October 23, 2026
Mumbai News Kannada
ಮುಂಬಯಿ

ಜೋಗೇಶ್ವರಿಯ ಭಗವತಿ ಮಂದಿರದಲ್ಲಿ ಶರನ್ನವರಾತ್ರಿ ಮಹೋತ್ಸವ ಸಂಪನ್ನ



ಚಿತ್ರ: ಪ್ರಭಾಕರ್ ದೇವಾಡಿಗ, ವರದಿ: ಇನ್ನಂಜೆ ಜಯರಾಮ್

ಮುಂಬೈ: ಮಹಾನಗರಿ ಮುಂಬೈನ ಜೋಗೇಶ್ವರಿ ಪೂರ್ವದ ಜೆ.ವಿ. ಲಿಂಕ್ ರಸ್ತೆಯ ಪ್ರತಾಪ್ ನಗರದಲ್ಲಿರುವ ಕಲ್ಪವೃಕ್ಷ ಶ್ರೀ ಮಹಾಗಣಪತಿ ಹಾಗೂ ಶ್ರೀ ಭಗವತಿ ಮಂದಿರದಲ್ಲಿ 29ನೇ ವರ್ಷದ ಶರನ್ನವರಾತ್ರಿ ಮಹೋತ್ಸವವು ಅತ್ಯಂತ ಶ್ರದ್ಧಾ–ಭಕ್ತಿ ಹಾಗೂ ಸಡಗರ–ಸಂಭ್ರಮದಿಂದ ಸಂಪನ್ನಗೊಂಡಿತು.

ದಿವಂಗತ ಸುಂದರ್ ಕರ್ಕೇರ ಅವರ ಸಂಕಲ್ಪದಿಂದ ಸ್ಥಾಪನೆಗೊಂಡು, ಭಕ್ತರ ಶ್ರದ್ಧಾ ಕೇಂದ್ರವಾಗಿ ಬೆಳೆದುಬಂದಿರುವ ಈ ಕ್ಷೇತ್ರದಲ್ಲಿ ನವರಾತ್ರಿಯ ದಿನಗಳಲ್ಲಿ ಧಾರ್ಮಿಕ ಕೈಂಕರ್ಯಗಳ ಮಹಾಪೂರವೇ ಹರಿದುಬಂದಿತ್ತು.

ಅಕ್ಟೋಬರ್ 11ರಂದು ಮುಂಜಾನೆ ಗಣಹೋಮ, ಶಾಸ್ತ್ರೋಕ್ತ ಘಟಸ್ಥಾಪನೆ ಹಾಗೂ ಮಹಾಮಂಗಳಾರತಿಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಿತು. ಪ್ರತಿದಿನ ಮುಂಜಾನೆ ಮತ್ತು ಸಂಜೆ ವಿಶೇಷ ಪೂಜೆ, ಆರತಿ, ಭಜನೆ, ಆವೇಶ ಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆಗಳು ಶ್ರದ್ಧಾಪೂರ್ವಕವಾಗಿ ಜರುಗಿದವು.

ಉತ್ಸವದ ಪ್ರಮುಖ ದಿನವಾದ ಅಕ್ಟೋಬರ್ 18ರಂದು ಪುರೋಹಿತ ಕೇಶವ್ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಮಹಾದುರ್ಗಾ ಹೋಮ, ನವಕ ಕಲಶಾಭಿಷೇಕ ಮತ್ತು ಮಹಾಮಂಗಳಾರತಿ ನೆರವೇರಿದವು. ನೂರಾರು ಭಕ್ತಾದಿಗಳು ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ, ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಜೇಶ್ ಸುಂದರ್ ಕರ್ಕೇರ, ಪಾರ್ವತಿ ಕರ್ಕೇರ, ಪದ್ಮನಾಭ ಸುವರ್ಣ, ಬಾಬು ಕೊಟ್ಯಾನ್, ನವೀನ್ ಕರ್ಕೇರ, ಜಯ ಪೂಜಾರಿ, ರಾಮಚಂದ್ರ ಕೋಟ್ಯಾನ್, ದಿಯಾ ಕೋಟ್ಯಾನ್, ಕುಶಲಾಕ್ಷಿ ಸುಂದರ್ ಕರ್ಕೇರ, ಸಚಿನ್ ಅಂಚನ್ ಸೇರಿದಂತೆ ಶ್ರೀ ಭಗವತಿ ಸೇವಾ ಮಂಡಳಿಯ ಸಮಸ್ತ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಅಕ್ಟೋಬರ್ 20ರ ವಿಜಯದಶಮಿಯಂದು ದೈವಿಕ ಆವೇಶ ಪೂಜೆ, ವಿಜಯದಶಮಿ ಮಹಾಪೂಜೆ ಹಾಗೂ ಸಂಜೆ ಶ್ರದ್ಧಾ–ಭಕ್ತಿಯಿಂದ ನೆರವೇರಿದ ಘಟ ವಿಸರ್ಜನೆಯೊಂದಿಗೆ ಹತ್ತು ದಿನಗಳ ಮಹೋತ್ಸವವು ಮಂಗಳಕರವಾಗಿ ತೆರೆಕಂಡಿತು.



Related posts

ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕಿನ ಮೇಲೆ ನಿರ್ಬಂಧ ಹೇರಿದ ಆರ್ ಬಿ ಐ – ಆತಂಕದಲ್ಲಿ ಗ್ರಾಹಕರು

Mumbai News Desk

ಡೊಂಬಿವಲಿಯಲ್ಲಿ ಸಾಯಿನಾಥ ಮಿತ್ರ ಮಂಡಲದ 20ನೇ ವರ್ಷದ ಮಹಾಪೂಜೆ ಸಂಪನ್ನ

Mumbai News Desk

ಮುಂಬೈಯ ಪತ್ರಕರ್ತರ ಹೆಸರಲ್ಲಿ ನಡೆಸುತ್ತಿರುವ ಸಂಘಟನೆ ಯಲ್ಲಿ ಗೊಂದಲ.

Mumbai News Desk

ಮುಂಬೈ : ಮೊಗವೀರ ಕೋ-ಆಪರೇಟಿವ್ ಬ್ಯಾಂಕ್ ಎಂಪ್ಲಾಯೀಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಪೂಜಾ ಸಮಿತಿ: 44ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವ ಸಂಪನ್ನ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ, ನೂತನ ಪದಾಧಿಕಾರಿಗಳ ಆಯ್ಕೆ. ಗೌ.ಅಧ್ಯಕ್ಷರಾಗಿ ಸುರೇಶ್ ಪೂಜಾರಿ, ಅಧ್ಯಕ್ಷರಾಗಿ ಸಿ.ಎ. ಪೂಜಾರಿ ಅಯ್ಕೆ

Mumbai News Desk

ಕಟ್ಟಡ ನಿರ್ಮಾಣದ ನಿರ್ಲಕ್ಷ್ಯ: ‘ಜಸ್ಟೀಸ್ ಫಾರ್ ಸಂಸ್ಕೃತಿ’ಗಾಗಿ ಅಕ್ಟೋಬರ್ 12 ರಂದು ಬೃಹತ್ ಮೌನ ಪ್ರತಿಭಟನೆ

Mumbai News Desk