
ಬಂಟ್ವಾಳ:. ಗಡಿಪ್ರದಾನ ಸ್ವೀಕರಿಸಿದ ಪಾತ್ರಾಡಿಗುತ್ತು ಶ್ರೀ ಪುಷ್ಪರಾಜ್ ಶೆಟ್ಟಿ ಸಾಮಾನಿ ಗುತ್ತಿನಾರ್ ಇವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಬಂಟರ ಸಂಘ ಬಂಟ್ವಾಳ ತಾಲೂಕು ಇದರ ಅಧ್ಯಕ್ಷರು ಹಾಗೂ ಒಕ್ಕೂಟದ ಜತೆ ಕಾರ್ಯದರ್ಶಿ ಆಗಿರುವ ಚಂದ್ರಹಾಸ್ ಡಿ. ಶೆಟ್ಟಿಯವರು ಗೌರವಪೂರ್ವಕವಾಗಿ ಸನ್ಮಾನಿಸಿದರು.*
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಪಾತ್ರಾಡಿಗುತ್ತು ಪುಷ್ಪರಾಜ್ ಶೆಟ್ಟಿ ಸಾಮಾನಿಯವರು ಐಕಳ ಹರೀಶ್ ಶೆಟ್ಟಿಯವರನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಇರಾಗುತ್ತು ಜಗದೀಶ್ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಇರಾ ವಲಯ, ಯತಿರಾಜ್ ಶೆಟ್ಟಿ ಸಂಪಿಲ ಕಾರ್ಯದರ್ಶಿ ಬಂಟರ ಸಂಘ ಇರಾ ವಲಯ, ಚಂದ್ರಶೇಖರ್ ಶೆಟ್ಟಿ ಕಲ್ಲಾಡಿ ಕೂರಿಯಾಡಿ ಟ್ರಸ್ಟಿ ಬಂಟರ ವೆಲ್ಫೇರ್ ಟ್ರಸ್ಟ್ ಬಂಟರ ಸಂಘ ಇರಾ, ನಿಶ್ಚಿತ್ ಬಿ. ಶೆಟ್ಟಿ ಕಲ್ಲಾಡಿ ಸಂಘಟನಾ ಕಾರ್ಯದರ್ಶಿ ಬಂಟರ ಸಂಘ ಇರಾ ವಲಯ, ಪ್ರವೀಣ್ ಶೆಟ್ಟಿ ಆಚೆಬೈಲು ಇರಾ ಕೋಶಾಧಿಕಾರಿ ಬಂಟರ ಸಂಘ ಇರಾ, ಸುಪ್ರೀತ್ ಭಂಡಾರಿ ಕಿನ್ನಿಮಜಲಬೀಡು ಅಬ್ಬಕ್ಕ ಟಿ ವಿ. ಇವರುಗಳು ಉಪಸ್ಥಿತರಿದ್ದರು.