April 1, 2025
ಲೇಖನ

“ಜ್ಞಾನ ವಿಕಾಸ ಮಂಡಳದ ಮೆಹತಾ ಕಾಲೇಜಿನ ನಲ್ಲಿ ಕನ್ನಡ ನಾಟಕ ಚಾಮ ಚಲುವೆ ಮತ್ತು ಸೋಲಿಗರ ಬಾಲೆ ಯಶಸ್ವಿ ಪ್ರದರ್ಶನ.”

    ಮುಂಬಯಿ :  ಕನ್ನಡ ನಾಟಕಗಳ ಪ್ರದರ್ಶನ ಇತ್ತೀಚಿಗೆ ಮೆಹತಾ ಕಾಲೇಜ್ ಸಭಾಗೃಹದಲ್ಲಿ  ಶನಿವಾರ 11 ಜನೆವರಿ ಹಾಗು ರವಿವಾರ 12 ಜನೆವರಿ ಅದ್ಧೂರಿಯಿಂದ ಜರುಗಿತು. ನಾಟಕಗಳ ಪ್ರದರ್ಶನವನ್ನು ಮೈಸೂರಿನ ರಂಗಯಾನ ಟ್ರಸ್ಟ ಮತ್ತು ಹಾಡಿ ಕಲಾ ಪ್ರತಿಷ್ಠಾನ ಕರ್ಣಾಟಕ ಇವರು ನಡೆಸಿಕೊಟ್ಟರು. ಜ್ಞಾನ ವಿಕಾಸ ಮಂಡಳದ ಕನ್ನಡ ಸಂಸ್ಕೃತಿ ಸಮಿತಿ, ಪದ್ಮಾವತಿ ವೆಂಕಟೇಶ ವಿದ್ಯಾಲಯ, ಕರ್ನಾಟಕ ಪ್ರೋಗ್ರೆಸಿವ್ ಎಜುಕೇಷನ್ ಸೊಸೈಟಿ ಹಾಗು ಹವ್ಯಕ ವೆಲ್ಫೇರ್ ಟ್ರಸ್ಟ ಮುಂಬಯಿ ಇವರ ಪ್ರಾಯೋಜಕತ್ವದಲ್ಲಿ ನಾಟಕ ಚಾಮ ಚಲುವೆ ಮತ್ತು ಸೋಲಿಗರ ಬಾಲೆ  ಮೆಹತಾ ಕಾಲೇಜ್ ನ ಸಭಾಗೃಹದಲ್ಲಿ  ಅಪಾರ ಪ್ರೇಕ್ಷಕರ ಸಮ್ಮುಖದಲ್ಲಿ ಕಲಾವಿದರು ತಮ್ಮ ನಾಟ್ಯದ  ಹಾವ ಭಾವದೊಂದಿಗೆ ಹಾಗು ನಾಟ್ಯದ ವಿವಿಧ  ಭಂಗಿಗಳ ಪ್ರದರ್ಶಿಸಿ ಪ್ರೇಕ್ಷಕರ ಮನ ಸೆಳೆದರು. 

ಜಾನಪದ ನಾಟಕ ಚಾಮ ಚಲುವೆ ಚಾಮುಂಡಿ ದೇವಿಯ ಹಾಗು ನಂಜುಂಡೇಶ್ವರ ಕಲ್ಯಾಣ ಹಿನ್ನಲೆಯಲ್ಲಿ ಕಥೆಯನ್ನು  ಅದ್ಭುತ ವಾಗಿ ಸೃಷ್ಟಿಸಲಾಗಿದೆ.  ಸೋಲಿಗರ ಬಾಲೆ ಜನಪದ ನಾಟಕ  ಬಿಳಿಗಿರಿ ರಂಗನಾಥ ಹಾಗು ಸೋಲಿಗರ ಕನ್ಯ ಯ ಜೊತೆಗೆ ಕಲ್ಯಾಣ ದ ಹಿನ್ನಲೆಯ ಕಥಾವಸ್ತು ಆಕರ್ಷಣೆಯಾಗಿ ರಚಿಸಲಾಗಿದೆ. ಇವೆರಡೂ ಜಾನಪದ ನಾಟಕಟದ ಸಾಹಿತ್ಯವನ್ನು ಡಾ.ಸುಜಾತಾ ಅಕ್ಕಿ  ಸಾಹಿತ್ಯ ರಚನೆ ಮಾಡಿದ್ದಾರೆ.  ಜ್ಞಾನ ವಿಕಾಸ ಮಂಡಳದ ಅಧ್ಯಕ್ಷರಾದ ವಿ ಎನ್ ಹೆಗಡೆ ಇವರು  ಕನ್ನಡ ನಾಟಕದ ಪ್ರದರ್ಶನ ನಮ್ಮ ಮುಂಬಯಿ ಕನ್ನಡಿಗರಿಗೆ ನೀಡುತ್ತಿದ್ದು ನಮಗೆ ಸಂತಸವಾಗಿದೆ. ಕನ್ನಡ ಸಂಸ್ಕೃತಿ, ಭಾಷೆ ಹಾಗು ಸಾಹಿತ್ಯವನ್ನು ಇಂದಿನ ಯುವಕರಿಗೆ ಪರಿಚಯಸುವದು ನಮ್ಮೆಲ್ಲರ ಮುಖ್ಯ ಜವಾಬ್ದಾರಿ ಆಗಬೇಕೆಂದು ಎಂದು ಕಿವಿಮಾತು ಹೇಳಿದರು. ಶನಿವಾರ ಮೊದಲನೆಯ ದಿನದ ನಾಟಕ ಚಾಮ ಚಲುವೆಯ ಉದ್ಘಾಟನೆ ಸಮಾರಂಭ ಸಭೆಯಲ್ಲಿ ನಾಟಕದ ನಿರ್ದೇಶಕ  ವಿಕಾಸ ಚಂದ್ರ   ಜ್ಞಾನ ವಿಕಾಸ ಮಂಡಳದ ಅಧ್ಯಕ್ಷ ವಿ ಎನ್ ಹೆಗಡೆ, ಕಾರ್ಯದಕ್ಷ  ಕೃಷ್ಣಾ ಏಚ್ ದೇಶಪಾಂಡೆ. ಪದ್ಮಾವತಿ ವೆಂಕಟೇಶ ವಿದ್ಯಾಲಯದ ಅಧ್ಯಕ್ಷ  ರಮೇಶ ಪಾಟೀಲ ಅದೇ ಸಂಸ್ಥೆಯ ಕಾರ್ಯದರ್ಶಿ  ಸಂಜಯ ಲೋಕಾಪುರ, ಪ್ರೋಗ್ರೆಸಿವ್ ಎಜುಕೇಷನ್ ಸೊಸೈಟಿಯ ಚೇರ್ಮನ್  ಎಂ ಆರ್ ಹುಲ್ಯಾಳ್ಕರ, ಮೆಹತಾ ಕಾಲೇಜಿನ ಪ್ರಾಚಾರ್ಯ ಡಾ. ಬಿ. ಆರ್.ದೇಶಪಾಂಡೆ ಹಾಗು ಮುಂತಾದ ಗಣ್ಯರು ಉಪಸ್ಥಿತರಿದ್ದರು.  ನಾಟಕದ ಸಮಾರೋಪ ಸಮಾರಂಭ ರವಿವಾರ ಸೋಲಿಗರ ಬಾಲೆ ನಾಟಕ ಪ್ರದರ್ಶನಗೊಂಡ ಬಳಿಕ ಜರುಗಿತು. ಮುಖ್ಯ ಅತಿಥಿ ಯಾಗಿ  ವಿಷ್ಣು ಭಾಗವತ ಮಾತನಾಡುತ್ತಾ ಹವ್ಯಕ ವೆಲ್ಫೇರ್ ಟ್ರಸ್ಟ ಕಳೆದ ಆರು ದಶಕಗಳಿಂದ  ಸಾಮಾಜಿಕ ಹಾಗು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯರ್ಜನೆಗಾಗಿ ಸಹಾಯ ಹಾಗು ಭಗವದ್ಗೀತೆಯ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹವ್ಯಕ ಬ್ರಾಹ್ಮಣರ ಸಂಸ್ಥೆಗಳಲ್ಲಿ ಅಗ್ರೆಗಣ್ಯವಾಗಿದೆ ಎಂದು ಹೇಳಿದರು. ನಾಟಕ ಕನ್ನಡದ ನೆಲ, ಇತಿಹಾಸ ಹಾಗು ಸಾಹಿತ್ಯ ಪರಿಚಯಿಸುತ್ತದೆ.ಇಂತಹ ಕಾರ್ಯಕ್ರಮಗಳು ಮುಂಬೈಯಲ್ಲಿ ನಡೆಯುವದು ಅವಶ್ಯ ಎಂದು ಹೇಳಿದರು. ಸಮಾರೋಪ ಸಮಾರಂಭದಲ್ಲಿ ನಿರ್ದೇಶಕ ಮತ್ತು ಅವರ ತಂಡ  ರಮೇಶ ಪಾಟೀಲ ಹಾಗು  ವಿ ಎನ್ ಹೆಗಡೆ ಅವರನ್ನು ಸನ್ಮಾನಿಸಿದರು. ಸಮಾರಂಭದಲ್ಲಿ ಹಲವಾರು ಗಣ್ಯರಿಗೆ ಜ್ಞಾನ ವಿಕಾಸ ಮಂಡಳದ ಅಧ್ಯಕ್ಷರಾದ  ವಿ ಎನ್ ಹೆಗಡೆ, ಕಾರ್ಯಾಧ್ಯಕ್ಷ   ಕೃಷ್ಣಾ ಏಚ್. ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ  ವ್ಯಾಸಮೂರ್ತಿ ಮುಗಳಿ ಇವರು ಪುಷ್ಪಗುಚ್ಛ ಸಮರ್ಪಿಸಿ  ಗೌರವಿಸಿದರು.  ವಿಪಿಎಮ್ ಸಂಸ್ಥೆಯ ಅಧ್ಯಕ್ಷ  ಶ್ರೀನಿವಾಸ  ಮೊಕಾಶಿ , ಕೋಶಾಧಿಕಾರಿ   ಆನಂದ ಕಟಗೇರಿ,  ಕನ್ನಡ ಕಲಾ ಕೇಂದ್ರದ ಪದಾಧಿಕಾರಿ,  ಮಧುಸೂದನ, ಹವ್ಯಕ ವೆಲ್ಫೇರ್ ಟ್ರಸ್ಟಿನ   ಕೆ ಎಸ್ ಭಟ್, ಜಿ ವಿ ಹೆಗಡೆ, ಹಾಗೂ   ಆರ್ ವಿ ಜೋಶಿ, ಶೈಲಜಾ ಹೆಗಡೆ, ಜ್ಞಾನ ವಿಕಾಸ ಮಂಡಳದ ಆಡಳಿತ ಮಂಡಳಿಯ ಸದಸ್ಯರಾದ  ಏನ್.ಆರ್. ರಾವ್,  ಸತೀಶ ಖೀಲಾರಿ, ಪಾಂಡುರಂಗ ಮಿರ್ಜಿ,  ಸದಸ್ಯ  ಗಾಯತ್ರಿ ಕುಲಕರ್ಣಿ, ಜ್ಞಾನ ವಿಕಾಸ ಮಂಡಳ ವಿದ್ಯಾಲಯ ಕಲವಾ ಇದರ ಉಪ ಪ್ರಾಚಾರ್ಯ  ನೇತ್ರಾ ಗಾಂವಕರ,   ಅಶೋಕ ಡಂಬಳ,  ರವೀಂದ್ರ ಕುಲಕರ್ಣಿ,  ವಿಜ್ಞಾನಿ ಶ್ರೀ ಅಶೋಕ ನಾಗರಹಳ್ಳಿ,     ಮುಂತಾದ ಗಣ್ಯರು ಉಪಸ್ಥಿತರಿದ್ದರು. 

ವಿದ್ಯಾರ್ಥಿ ಸುವೀರ ದೇಶಪಾಂಡೆ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮವನ್ನು  ಪ್ರಾಧ್ಯಾಪಕಿ ಡಾ.ರಶ್ಮಿ ಲೆಂಗಾಡೆ ಹಾಗು  ಪ್ರಾಧ್ಯಾಪಕಿ ಡಾ. ಸುನೀತಾ ಜೋಶಿ ನಡೆಸಿಕೊಟ್ಟರು. ಪ್ರಭಾರಿ  ಪ್ರಾಚಾರ್ಯ ಡಾ. ಬಿ. ಆರ್ ದೇಶಪಾಂಡೆ ವಂದನಾರ್ಪಣೆ ಸಲ್ಲಿಸಿದರು.

Related posts

ಹನಿ ಕತೆ: ಪರಿಹಾರ

Vani Prasad

ಮೇರು ವ್ಯಕ್ತಿತ್ವದ ಸಾಧಕನ ಸಾಧನೆಯನ್ನು ತೆರೆದಿಟ್ಟ ಸುವರ್ಣಯುಗ

Mumbai News Desk

ಕರೆದಲ್ಲಿ ಬರುವ, ಕೇಳಿದ ವರ ಕೊಡುವ ಮೆಟ್ಕಲ್ ಗುಡ್ಡ ಗಣಪತಿ

Chandrahas

ದೀಪಾವಳಿ …….ಬೆಳಕಿನೆಡೆಗೆ ಬದುಕು

Mumbai News Desk

ತುಳು-ಕನ್ನಡಿಗರ ಮನ ಸೆಳೆದ ಅಭಿನಯ ಮಂಟಪ ಮುಂಬೈಯ ತುಳು ಜಾನಪದ ಐತಿಹಾಸಿಕ ನಾಟಕ – ಕಲ್ಕುಡ-ಕಲ್ಲುರ್ಟಿ, 

Mumbai News Desk

ಸಂಘಟಕ, ರಂಗ ನಟ, ಭಾಸ್ಕರ ಸುವರ್ಣ ಸಸಿಹಿತ್ಲುರವರಿಗೆ ವಿಶ್ವೇಶತೀರ್ಥ ಜೀವಮಾನ ಪ್ರಶಸ್ತಿ*

Mumbai News Desk