ಡೊಂಬಿವಲಿ (ಮಹಾರಾಷ್ಟ್ರ): ಇಲ್ಲಿನ ಪಠಾರ್ಲಿ ರಸ್ತೆಯ ಓಂ ಶಿವದರ್ಶನ್ ಸಿಎಚ್ಎಸ್ನಲ್ಲಿ ಕಚೇರಿ ಹೊಂದಿರುವ ‘ಕನ್ನಡಿಗರ ಸ್ನೇಹ ಬಳಗ ಟ್ರಸ್ಟ್’ (ಠಾಣೆ ಜಿಲ್ಲೆ) ವತಿಯಿಂದ 2ನೇ ವರ್ಷದ ಶ್ರೀ ಸತ್ಯನಾರಾಯಣ ಮಹಾಪೂಜಾ ಮಹೋತ್ಸವವು ಅಕ್ಟೋಬರ್ 24ರ ಶನಿವಾರ ದಂದು ಜರುಗಲಿದೆ.
ಡೊಂಬಿವಲಿ ಪೂರ್ವದ ಗೋಗ್ರಾಸವಾಡಿಯ ಜಿಎಸ್ಬಿ ಸ್ಕೂಲ್ ಹಾಲ್ನಲ್ಲಿ ಬೆಳಿಗ್ಗೆ 9:00 ಗಂಟೆಗೆ ಮಹಾಪೂಜೆಯ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಮಧ್ಯಾಹ್ನ 12:30ರಿಂದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಹಾಗೂ ಮಹಾಪ್ರಸಾದ ವಿತರಣೆ ನೆರವೇರಲಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀ ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವೆಂಕಟರಮಣ ಶೆಟ್ಟಿ, ಕೋಶಾಧಿಕಾರಿ ಮಂಜುನಾಥ ಹೆಗ್ಡೆ, ಉಪಾಧ್ಯಕ್ಷರಾದ ವಿಕ್ರಾಂತ್ ಜಿ. ತಾಮಸೆ ಹಾಗೂ ಗಣೇಶ್ ಎಸ್. ಭಟ್, ಜಂಟಿ ಕಾರ್ಯದರ್ಶಿ ವಿಶಾಲ್ ಪಿ. ಶೆಟ್ಟಿ, ಜಂಟಿ ಕೋಶಾಧಿಕಾರಿ ರತ್ನಾಕರ್ ಎಸ್. ಭಂಡಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಮಂಜುಳಾ ಎಸ್. ಶೆಟ್ಟಿ, ಸಲಹೆಗಾರ ಆನಂದಪದ್ಮನಾಭನ್ ಹಾಗೂ ಸಮಸ್ತ ಆಡಳಿತ ಮಂಡಳಿ ಸದಸ್ಯರು ಮತ್ತು ಟ್ರಸ್ಟಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



