
ಚಿತ್ರ ವರದಿ- ಉಮೇಶ್ ಕೆ ಅಂಚನ್
ಮುಂಬಯಿ,ಜು.30: ಶ್ರೀ ನಿತ್ಯಾನಂದ ಸ್ವಾಮಿ ಸೇವಾ ಸಂಸ್ಥೆ ಮೀರಾಭಾಯಂದರ್ ವತಿಯಿಂದ ಗುರು ಪೂರ್ಣಿಮೆಯ ಉತ್ಸವವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಜು.29ರಂದು
ಮೀರಾ ರೋಡ್ ಪೂರ್ವದ ಜಹಾಂಗೀಡ್ ಕಾಂಪ್ಲೆಕ್ಸ್ ರಸ್ತೆಯ ವಿಜಯಾ ಪಾರ್ಕ್ ಸಮೀಪದ ಸ್ವಸ್ತಿಕ್ ಅಂಬರ್ ಪ್ಲಾಝಾ ಸಭಾಗೃಹದಲ್ಲಿ ವಿಜ್ರಂಭಣೆಯಿಂದ ನಡೆಯಿತು.

ಮೀರಾ ರೋಡ್ ಶ್ರೀ ಚಾಮುಂಡೇಶ್ವರಿ ಸನ್ನಿಧಿಯ ಅರ್ಚಕ ಲಕ್ಷ್ಮಣ್ ಶೆಟ್ಟಿಯವರ ಪೌರೋಹಿತ್ಯದಲ್ಲಿ ಗುರು ಪೂಜೆ, ಮಹಾಮಂಗಳಾರತಿ ನಡೆಯಿತು. ನಾರಾಯಣ ಶೆಟ್ಟಿ ಸಹಕರಿಸಿದರು.
ಆರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಅಲಂಕೃತ ಗುರುಸ್ವಾಮಿಯವರ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಳಿಗ್ಗೆ ಗಂಟೆ 9.30ರಿಂದ ಮಧ್ಯಾಹ್ನದ ತನಕ ಪರಿಸರದ ಆಮಂತ್ರಿತ ಭಜನಾ ಮಂಡಳಿಗಳಾದ ಶ್ರಿ ಅಯ್ಯಪ್ಪ ಆರಾಧನಾ ಭಜನಾ ಮಂಡಳಿ, ತುಳುನಾಡ ಸೇವಾ ಸಮಾಜ ಭಜನಾ ಮಂಡಳಿ, ಕಟಿಲೇಶ್ವರಿ ಭಜನಾ ಮಂಡಳಿ,ವಿಠ್ಠಲ ಭಜನಾ ಮಂಡಳಿ, ಮೀರಾ ರೋಡ್ ಬಿಲ್ಲವರ ಭಜನಾ ಮಂಡಳಿ, ಕುಲಮಾಸ್ತಿ ಭಜನಾ ಮಂಡಳಿ, ಮಹಾಲಿಂಗೇಶ್ವರ ಭಜನಾ ಮಂಡಳಿ, ಶನೀಶ್ವರ ಭಜನಾ ಮಂಡಳಿ, ಕರ್ನಾಟಕ ಮಹಾಮಂಡಲ ಭಜನಾ ಮಂಡಳಿ, ಬಂಟ್ಸ್ ಫೋರಮ್ ಭಜನಾ ಮಂಡಳಿ, ಹನುಮಾನ್ ಭಜನಾ ಮಂಡಳಿ, ದುರ್ಗಾ ಭಜನಾ ಮಂಡಳಿ , ಹಾಗೂ ಮೀರಾಭಾಯಂದರ್ ಬಂಟರ ಸಂಘದ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ನಡೆಯಿತು. ಭಜನಾ ಗುರು ಶ್ರೀಧರ್ ಶೆಟ್ಟಿ ಹಾರ್ಮೋನಿಯಂನಲ್ಲಿ ಹಾಗೂ ಶ್ರೇಯಸ್ ಶೆಟ್ಟಿ ತಬುಲಾ ವಾದನದಲ್ಲಿ ಸಹಕರಿಸಿದ್ದರು.ಕೊನೆಯಲ್ಲಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.



ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಜಿ.ಗಾಣಿಗರವರು ಆಗಮಿಸಿದ್ದ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಜೊತೆ ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಸ್ವಾಗತಿಸಿ ಗೌರವ ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ ಅಮಾವಾಸ್ಯೆ ಬೈಲು ವಂದಿಸಿದರು.
ಗೌರವಾಧ್ಯಕ್ಷ ಆನಂದ ಶೆಟ್ಟಿ ಕುಕ್ಕುಂದೂರು, ಉಪಾಧ್ಯಕ್ಷರುಗಳಾದ ವಸಂತಿ ಶೆಟ್ಟಿ, ರವೀಂದ್ರ ಶೆಟ್ಟಿ ದೇರಳಕಟ್ಟೆ, ಜೊತೆ ಕೋಶಾಧಿಕಾರಿ ಪ್ರಸಾದ್ ಶೆಟ್ಟಿ ನೀರೆ, ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಕಾಪು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಶ್ರೀ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಮಲ್ಲಿಕಾ ಕೆ.ಶೆಟ್ಟಿ, ಕಾರ್ಯದರ್ಶಿ ಗೀತಾ ಸಿ.ಶೆಟ್ಟಿ, ಭಜನಾ ಸಮಿತಿಯ ಕಸ್ತೂರಿ ಶೆಟ್ಟಿ, ಲತಾ ಪುತ್ರನ್, ಸಾಂಸ್ಕೃತಿಕ ವಿಭಾಗದ ಶೈಲಜಾ ಎಸ್.ಶೆಟ್ಟಿ, ಹರೀಶ್ ರೈ ಕುಂಬ್ಳೆ, ಸಂಚಾಲಕ ವೈ.ಟಿ.ಶೆಟ್ಟಿ, ಮುಖ್ಯ ಸಲಹೆಗಾರ ಗುಣಪಾಲ್ ಉಡುಪಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಚಂದ್ರಹಾಸ್ ಕೆ.ಶೆಟ್ಟಿ ಇನ್ನ, ಉದಯ್ ಶೆಟ್ಟಿ ಮಲಾರ್ ಬೀಡು, ಉಮೇಶ್ ಕುಮಾರ್, ಪ್ರಿಯಾ ಶೆಟ್ಟಿ ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.

ವಿವಿಧ ಸಂಘಸಂಸ್ಥೆಗಳ, ಸಮುದಾಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳಾದ ಕಾಶಿಮೀರಾ ಭಾಸ್ಕರ್ ಶೆಟ್ಟಿ, ಜಯಪ್ರಕಾಶ್ ಆರ್ ಭಂಡಾರಿ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು,ಉದಯ ಶೆಟ್ಟಿ ಪೆಲತ್ತೂರು, ದಿವಾಕರ್ ಶೆಟ್ಟಿ ಶಿರ್ಲಾಲ್,ಮಧುಕರ್ ಕೆ . ಶೆಟ್ಟಿ, ಕಿಶೋರ್ ಶೆಟ್ಟಿ ಕುತ್ಯಾರು, ಮಧುಕರ್ ಶೆಟ್ಟಿ ಅಜೆಕಾರು, ದಾಮೋದರ್ ಶೆಟ್ಟಿ,ನ್ಯಾಯವಾದಿಗಳಾದ ಸುರೇಶ್ ಪೂಜಾರಿ ಮತ್ತು ಪ್ರೇಮಾ ಸುರೇಶ್ ಪೂಜಾರಿ,ಅಮಿತಾ ಕಿಶೋರ್ ಶೆಟ್ಟಿ, ಪ್ರವೀಣ್ ಶೆಟ್ಟಿ ಅಂಬರ್ ಪ್ಲಾಝಾ , ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದ್ದರು.





