July 25, 2026
Mumbai News Kannada
ಪ್ರಕಟಣೆ

ಮುಲ್ಕಿ: ಉಚಿತ ಆರೋಗ್ಯ ತಪಾಸಣಾ ಶಿಬಿರ: ಸಾರ್ವಜನಿಕರಿಗೆ ಸೇವೆಯ ಸದುಪಯೋಗ ಪಡೆದುಕೊಳ್ಳಲು ಕರೆ







ಮುಲ್ಕಿ ಶಾಂಭವಿ ಜೇಸಿ ಟ್ರಸ್ಟ್ (ರಿ.) ಹಾಗೂ ರೋಟರಿ ಕ್ಲಬ್ ಮುಲ್ಕಿ ಇವುಗಳ ಜಂಟಿ ಆಶ್ರಯದಲ್ಲಿ, ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಹಾಗೂ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಕುಂಟಿಕಾನ ಇವರ ಸಹಯೋಗದೊಂದಿಗೆ ಬೃಹತ್ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’ವನ್ನು ಆಯೋಜಿಸಲಾಗಿದೆ.
ಈ ಶಿಬಿರವು 2026ರ ಆಗಸ್ಟ್ 2, ರವಿವಾರದಂದು ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 12-30ರ ವರೆಗೆ ಮುಲ್ಕಿಯ ಕಾರ್ನಾಡ್‌ನಲ್ಲಿರುವ ಸಿ.ಎಸ್.ಐ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ಲಭ್ಯವಿರುವ ಸೇವೆಗಳು:

  • ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಹಾಗೂ ಅಗತ್ಯವಿರುವವರಿಗೆ ಉಚಿತ ಬಿ.ಪಿ.ಒ.ಬಿ./ಬಿ.ಪಿ.ಒ.ಎಲ್. ಕಾರ್ಡ್ ಮುಖಾಂತರ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ
  • ದಂತ ತಪಾಸಣೆ
  • ಚರ್ಮರೋಗ ತಪಾಸಣೆ
  • ಸಾಮಾನ್ಯ ಆರೋಗ್ಯ ತಪಾಸಣೆ (ಅಸ್ತಮಾ, ಅಲರ್ಜಿ ಇತ್ಯಾದಿ)
  • ಇಸಿಜಿ (ECG) ತಪಾಸಣೆ
  • ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ (BP & Sugar)

ಸಾರ್ವಜನಿಕರು ಈ ಉಚಿತ ವೈದ್ಯಕೀಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8050282520, 7353584573, 9483104506.



Related posts

ಓಂ ಶ್ರೀ ಜಗಧೀಶ್ವರಿ ಸೇವಾ ಸಮಿತಿ ದೇವುಲಪಾಡ, ಬೊರಿವಲಿ ಪೂರ್ವ : ಜ. 25ರಂದು 52ನೇ ವರ್ಷದ ಬೈದರ್ಕಳ ನೇಮೋತ್ಸವ

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬಯಿ : ಅಂಧೇರಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಜ. 31ಕ್ಕೆ ಶ್ರೀ ಶನೀಶ್ವರ ಗ್ರಂಥ ಪಾರಾಯಣ

Mumbai News Desk

ಇಂದು :ನ್ಯೂ ಪನ್ವೇಲ್ ನ ಶ್ರೀ ಜೈ ಅಂಬೇ ಮಾತಾ ಮಂದಿರ ದ ಲ್ಲಿ ಶ್ರೀ ರಾಮ ಮಹೋತ್ಸವ ಕಾರ್ಯಕ್ರಮ.

Mumbai News Desk

ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್, ಡಿ.22ರಂದು 30ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆ, ಅನ್ನಸಂತರ್ಪಣೆ, ಗುರುವಂದನೆ,

Mumbai News Desk

ಡೊಂಬಿವಲಿ: “ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಆಶ್ರಯದಲ್ಲಿ ಜ. 3ರಂದು ಶ್ರೀ ಶನೀಶ್ವರ ಮಹಾಪೂಜೆ ಹಾಗೂ ಸತ್ಯನಾರಾಯಣ ಪೂಜೆ

Mumbai News Desk

ಮಲಾಡ್  ಪೂರ್ವ   ಶ್ರೀ ಮೂಕಾಂಬಿಕ ಮಂದಿರ : ಜೂ 9 ರಂದು   ಪ್ರತಿಷ್ಠಾ ಮಹೋತ್ಸವ.

Mumbai News Desk