26.8 C
Karnataka
April 7, 2025
ಮುಂಬಯಿ

ಮಲಾಡ್ ಕನ್ನಡ ಸಂಘದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ



ಇತಿಹಾಸ ಪರಂಪರೆಯ ಭವ್ಯ ನಾಡು ಕರ್ನಾಟಕ : ನ್ಯಾ. ಜಗದೀಶ್ ಎಸ್ ಹೆಗ್ಡೆ

ಚಿತ್ರ ವರದಿ : ರಮೇಶ್ ಉದ್ಯಾವರ

ಮಲಾಡ್ ನ. 6:  ಮಲಾಡ್ ಕನ್ನಡ ಸಂಘ 4 ಬಿ 21 ಯುನಿಟಿ ಅಪಾರ್ಟ್ಮೆಂಟ್ ಮಾರ್ವೆ ರೋಡ್, ಮಲಾಡ್ ಪಶ್ಚಿಮ ಇದರ ವತಿಯಿಂದ ಕರ್ನಾಟಕ ರಾಜ್ಯ 50ನೇ ರಾಜ್ಯೋತ್ಸವದ ಅಂಗವಾಗಿ ನ. 5ರಂದು ಸಂಘದ ಕಚೇರಿಯ  ರಮನಾಥ ಪಯ್ಯಡೆ ಸ್ಮಾರಕ ಕಿರು ಸಭಾಗೃಹದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ  ಜರುಗಿತು.      

           ಪ್ರಾರಂಭದಲ್ಲಿ ಸದಸ್ಯೆ ಸುಜಾತ ಅಮೀನ್ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಜಗದೀಶ್ ಎಸ್ ಹೆಗ್ಡೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಇಂಡಿಯನ್ ಆಯಿಲ್ ಕಂಪನಿ ನಿವೃತ್ತ ಅಧಿಕಾರಿ ದಾಮೋದರ ಶೆಟ್ಟಿಗಾರ್ ಉಪಸ್ಥಿತರಿದ್ದರು. 

      ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ನ್ಯಾ. ಜಗದೀಶ್ ಎಸ್ ಹೆಗ್ಡೆ ವಿಭಿನ್ನ ಭೌಗೋಳಿಕ ಮತ್ತು ಪ್ರಾದೇಶಿಕ ವೈವಿಧ್ಯತೆಯಿಂದ ಕೂಡಿದ ಕರ್ನಾಟಕ ಭವ್ಯ ಇತಿಹಾಸ ಪರಂಪರೆ ಪ್ರಕೃತಿ ರಮಣೀಯ ಹಾಗೂ ಭಾವೈಕ್ಯತೆ ಕನ್ನಡ ನಾಡಿನ ಸೊಬಗಿಗೆ ಹೆಸರುವಾಸಿಯಾಗಿದೆ. ಕರ್ನಾಟಕ ರಾಜ್ಯೋತ್ಸವ ಕನ್ನಡಿಗರ ಒಗ್ಗಟ್ಟಿನ ಪ್ರತೀಕ ಮನೆಯಲ್ಲಿ ಆಚರಿಸುವ ಹಬ್ಬದಂತೆ ಜಾತಿ ಮತ ಭೇದವಿಲ್ಲದೆ ವಿಶಾಲ ಕರ್ನಾಟಕದಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಇದು ಸಮಗ್ರ ಕರ್ನಾಟಕದಲ್ಲಿ ಆಚರಿಸುವ ಹಬ್ಬವಾಗಿದೆ ಕರ್ನಾಟಕ ಭಾಷೆ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮಲಾಡ್ ಕನ್ನಡ ಸಂಘವು ಕಾರ್ಯ ವ್ಯಸಗುತ್ತಿದ್ದು ನಾವೆಲ್ಲಾ ಒಗ್ಗಟ್ಟಾಗಿ ಮಲಾಡ್ ಕನ್ನಡ ಸಂಘದ ಭವಿಷ್ಯದ ಅಭಿವೃದ್ಧಿ ಬಗ್ಗೆ ವಿಶೇಷ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು. 

     ಗೌರವ ಪ್ರಧಾನ ಕಾರ್ಯದರ್ಶಿ ಆಶಾಲತಾ ಎಸ್ ಕೋಟ್ಯಾನ್ ಕರ್ನಾಟಕ ಭಾಷೆ ಸಾಹಿತ್ಯ ಸಂಸ್ಕೃತಿ ಬೆಳವಣಿಗೆ ನೀಡಿದ ಸಾಹಿತಿಗಳನ್ನು ಕವಿಗಳನ್ನು ನಾವಿಂದು ನೆನಪಿಸುವ ಅವಶ್ಯಕತೆ ಇದ್ದು ಕರ್ನಾಟಕದ ಭವ್ಯ ಸಂಸ್ಕೃತಿಯನ್ನು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಉಳಿಸಿಕೊಂಡು ಬಂದಿದೆ. ಮಲಾಡ್ ಕನ್ನಡ ಸಂಘವು ಪ್ರಾರಂಭದ ದಿನದಿಂದಲೂ ಮಲಾಡ್ ಪರಿಸರದಲ್ಲಿ ಭಾಷೆ ಸಂಸ್ಕೃತಿಯನ್ನು  ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಂಡು ಬಂದ ಸಂಸ್ಥೆಯಾಗಿದೆ.  ಮುಂದೆಯೂ ಸಂಘದ ಸದಸ್ಯರ ಸಲಹೆ ಸೂಚನೆ ಮೇರೆಗೆ ಸದಸ್ಯರ ಅಶೋತ್ತರಕ್ಕೆ ಅನುಗುಣವಾಗಿ ವೈವಿಧ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು  ಎಂದು ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರನ್ನು ಅಭಿನಂದಿಸಿದರು. 

     ಬಳಿಕ ಮಹಿಳಾ ಸದಸ್ಯರಾದ ಶಾಂಭವಿ ಬಿ ಶೆಟ್ಟಿ ಶಾರದಾ ಪೂಜಾರಿ ಮತ್ತು ಸಂಗಡಿಗರಿಂದ ವಿವಿಧ ಕವಿಗಳು ರಚಿಸಿದ ನಾಡಗೀತೆ ಇನ್ನಿತರ ಗೀತೆಗಳು ಹಾಡಿ ರಚಿಸಿದರು.  

     ವೇದಿಕೆಯಲ್ಲಿ ಉಪಾಧ್ಯಕ್ಷರಾದ ದಯಾನಂದ ಎಂ ಶೆಟ್ಟಿ ಕೋಶಾಧಿಕಾರಿ ಶಾಂಭವಿ ಬಿ ಶೆಟ್ಟಿ ಜೊತೆ ಕಾರ್ಯದರ್ಶಿ ಜಯಪ್ರಕಾಶ್ ಸಾಲ್ಯಾನ್ ಮಹಿಳಾ ವಿಭಾಗದ ಕಾರ್ಯದರ್ಶಿ ಲಲಿತಾ ವಿ ಭಂಡಾರಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಿಸಿದ ಕಾರ್ಯದರ್ಶಿ ಆಶಾಲತಾ ಎಸ್ ಕೋಟ್ಯಾನ್ ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದವಿತ್ತರು.

Related posts

ಅ  29   ಗೋರೆಗಾಂವ್ ಪಶ್ಚಿಮದಲ್ಲಿ ಕಡಬ ಸಂಸ್ಕರಣಾ ಸಮಿತಿಯ ವಾರ್ಷಿಕೋತ್ಸವ –

Mumbai News Desk

ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಿಲಿ, ಇದರ ದಶಮಾನೋತ್ಸವ ಕಾರ್ಯಕ್ರಮ.

Mumbai News Desk

ಶ್ರೀ ರಜಕ ಸಂಘ ಮುಂಬಯಿಯ 85ನೇ ವಾರ್ಷಿಕ ಮಹಾಸಭೆ

Mumbai News Desk

ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ, ನೃತ್ಯ ಸ್ಪರ್ಧೆ

Mumbai News Desk

ಕಲಂಬೋಲಿ  ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ದ  34 ನೆ  ವಾರ್ಷಿಕ ಮಹಾಪೂಜೆ .

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ) ಮುಂಬಯಿ ನೂತನ ಅಧ್ಯಕ್ಷರಾಗಿ ರವೀಶ್ ಜಿ ಆಚಾರ್ಯ ಆಯ್ಕೆ 

Mumbai News Desk