April 1, 2025
ಕರಾವಳಿ

ಜನವರಿ 26ರಂದು ಕರಾವಳಿ ಕಡಲತೀರದಲ್ಲೊಂದು ವಿಶೇಷ, ತಪ್ಪದೇ ಭಾಗವಹಿಸಿ

ಸಮುದ್ರದ ಅಲೆಯ ಭೋರ್ಗರೆತದ ಎದುರು ಮಂತ್ರದ ಅಲೆ…!!

ಈ ಸುಂದರ ಪ್ರಕೃತಿ , ಮನುಷ್ಯನನ್ನೂ ಒಳಗೊಂಡಂತೆ ಇಲ್ಲಿರುವ ಜೀವ ಚರಾಚರಗಳು ಎಲ್ಲವೂ ಭಗವಂತನ ಸೃಷ್ಟಿ; ಅದಕ್ಕೆಲ್ಲಕ್ಕೂ ಅದೇ ಅತಿ ಮಾನುಷ ಶಕ್ತಿಯ ನಿಯಂತ್ರಣ.
ಆದ್ದರಿಂದ ಆ ಪ್ರಕೃತಿಯಿಂದ ಎದುರಾಗಬಹುದಾದ ಯಾವ ಸವಾಲುಗಳನ್ನೂ ಮಾನುಷ ಪ್ರಯತ್ನದಿಂದಲೂ ಎದುರಿಸಲು ಅಸಾಧ್ಯವೆನಿಸಿದಾಗ ಅದರ ಸೃಷ್ಟಿ ಕರ್ತನಿಗೇ ಮೊರೆ ಹೋಗಬೇಕು. ಇದೊಂದೇ ದಾರಿ .
ಅಂಥಹ ಒಂದು ಪ್ರಯತ್ನದ ಭಾಗವೇ ಸಮುದ್ರತೀರದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ‌ ಪಾರಾಯಣ ಅಭಿಯಾನ.

ಜಾಗತಿಕ ತಾಪಮಾನ ಏರಿದಂತೆಲ್ಲ ಭೂಮಿಯ ಆಂತರಿಕ ಉಷ್ಣತೆಯೂ ಹೆಚ್ಚಾಗುವುದರ ಪರಿಣಾಮ ಸಮುದ್ರದ ಅಲೆಗಳೂ ಉಕ್ಕೇರಿ ದ ರಭಸಕ್ಕೆ ತೀರ ಪ್ರದೇಶಗಳೆಲ್ಲ ಕೊಚ್ಚಿ ಹೋಗಬಹುದಾದ ಮತ್ತು ಪರಿಣಾಮವಾಗಿ ಅನೂಹ್ಯ ನಷ್ಟ , ಪ್ರಾಣಹಾನಿ ಇತ್ಯಾದಿಗಳು ಸಂಭವಿಸಬಹುದಾದ ಆತಂಕ ನಮ್ಮ ಮುಂದಿದೆ.
ಯಾವ ವೈಜ್ಞಾನಿಕ ಶೋಧದ ಸಾಧನ ಸಲಕರಣಗಳೂ ಮನುಷ್ಯ ಪ್ರಯತ್ನಗಳಿಂದಲೂ ಈ ಸವಾಲನ್ನು ಎದುರಿಸೋದೇ ಅಸಾಧ್ಯ ಎಂಬುದು ಅರಿವಿಗೆ ಈಗಾಗಲೇ ಬಂದ ವಿಚಾರ. ಹಾಗಿರುವಾಗ ಉಳಿಯುವುದೊಂದೇ ದಾರಿ‌ – ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ . ಸೃಷ್ಟಿಕರ್ತನಾದ ಭಗವಂತನೇ ಈ ಪ್ರಾಕೃತಿಕ ಸವಾಲುಗಳನ್ನು ಹಿಮ್ಮೆಟ್ಟಿಸಿ ಸಕಲ ಜೀವರಿಗೆ ಶ್ರೇಯಸ್ಸನ್ನು ಕರುಣಿಸು ಎಂದು ಶರಣಾಗುವ ಬಗೆಯೇ ಈ ಸಮುದ್ರ ತೀರದಲ್ಲಿ ಸಾವಿರಾರು ಕಂಠಗಳಲ್ಲಿ ವಿಷ್ಣುಸಹಸ್ರನಾಮ ಪಠಿಸುವ ವಿಶೇಷ ಕಾರ್ಯಕ್ರಮ .‌

ಆದ್ದರಿಂದ ಹೋಗ್ಬೇಕಾ ಬೇಡ್ವಾ ಅಂತ ಯೋಚಿಸ್ತಾ ಕೂತ್ಕೊಳ್ಳಬೇಡಿ. ಯಾಕೆಂದ್ರೆ ನಾಳೆ ನಮಗೆ ನಿಮಗೆಲ್ಲರಿಗೂ ಈ ಸಂಭಾವ್ಯ ಅಪಾಯ ಇದ್ದೇ ಇದೆ. ಆದ್ದರಿಂದ ಮನೆ ಮಂದಿಯೊಂದಿಗೆ ಜನವರಿ 26 ರಂದು ಸಂಜೆ 4 ರಿಂದ 6 ರ ವರೆಗೆ ನಿಮ್ಮ‌ಸಮೀಪದ ಸಮುದ್ರ ತೀರದಲ್ಲಿ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಮನೆಮಂದಿ ಹಾಗೂ ಬಂಧು ಮಿತ್ರರೊಂದಿಗೆ ಶ್ರದ್ಧೆಯಿಂದ ಭಾಗವಹಿಸಿ ವಿಷ್ಣು ಸಹಸ್ರನಾಮ‌ಪಠಿಸಿ ಸಾಗರದ ಅಲೆಗಳ ಮುಂದೆ ಮಂತ್ರದ ಅಲೆಯನ್ನು ಸೃಷ್ಟಿಸೋಣ .
ತಮಗೆಲ್ಲರಿಗೂ ಆದರದ ಸ್ವಾಗತ

ಶ್ರೀ ವಿಷ್ಣು ಸಹಸ್ರನಾಮ ಪಠಣ ಸಮಿತಿ‌

ಪಾರಾಯಣ ನಡೆಯುವ ಜಿಲ್ಲೆಗಳು
ಉಡುಪಿ , ದಕ್ಷಿಣ ಕನ್ನಡ, ಕಾಸರಗೋಡು, ಕಣ್ಣೂರು

ವ್ಯವಸ್ಥೆ ದೃಷ್ಟಿಯಿಂದ ಸಂಘಟಕರು ತಮಗೆ ಸೂಚಿಸಿದ ಸ್ಥಳದಲ್ಲಿಯೇ ಪಠಣ ಮಾಡಿ ಸಹಕಾರಿಸ ಬೇಕಾಗಿ ವಿನಂತಿ

ಉಡುಪಿ ತಾಲೂಕಿನಿಂದ ಪ್ರತ್ಯೇಕ ಅಥವಾ ಗುಂಪು ತಂಡವಾಗಿ ಭಾಗವಹಿಸವವರು ಕೆಳಗಿನ ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ ನಿಮ್ಮ ಕೇಂದ್ರವನ್ನು ನಿಗದಿಪಡಿಸಿ.

ಉಡುಪಿ ತಾಲೂಕಿನ ಮಲ್ಪೆಯಲ್ಲಿ -4 ಕೇಂದ್ರ
ಪಡುಕೆರೆ -5 ಕೇಂದ್ರ
ಬಡಾನಿಡಿಯೂರು ತೊಟ್ಟಂ -2 ಕೇಂದ್ರ
ಬೇಂಗ್ರೆ -1 ಕೇಂದ್ರ

ಸಂಪರ್ಕ ಸಂಖ್ಯೆ- 9880103649 ಪ್ರಶಾಂತ್
9845333219 ಸತೀಶ್

Related posts

ಅಯೋಧ್ಯೆ ಶ್ರೀ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಶಂಕರಪುರ ಶ್ರೀ ಸಾಯಿ ಈಶ್ವರ್ ಗುರೂಜಿಗೆ ಆಹ್ವಾನ.

Mumbai News Desk

ಕುಲಾಲ  ಸಂಘ ಮುಂಬೈ ಯ  ಕುಲಾಲ ಭವನ ಮಂಗಳೂರು ಬ್ಯಾಂಕ್ವೆಟ್ ಹಾಲ್ ಗೆ ಮುಹೂರ್ತ,

Mumbai News Desk

ಅಯೋಧ್ಯೆಯಿಂದ ಬಂದು ಕಾಪು ಹೊಸ ಮಾರಿಗುಡಿ ದೇವಳದಲ್ಲಿ : 9 ದೀಪ ಬೆಳಗಿದ ಪೇಜಾವರ ಶ್ರೀಗಳು

Mumbai News Desk

ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶದ ಮನವಿ ಬಿಡುಗಡೆ

Mumbai News Desk

“ಕಲಾವಿದರನ್ನು ಗುರುತಿಸುವ ರಂಗಚಾವಡಿಯ ಉದ್ದೇಶ ಶ್ಲಾಘನೀಯ” -ಕನ್ಯಾನ ಸದಾಶಿವ ಶೆಟ್ಟಿ

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಕುಂಭ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk