರ ಸಾಧನೆ ಚಿರಸ್ಮರಣೀಯ – ಹರೀಶ್ ಕುಮಾರ್ ಎಂ. ಶೆಟ್ಟಿ

Mumbai News Desk

ಖ್ಯಾತ ಆರ್ಥಿಕ ಸಲಹೆಗಾರ ಡಾ. ಆರ್. ಕೆ. ಶೆಟ್ಟಿಯವರಿಗೆ “ಸಂಸ್ಕೃತಿ ಸಿರಿ” ಪ್ರಶಸ್ತಿ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮಾಜಿ ಅಧ್ಯಕ್ಷ, ಅಪರೂಪದ ಸಾಧಕ ಹೊಸಬೆಟ್ಟು ಕೆ. ಆರ್. ಪುತ್ರನ್ ನಿಧನ

Mumbai News Desk

ಜು. 13 :ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷ ಹೊಸಬೆಟ್ಟು ಕೆ. ಆರ್. ಪುತ್ರನ್ ಅವರಿಗೆ ಮೊಗವೀರ ವ್ಯವಸ್ಥಾಪಕ ಮಂಡಳಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಭೆ

Mumbai News Desk

ಉಡುಪಿ: ಬಜೆ ಮೊಗವೀರ ಸುವರ್ಣ ಮೂಲಸ್ಥಾನದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ

Mumbai News Desk