October 30, 2026
Mumbai News Kannada
ಮುಂಬಯಿ

ಉಚ್ಚಿಲ ಮೊಗವೀರ ಮಹಾ ಸಭಾ ಮುಂಬೈ, ವಾರ್ಷಿಕ ಸಭೆ: ಸದಸ್ಯತ್ವ ವೃದ್ಧಿ, ವಿದ್ಯಾನಿಧಿ ಬಲವರ್ಧನೆಗೆ ಆದ್ಯತೆ



ಉಚ್ಚಿಲ ಮೊಗವೀರ ಮಹಾ ಸಭಾ, ಮುಂಬೈ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಶ್ರೀ ಅಶೋಕ್ ಎಸ್. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 4ರಂದು ಅಂಧೇರಿಯ ಮೊಗವೀರ ಭವನದಲ್ಲಿ ಜರುಗಿತು.
ಸಭೆಗೆ ಆಗಮಿಸಿದ ಎಲ್ಲಾ ಸದಸ್ಯರನ್ನು ಸ್ವಾಗತಿಸಿ ಪ್ರಾರ್ಥನೆಯ ಬಳಿಕ ವರದಿ ವರ್ಷದಲ್ಲಿ ದೈವಾಧೀನರಾದ ಸದಸ್ಯರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಉಪೇಂದ್ರ ಆರ್. ಅಮೀನ್ ಅವರು ಹಿಂದಿನ ವಾರ್ಷಿಕ ಹಾಗೂ ವಿಶೇಷ ಮಹಾಸಭೆಯ ವರದಿಯನ್ನು ಸಭೆಯಲ್ಲಿ ಓದಿ ತಿಳಿಸಿದರು.


ನಂತರ ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲ್ಪಟ್ಟ 2025–2026ನೇ ಸಾಲಿನ ಲೆಕ್ಕಪತ್ರವನ್ನು ಕೋಶಾಧಿಕಾರಿ ಶ್ರೀ ಕುಮಾರ್ ಎನ್. ಪುತ್ರನ್ ಅವರು ಸಭೆಯ ಮುಂದೆ ಮಂಡಿಸಿ ಅದನ್ನು ಸರ್ವಾನುಮತದಿಂದ ಅಂಗೀಕರಿಸ ಲಾಯಿತು.
ಅದೇ ರೀತಿ ಪ್ರಧಾನ ಸಭೆಯಿಂದ ಬಂದ ಪತ್ರವನ್ನು ಸಭೆಯಲ್ಲಿ ಓದಿ ತಿಳಿಸಲಾಯಿತು.
ಇತರ ವಿಷಯಗಳ ಕುರಿತು ಮಾತನಾಡಿದ ವೇದಿಕೆಯಲ್ಲಿದ್ದ ಗೌರವಾಧ್ಯಕ್ಷರಾದ ಶ್ರೀ ಜಯ ಬಿ. ಮೆಂಡನ್ ಅವರು, ನಮ್ಮ ಸಭೆಯ ಸದಸ್ಯತ್ವವನ್ನು ಹಾಗೂ ವಿದ್ಯಾ ನಿಧಿಯನ್ನು ಆದಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಅದೇ ರೀತಿ ನಮ್ಮ ಸಭೆಯ ಹಿರಿಯ ಸದಸ್ಯರಾದ ಶ್ರೀ ಎಸ್. ಕೆ. ಉಚ್ಚಿಲ ಹಾಗೂ ಶ್ರೀ ರಾಘು ಸುವರ್ಣ ಅವರು ಸಭೆಯಲ್ಲಿ ಉಪಸ್ಥಿತರಿದ್ದು, ಸಭೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಅದಲ್ಲದೆ, ನಮ್ಮ ಊರಿನಲ್ಲಿ ಮೇ ತಿಂಗಳಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಮ ವಿಷ್ಣು ಭಜನಾ ಮಂದಿರದ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿದ ನಿಮಿತ್ತ, ಮುಂದಿನ ದಿನಗಳಲ್ಲಿ ಸಭೆಯ ಎಲ್ಲಾ ಸದಸ್ಯರು, ಕುಟುಂಬಸ್ಥರು ಹಾಗೂ ದಾನಿಗಳನ್ನು ಒಗ್ಗೂಡಿಸಿಕೊಂಡು ಒಂದು ದಿನದ ವಿಹಾರ ಕೂಟಕ್ಕೆ ಹೋಗುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಮತ್ತು ನಮ್ಮ ಎಲ್ಲಾ ಸಂಘ-ಸಂಸ್ಥೆಗಳ ಪೋಷಕ ಸಂಸ್ಥೆಯಾದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮೀರಾ–ಭಯಂದರ್ ಶಾಖೆಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ನಮ್ಮ ಊರಿನ ಮುಂಬೈ ಶಾಖೆಯ ಜತೆ ಕಾರ್ಯದರ್ಶಿ ಶ್ರೀ ಹರೀಶ್ ಎಸ್. ಕೋಟ್ಯಾನ್ ಅವರನ್ನು ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.
ಕೊನೆಯಲ್ಲಿ ಅಧ್ಯಕ್ಷರಾದ ಶ್ರೀ ಅಶೋಕ್ ಎಸ್. ಕೋಟ್ಯಾನ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿಯವರ ಧನ್ಯವಾದ ಸಮರ್ಪಣೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು.



Related posts

ಮಲಾಡ್ ಕನ್ನಡ ಸಂಘ ವಾರ್ಷಿಕ ಶ್ರೀ ಸತ್ಯ ನಾರಾಯಣ ಮಹಾಪೂಜೆ, ಭಜನೆ

Mumbai News Desk

ಭವನ್ಸ್ ಕಾಲೇಜು ಕ್ಯಾಂಪಸ್‌ನಲ್ಲಿ ಅಯ್ಯಪ್ಪ ಸ್ವಾಮಿಯ 28ನೇ ವಾರ್ಷಿಕ ಮಹಾಪೂಜೆ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಲಕ್ಷ್ ಜೆ.ಶೆಟ್ಟಿಗೆ ಶೇ.94.20 ಅಂಕ

Mumbai News Desk

ಜಗಜ್ಯೋತಿ ಕಲಾವೃಂದದ ವತಿಯಿಂದ ಶಿವರಾತ್ರಿ ಪೂಜೆ ಸಂಪನ್ನ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ    ಯುಗ್ ಸಂತೋಷ್ ಶೆಟ್ಟಿ  ಗೆ ಶೇ 82. 60 ಅಂಕ.

Mumbai News Desk

ಶ್ರೀ ಜಗದಂಬಾ ಮಂದಿರ ಡೊಂಬಿವಲಿ – ನಾಗರ ಪಂಚಮಿ ಆಚರಣೆ

Mumbai News Desk