
ಸಾರ್ವಜನಿಕ ನವರಾತ್ರಿ ಮಂಡಳಿ ಹಾಗೂ ಶ್ರೀ ಜಗದಂಬ ಮಂದಿರಕ್ಕೆ ಭಕ್ತಿಯ ಸಮರ್ಪಣೆ
ಚಿತ್ರ: ಧನಂಜಯ ಪೂಜಾರಿ ವರದಿ: ಇನ್ನಂಜೆ ಜಯರಾಮ್
ಡೊಂಬಿವಲಿ: ಮುಂಬಯಿಯ ಉಪನಗರ ಡೊಂಬಿವಲಿಯ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳಿಯ ನವರಾತ್ರಿ ಉತ್ಸವ ಹಾಗೂ ಶ್ರೀ ಜಗದಂಬ ಮಂದಿರದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಶ್ರೀ ಸಾಯಿನಾಥ ಮಿತ್ರ ಮಂಡಳಿ ವತಿಯಿಂದ ಅಧ್ಯಕ್ಷ ಮೋಹನ ಜಿ. ಸಾಲಿಯಾನ್ ಅವರ ನೇತೃತ್ವದಲ್ಲಿ ಶನಿವಾರ (ಅ. 17) ಅದ್ಧೂರಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ನವರಾತ್ರಿ ಮಹೋತ್ಸವದ ಪ್ರಯುಕ್ತ ಮಂಡಳಿಯಲ್ಲಿ ಹಾಗೂ ಶ್ರೀ ಜಗದಂಬ ಮಂದಿರದಲ್ಲಿ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಸಾವಿರಾರು ಭಕ್ತರಿಗೆ ನಿರಂತರ ಅನ್ನಸಂತರ್ಪಣೆ ಜರುಗುತ್ತಿದ್ದು, ಇದಕ್ಕೆ ಪೂರಕವಾಗಿ ಸ್ಥಳೀಯ ಸಂಘ-ಸಂಸ್ಥೆಗಳು ಹೊರೆಕಾಣಿಕೆ ಸಮರ್ಪಿಸುತ್ತಿವೆ. ಈ ಪೈಕಿ ಶ್ರೀ ಸಾಯಿನಾಥ ಮಿತ್ರ ಮಂಡಳಿಯ ವತಿಯಿಂದ ಜುನ ಡೊಂಬಿವಲಿಯ ಗಿರಿಜಾಮಾತ ಮಂದಿರದಿಂದ ವಾದ್ಯ-ಮೇಳ, ಬ್ಯಾಂಡ್ ವಾಲಗದೊಂದಿಗೆ ವೈಭವದ ಮೆರವಣಿಗೆ ಹೊರಟು ಪಶ್ಚಿಮ ವಿಭಾಗದ ಪೂಜಾ ಸ್ಥಳವನ್ನು ತಲುಪಿತು.

ಮೆರವಣಿಗೆಯನ್ನು ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳಿಯ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ, ಅಧ್ಯಕ್ಷ ಗೋಪಾಲ್ ಶೆಟ್ಟಿ, ಕಾರ್ಯದರ್ಶಿ ಕಿಶೋರ್ ಶೆಟ್ಟಿ, ಕೋಶಾಧಿಕಾರಿ ತಾರಾನಾಥ್ ಅಮೀನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿಲಾಸಿನಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಾಕೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಆದರಪೂರ್ವಕವಾಗಿ ಸ್ವಾಗತಿಸಿದರು.

ಬಳಿಕ ಶ್ರೀ ಜಗದಂಬ ಮಂದಿರಕ್ಕೂ ಹೊರೆಕಾಣಿಕೆಯನ್ನು ಭಕ್ತಿಯಿಂದ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಜಗದಂಬಾ ಮಂದಿರ ಟ್ರಸ್ಟ್ನ ಗೌರವಾಧ್ಯಕ್ಷರು, ಅಧ್ಯಕ್ಷರಾದ ದಿವಾಕರ್ ರೈ, ಉಪಾಧ್ಯಕ್ಷರಾದ ರವೀಂದ್ರ ವೈ. ಶೆಟ್ಟಿ ಮತ್ತು ದಿನೇಶ್ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಮಾಜಿ ಗೌರವಾನ್ವಿತ ಅಧ್ಯಕ್ಷ ಹರೀಶ್ ಡಿ. ಶೆಟ್ಟಿ, ಕೋಶಾಧಿಕಾರಿ ಹರೀಶ್ ಕೋಟ್ಯಾನ್, ಗೌರವ ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಮಂದಿರದ ಶನಿಪೂಜಾ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದು ಮೆರವಣಿಗೆಯನ್ನು ಉತ್ಸಾಹದಿಂದ ಬರಮಾಡಿಕೊಂಡರು.

ಹೊರೆಕಾಣಿಕೆ ಸಮರ್ಪಣೆಯಲ್ಲಿ ಸಾಯಿನಾಥ ಮಿತ್ರ ಮಂಡಳಿಯ ಗೌರವಾಧ್ಯಕ್ಷ ಗಣೇಶ ಮೊಗವೀರ, ಅಧ್ಯಕ್ಷ ಮೋಹನ ಜಿ. ಸಾಲಿಯಾನ್, ಉಪಾಧ್ಯಕ್ಷರಾದ ಮೋಹನ್ ಪೂಜಾರಿ, ಆನಂದ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ ಮೊಗವೀರ, ಕೋಶಾಧಿಕಾರಿ ವಾಸು ಮೊಗವೀರ, ಜೊತೆ ಕಾರ್ಯದರ್ಶಿ ದಿನಕರ್ ಸಾಲ್ಯಾನ್, ಪೂಜಾ ಸಮಿತಿ ಅಧ್ಯಕ್ಷ ರಘುರಾಮ ಎನ್. ಶೆಟ್ಟಿ, ಉಪಾಧ್ಯಕ್ಷ ಸೋಮನಾಥ ಡಿ. ಪೂಜಾರಿ, ಸದಸ್ಯರುಗಳಾದ ವಸಂತ್ ಶೆಟ್ಟಿ, ಅರುಣ್ ಶೆಟ್ಟಿ, ಸುರೇಶ್ ಎನ್.ಬಿ., ಜಗದೀಶ್ ಎಸ್. ಸಾಲ್ಯಾನ್, ಯೋಗೇಶ್ ಶೆಟ್ಟಿಗಾರ್, ಪುರುಷೋತ್ತಮ್ ಪೂಜಾರಿ, ರಮೇಶ್ ಶೆಟ್ಟಿ, ಯಾದವ್ ಕರ್ಕೇರ, ಚಿನ್ನಯ್ ಸಾಲಿಯಾನ್, ಅಭಿಷೇಕ್ ಮೊಗವೀರ, ಕೃಷ್ಣ ಪೂಜಾರಿ, ಚಂದ್ರಹಾಸ್ ಕೋಟ್ಯಾನ್, ರಾಜೇಶ್ ಕೋಟ್ಯಾನ್, ರಾಜು ಮೊಗವೀರ, ಪುಷ್ಪರಾಜ್ ಶೆಟ್ಟಿ, ಬಾಲಕೃಷ್ಣ ಎಸ್. ಶೆಟ್ಟಿ, ಭಾಸ್ಕರ ಶೆಟ್ಟಿ ಸೇರಿದಂತೆ ಮಂಡಳಿಯ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.




