October 16, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಕಲೀನಾ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನಾಚರಣೆ




ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬಯಿ ಇದರ ಕಲೀನಾ ಶಾಖೆಯಲ್ಲಿ ಬ್ಯಾಂಕ್ ನ 48ನೇ ಸಂಸ್ಥಾಪನಾ ದಿನಾಚರಣೆಯನ್ನು ದಿನಾಂಕ 21.08.2026ರಂದು ಆಚರಿಸಲಾಯಿತು. ಖ್ಯಾತ ವಾಸ್ತು ತಜ್ಞರಾದ ಅಶೋಕ್ ಪುರೋಹಿತರು, ಭಗವತೀ ದೇವಸ್ಥಾನ ಕಲೀನಾ ಸಾಂತಾಕ್ರೂಜ್ ಇದರ ಅಚ೯ಕರಾದ ಕುಮಾರ ಸ್ವಾಮಿ, ಬ್ಯಾಂಕ್ ನ ನಿದೇ೯ಶಕರುಗಳಾದ ನಿರಂಜನ ಎಲ್. ಪೂಜಾರಿ, ಸುರೇಶ್ ಬಿ. ಸುವರ್ಣ, ಗ್ರಾಹಕರಾದ ಕೆ. ಎಂ. ಸುವರ್ಣ, ಕೈಲಾಸ್ ವಾಮನ ಪೂಜಾರಿ ಕೇಕ್ ಕತ್ತರಿಸಿದರು. ಬಳಿಕ ಅಶೋಕ್ ಪುರೋಹಿತರು ಮಾತನಾಡುತ್ತಾ ಬ್ಯಾಂಕ್ ನ ಉತ್ತಮ ಸೇವೆಯಿಂದ ಇಂದು 106 ಶಾಖೆಯನ್ನು ಹೊಂದಿದ್ದು ಮುಂಬರುವ ದಿನಗಳಲ್ಲಿ ಶಾಖೆಗಳು ವಿಸ್ತಾರವಾಗಲಿ, 20 ಸಾವಿರ ಕೋಟಿಯ ವ್ಯವಹಾರ 50 ಕೋಟಿಯಾಗಲಿ ಎಂದು ಶುಭ ಹಾರೈಸಿದರಲ್ಲದೆ ಉತ್ತಮ ಸೇವೆಯನ್ನು ನೀಡುತ್ತಿರುವ ಸಿಬ್ಬಂದಿಗಳ ಕಾಯ೯ಲೈಖರಿಯನ್ನು ಶ್ಲಾಘಿಸಿದರು,


ಬ್ಯಾಂಕ್ ನ ನಿದೇ೯ಶಕರುಗಳಾದ ನಿರಂಜನ ಎಲ್. ಪೂಜಾರಿ ಮಾತನಾಡುತ್ತಾ ಗ್ರಾಹಕರು ಬ್ಯಾಂಕಿನ ಮೇಲಿಟ್ಟ ವಿಶ್ವಾಸಕ್ಕೆ ಕ್ರತಜ್ಜತೆ ಸಲ್ಲಿಸಿದರಲ್ಲದೆ ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಿದರು. ಇನ್ನೋವ೯ ನಿದೇ೯ಶಕ ಸುರೇಶ್ ಬಿ. ಸುವರ್ಣ ನಮ್ಮ ಭಾರತ್ ಬ್ಯಾಂಕ್ ಉತ್ತಮ ಸೇವೆಯಿಂದ ಮುಂಬಯಿಯಲ್ಲಿ ಮುಂಚೂಣಿಯಲ್ಲಿದ್ದು ಗ್ರಾಹಕರಿಗೂ ಸಿಬ್ಬಂದಿ ವಗ೯ಕ್ಕೂ ಶುಭಾಶಯ ಹೇಳಿದರು. ಭಗವತಿ ದೇವಸ್ಥಾನದ ಅಚ೯ಕರಾದ ಶ್ರೀ ಕುಮಾರ ಸ್ವಾಮಿಯರವರು ಮಾತನಾಡುತ್ತಾ ಬ್ಯಾಂಕ್ ಸದ್ರಡವಾಗಿದ್ದು ಗ್ರಾಹಕರ ಸೇವೆಯನ್ನು ಮಾಡುತ್ತಾ ಅಭಿವ್ರದ್ಧಿ ಪಥದಲ್ಲಿ ಸಾಗುತ್ತಿದೆ ಬ್ಯಾಂಕ್ ಇನ್ನೂ ಬೆಳೆಯಲಿ ಎಂದು ಶುಭ ನುಡಿದರು.
ಈ ಸಂದರ್ಭದಲ್ಲಿ ಸುರೇಶ್ ಸುವರ್ಣ, ದಯಾನಂದ ಶೆಟ್ಟಿ, ಗ್ರೆಗೋರಿ ಅಲ್ಮೇಡಾ, ವಿ ಕೆ. ಶೆಟ್ಟಿ, ಇನ್ನಿತರ ಗ್ರಾಹಕರು ಉಪಸ್ಥಿತರಿದ್ದರು. ಶಾಖಾ ಮುಖ್ಯಸ್ಥೆ ಸುರೇಖಾ ರಾವ್ ಸವ೯ರನ್ನು ಸ್ವಾಗತಿಸಿದರು.
ಸಿಬ್ಬಂದಿಗಳಾದ ವಿಜಯ್ ಸಾಲ್ಯಾನ್, ಕೌಶಲ್ ಸಾಲ್ಯಾನ್, ಜಯರಾಮ ನಾಯಕ್, ಅನಿಶಾ ನಾರಾಯಣ್, ಸೂರಜ್ ದೇವ್ಕರ್ , ಪದ್ಮಶ್ರೀ ಪೂಜಾರಿ, ರೋಹನ್ ಪೂಜಾರಿ, ವೆಂಕಟೇಶ್ ಕೋಟ್ಯಾನ್, ಪ್ರಿಯಾಂಕ ಪೂಜಾರಿ, ಗಣೇಶ್ ನಾಯರ್, ಜಾಗ್ರತಿ ಪಟೋಲೆ, ಶ್ವೇತಾ ಪೂಜಾರಿ, ಶಿವರಾಜ್ ಪೂಜಾರಿ, ನಿಖಿಲ್ ಪೂಜಾರಿ, ಸಾಯಿ ಪೂಜಾರಿ. ಉಪಸ್ಥಿತರಿದ್ದರು.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಸಿದ್ಧಿ ಪ್ರದೀಪ್ ಶೆಟ್ಟಿಶೇಕಡಾ 94% ಅಂಕ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನೀಲ್ ರಾಜೇಶ್ ಶೆಟ್ಟಿ ಶೇ 91.20 ಅಂಕ.

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಸಾಮೂಹಿಕ ಶನಿ ಪೂಜೆ ಮತ್ತು ತಾಳಮದ್ದಳೆ.

Mumbai News Desk

ಮುಂಬೈ: ಕುರ್ಲಾ ಬೆಸ್ಟ್ ಬಸ್ ಅಪಘಾತ ಪ್ರಕರಣ, ಚಾಲಕರನ್ನು ನೇಮಿಸಿಕೊಳ್ಳುವಲ್ಲಿ ಮತ್ತು ತರಬೇತಿ ನೀಡುವಲ್ಲಿ ನಿರ್ಲಕ್ಷ – ಪೊಲೀಸರ ಆರೋಪ

Mumbai News Desk

ನವೋದಯ ಕನ್ನಡ ಸೇವಾ ಸಂಘ (ರಿ), ಥಾಣೆ ಇದರ ಆಯೋಜನೆಯಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಭಜನಾ ಮಂಗಳೋತ್ಸವ

Mumbai News Desk

ನಮೋ ರಾಮೋ ರಾಮಜತ್ ಶರದ್ ಪೂರ್ಣಿಮಾ ಗರ್ಬಾ ಉತ್ಸವದಲ್ಲಿ ಜಗದಂಬಾ ಗ್ರೂಪ್ ದ್ವಿತೀಯ ಸ್ಥಾನ

Mumbai News Desk