October 22, 2026
Mumbai News Kannada
ಮುಂಬಯಿ

ಅಂಬರನಾಥ ಶ್ರೀ ದುರ್ಗಾ ಕಾಳಿ ಮಂದಿರದಲ್ಲಿ ಶ್ರದ್ಧಾ-ಭಕ್ತಿಯಿಂದ ಜರುಗಿದ ವಾರ್ಷಿಕ ದಸರಾ ಮಹೋತ್ಸವ



ಚಿತ್ರ: ಸತೀಶ್ ಶೆಟ್ಟಿ, ವರದಿ: ಇನ್ನಂಜೆ ಜಯರಾಮ್

ಅಂಬರನಾಥ: ಇಲ್ಲಿನ ಚಿಂಚಪಾಡಾದಲ್ಲಿರುವ ಶ್ರೀ ದುರ್ಗಾ ಕಾಳಿ ದೇವಸ್ಥಾನದಲ್ಲಿ (ಮಠ) ವಾರ್ಷಿಕ ದಸರಾ ಮಹೋತ್ಸವ ಹಾಗೂ ನವರಾತ್ರಿ ಉತ್ಸವ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ಸಂಪನ್ನಗೊಂಡವು. ‘ಶ್ರೀ ಅಂಬರನಾಥೇಶ್ವರ ಪ್ರಸನ್ನ’ ಹಾಗೂ ‘ಶ್ರೀ ದುರ್ಗಾ ಕಾಲಿ ಪ್ರಸನ್ನ’ ಆಶೀರ್ವಾದದೊಂದಿಗೆ, ಸ್ವರ್ಗೀಯ ಪರಮ ಪೂಜ್ಯ ಶ್ರೀ ಶ್ರೀ ಬಾಲಗಂಗಾಧರ ಸ್ವಾಮೀಜಿಯವರ ದಿವ್ಯ ಸ್ಮರಣೆಯಲ್ಲಿ ಧಾರ್ಮಿಕ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಉತ್ಸವದ ಆರಂಭದ ದಿನದಂದು ಗಣಹೋಮ, ಶುದ್ಧೀಕರಣ ಹಾಗೂ ಶ್ರೀ ದುರ್ಗಾ ಕಾಳಿ ದೇವಿಗೆ ಪಂಚಾಮೃತ ಅಭಿಷೇಕದೊಂದಿಗೆ ಕಳಶ ಸ್ಥಾಪನೆ ನೆರವೇರಿತು. ಮಧ್ಯಾಹ್ನ ಮಂಗಳಾರತಿ ಮತ್ತು ತೀರ್ಥಪ್ರಸಾದ ವಿತರಣೆ ಜರುಗಿತು. ಉತ್ಸವದ ಅವಧಿಯಲ್ಲಿ ನಿತ್ಯವೂ ಸಂಜೆ ಭಕ್ತಿಭಾವದ ಭಜನಾ ಸಂಜೆ ಮತ್ತು ಮಂಗಳಾರತಿ ಕಾರ್ಯಕ್ರಮಗಳು ನಡೆದವು.

ವಿಶೇಷ ದಿನಗಳ ಅಂಗವಾಗಿ ಶ್ರೀ ವಿಜಯ ಕೋಳಿ ಮತ್ತು ಕುಟುಂಬದವರಿಂದ ದುರ್ಗಾ ಹೋಮ, ಶ್ರೀಮತಿ ಮಮತಾ ಶೆಟ್ಟಿ ಅವರ ಸಮ್ಮುಖದಲ್ಲಿ ಪರಮ ಪೂಜ್ಯ ಶ್ರೀ ಬಾಲಗಂಗಾಧರ ಸ್ವಾಮೀಜಿಯವರ ಪಾದುಕಾ ಪೂಜೆ ಜರುಗಿದವು. ಶ್ರೀ ಉಮಾಪತಿ ನಾರಾಯಣ ಅವರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಭಾಂಡುಪ್‌ನ ಶ್ರೀ ಶನೇಶ್ವರ ಭಕ್ತ ವೃಂದ ಮಿತ್ರ ಮಂಡಳದ ವತಿಯಿಂದ ಶ್ರೀ ಶನಿಗ್ರಂಥ ಪಾರಾಯಣ, ಮಹಾಮಂಗಳಾರತಿ ನೆರವೇರಿದವು. ಉತ್ಸವದ ಅಂತಿಮ ದಿನದಂದು ದೇವಿಗೆ ಮಹಾಅಭಿಷೇಕ, ವಿಶೇಷ ಶೃಂಗಾರ, ಕಳಶ ವಿಸರ್ಜನೆ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಮಾತೆಯ ಕೃಪಾಶೀರ್ವಾದದೊಂದಿಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಅಂಬರನಾಥ ಕ್ಷೇತ್ರದ ಶಾಸಕ ಶ್ರೀ ಬಾಲಾಜಿ ಕಿಣೀಕರ್, ನಗರ ಪರಿಷತ್ ಅಧ್ಯಕ್ಷೆ ಶ್ರೀಮತಿ ತೇಜಶ್ರೀ ಕರಂಜುಳೆ ಪಾಟೀಲ್, ನಗರಸೇವಕಿ ಸೌ. ವೃಷಾಲಿ ಪಾಟೀಲ್, ನಗರಸೇವಕರಾದ ಶ್ರೀ ಪವನ್ ವಾಳೇಕರ್, ಶ್ರೀ ಉಮೇಶ್ ಪಾಟೀಲ್ ಸೇರಿದಂತೆ ಸೌ. ಶಿಲ್ಪಾ ಶೇಲಾರ್, ಶ್ರೀ ಕಬೀರ್ ಗಾಯಕವಾಡ್, ಶ್ರೀ ಗೋಪಾಲ್ ಪೂಜಾರಿ, ಶ್ರೀ ವಿಕಾಸ್ ಸೋಮೇಶ್ವರ್, ಶ್ರೀ ಚರಣ್ ರಸಾಲ್, ಶ್ರೀ ಅಭಿಜೀತ್ ಕರಂಜುಲೆ, ಸೌ. ರೇಖಾ ಸೀಗ್, ಶ್ರೀ ಸುಬೋಧ ಭಂಡಾರಿ ಹಾಗೂ ಶ್ರೀ ಭಗವಾನ್ ಲೋಟೆ ಮೊದಲಾದ ಜನಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು ತಾಯಿಯ ದರ್ಶನ ಪಡೆದರು.

ಉತ್ಸವದ ದಿನಗಳಲ್ಲಿ ಅಮ್ಮಾ ಭಗವಾನ್ ಭಜನ್ ಮಿತ್ರ ಮಂಡಳಿ, ಶ್ರೀ ಯಶಸ್ವಿ ಭಜನ್ ಮಂಡಳ್, ಆದಿಶಕ್ತಿ ಭಜನ್ ಮಂಡಳ್, ಶ್ರೀ ಸದ್ಗುರು ಕೃಪಾ ಪ್ರಸಾದ್ ಭಜನ್ ಮಂಡಳ್, ಶ್ರೀ ಸದ್ಗುರು ವಿರುಪಾಕ್ಷೇಶ್ವರ ಭಜನ್ ಮಂಡಳ್, ಶ್ರೀ ಶ್ರೀನಿವಾಸ ಭಜನ್ ಮಂಡಳ್, ಹನುಮಾನ್ ಪ್ರಸ್ಥಿಕ್ ಭಜನ್ ಮಂಡಳ್, ಶ್ರೀ ಗಣೇಶಸಾಯಿ ಭಜನ್ ಮಂಡಳ್, ಶ್ರೀ ಸದ್ಗುರು ಸಿದ್ಧಾರೂಢ ಭಜನ್ ಮಂಡಳ್, ಶ್ರೀ ಸದ್ಗುರು ಶಿವಾನಂದ ಮಹಾರಾಜ್ ಭಕ್ತ ಭಜನ್ ಮಂಡಳ್ ಹಾಗೂ ॐ ಸಾಯಿ ಭಜನ್ ಮಂಡಳಿಗಳು ಸುಶ್ರಾವ್ಯ ಭಜನೆಗಳನ್ನು ಪ್ರಸ್ತುತಪಡಿಸಿದವು.

ಸೇವಾ ಸಮಿತಿಯ ಸದಸ್ಯರಾದ ಶ್ರೀ ಉಮಾಪತಿ ನಾರಾಯಣ, ಶ್ರೀ ಯೋಗೇಶ್ ವಡನಾರೆ, ಶ್ರೀ ರಘು ರಾಮ್ ಶೆಟ್ಟಿ, ಶ್ರೀ ಸುಂದರ್ ಪೂಜಾರಿ, ಶ್ರೀ ಅನಿಲ್ ಗರಡ್, ಶ್ರೀ ರೀತಾ ಶ್ರೀಕಾಂತ್, ಶ್ರೀ ರಘು ಗೌಡ, ಶ್ರೀ ಇಸಾವಿಕ್‌ರಾಜ್ ಪೆರುಮಾಳ್, ಶ್ರೀ ಸತೀಶ್‌ಕುಮಾರ್, ಶ್ರೀ ಶಿರೀಶ್ ಚೌಬಲ್, ಶ್ರೀ ಅಶೋಕ್ ದೈವಾಡಿಗಾ, ಶ್ರೀ ಶಾರದಾ ಭಟ್ಟೂಡ, ಶ್ರೀ ಮುಕೇಶ್ ಮೆನೋನ್, ಶ್ರೀ ಶ್ರೀಕುಮಾರ್ ನಾಯರ್, ಶ್ರೀ ಸುಂದರ್ ಶೆಟ್ಟಿ, ಶ್ರೀ ಪದ್ಮಾಕರ್ ನಿಮಕರ್, ಶ್ರೀ ಸೌಭಿಕ್ ದತ್ತಾ, ಶ್ರೀ ಸುಧಾಕರ್ ಜೋಶಿ, ಶ್ರೀ ಬಾಬು ದೇವಕಟೆ, ಶ್ರೀ ವೆಂಕಟ್ ರಾಮುಲ್ಲು, ಶ್ರೀ ಪ್ರಮೋದ್ ಉಪಾಧ್ಯಾಯ, ಶ್ರೀ ಪ್ರದೀಪ್ ಲೀಜಿ, ಶ್ರೀ ಅನಿಲ್ ಆಚಾರ್ಯ, ಶ್ರೀ ಚನ್ನಪ್ಪಾ ಭೋಯಿಪಲ್ಲಿ, ಶ್ರೀ ಮನಿಷ್ ಪಾನಿಕರ್, ಶ್ರೀ ಧನ್ಯ ನಾಯರ್, ಶ್ರೀ ಕೃಷ್ಣಾ ಕಾರ್ತಿಕ್, ಶ್ರೀ ಪ್ರೇಮನಾಥ್ ಶರ್ಮಾ, ಶ್ರೀ ಅಶೋಕ್ ಭಿಸೆ, ಶ್ರೀ ಪ್ರಾಂಜಲಿ ಪುರಾಣಿಕ್, ಸೌ. ಲಕ್ಷ್ಮಿ ಭಂಡಾರ, ಶ್ರೀ ದೀಪಕ್ ಪೂಜಾರಿ, ಶ್ರೀ ಜಗದೀಶ್ ಪಂಜಾಬಿ, ಶ್ರೀ ರಂಜನ್ ಡೆಕೋರೇಟರ್, ಶ್ರೀ ಈಶ್ವರ್ ಮುಕ್, ಶ್ರೀ ರಾಜೇಶ್ ನಾಯರ್, ಶ್ರೀ ಉಮಾಶಂಕರ್ ಚೌಧರಿ, ಶ್ರೀ ಉತ್ತಮ ರಾಜ್ ಕುಮಾರ್, ಸೌ. ರೇವತಿ ಶೆಟ್ಟಿ, ಶ್ರೀ ಧೀರಜ್ ಶೆಟ್ಟಿ ಹಾಗೂ ಶ್ರೀ ಪ್ರಮೋದ್ ಮಮತಾ ಶೆಟ್ಟಿ ಅವರ ಸಹಯೋಗದಲ್ಲಿ ಈ ಧಾರ್ಮಿಕ ಮಹೋತ್ಸವವು ಶ್ರದ್ಧಾಭಕ್ತಿಗಳಿಂದ ಯಶಸ್ವಿಯಾಗಿ ನೆರವೇರಿತು.



Related posts

ಪುತ್ತಿಗೆ ಶ್ರೀಗಳ ಚಾತುರ್ಮಾಸ್ಯ ವ್ರತ ಸಮಾಪ್ತಿ, ಶ್ರೀಗಳಿಗೆ ಗುರುವಂದನೆ

Mumbai News Desk

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮ

Mumbai News Desk

ಬಿಲ್ಲವರ ಅಸೋಸಿಯೇಶನ್ ಇದರ ವಸಯಿ ಸ್ಥಳೀಯ ಕಚೇರಿಯ ವತಿಯಿಂದ ವಿಜ್ರಂಭಣೆಯ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯೋತ್ಸವ ಆಚರಣೆ

Mumbai News Desk

ಬಿ. ಎಸ್. ಕೆ. ಬಿ. ಎಸೋಸಿಯೇಶನ್, ಗೋಕುಲ, ಮಹಿಳಾ ದಿನಾಚರಣೆ

Mumbai News Desk

ಮುಂಬೈ : ಸಾಕಿನಾಕದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಸಂದರ್ಭ ಹೈಟೆನ್ಷನ್ ತಂತಿ ತಗಲಿ ಒರ್ವ ಸಾವು, ಐವರ ಸ್ಥಿತಿ ಗಂಭೀರ

Mumbai News Desk

ಶ್ರೀ ರಜಕ ಸಂಘ ಮುಂಬಯಿಯ 85ನೇ ವಾರ್ಷಿಕ ಮಹಾಸಭೆ

Mumbai News Desk