April 1, 2025
ಕ್ರೀಡೆ

ಸಮರ್ಥ್ ರೈ, ಮಹಾರಾಷ್ಟ್ರ ರಾಜ್ಯ ಲೀಗ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಅಂಡರ್-15 ವಿಭಾಗದಲ್ಲಿ ಅತೀ ಹೆಚ್ಚು ಗೋಲ್ ಹೊಡೆತದಿಂದ,ತಂಡ ಟಾಪ್ 3ರ ಸ್ಥಾನಕ್ಕೆ

ಮೀರಾರೋಡ್. ಮೀರಾ-ಭಾಯಂದರ್ ನ ಕನಕಿಯಾ ಇಂಟರ್ನ್ಯಾಶನಲ್ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಸಮರ್ಥ್ ರೈ ಅವರು ಮಹಾರಾಷ್ಟ್ರ ರಾಜ್ಯ ಲೀಗ್ ಫುಟ್ಬಾಲ್ ಟೂರ್ನಮೆಂಟ್‌ನ ಅಂಡರ್-15 ವಿಭಾಗದಲ್ಲಿ ದೆರ್ವನ್ ತಂಡದ ಮೂಲಕ ರತ್ನಗಿರಿ ಜಿಲ್ಲೆಯನ್ನು ಪ್ರತಿನಿಧಿಸಿ ಅತ್ಯುತ್ತಮ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ,

  ಟೂರ್ನಮೆಂಟ್‌ನಲ್ಲಿ ಅವರ ಪ್ರಮುಖ ಪಾತ್ರದಿಂದಾಗಿ ಮತ್ತು ಅತಿ ಹೆಚ್ಚು ಗೋಲು ಬಾರಿಸಿ ತಂಡವು ಟೂರ್ನಮೆಂಟ್‌ನಲ್ಲಿ ಟಾಪ್ 3 ಸ್ಥಾನವನ್ನು ಕಾಯ್ದುಕೊಳ್ಳಲು ಸಹಾಯವಾಗಿದೆ. ಅವರು ಬೋರಿವಿಲಿಯ
ಸಿಎಫ್ಸಿಐ ಕ್ಲಬ್‌ನಲ್ಲಿ ಫುಟ್ಬಾಲ್ ತರಬೇತಿ ಪಡೆಯುತ್ತಿದ್ದಾರೆ.

2011 ಜೂನ್ 21 ರಂದು ಮಂಗಳೂರಿನ ಮುಚ್ಚೂರು ಗ್ರಾಮದಲ್ಲಿ ಜನಿಸಿದ ಸಮರ್ಥ್ ರೈ ಮುಂಬಯಿ ನಿವಾಸಿಯಾಗಿದ್ದು , ಮಿಾಂಜ ಮಂಜಲ್ತೋಡಿ ಪೊಸನಿಕೆ ಮನೆ ಚಂದ್ರಶೇಖರ್ ರೈ ಮತ್ತು ಮುಚ್ಚೂರು ಕಲ್ಕುಡೆ ಕೈದುಮಾರು ಗುತ್ತು ಕುಶಲ ರೈ ಅವರ ಪುತ್ರ. 

ಸಮರ್ಥ್ ರೈ ಯವರಿಗೆ ಕರ್ನಾಟಕ ರಾಜ್ಯೋತ್ಸವ ಸಾಧಕ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ

ಸಮರ್ಥ್ ರೈ ಅವರ ಈ ಸಾಧನೆ ಅವರ ಪರಿಶ್ರಮ ಮತ್ತು ಸಮರ್ಪಣೆಯ ಫಲವಾಗಿದೆ, ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು.

Related posts

ಆದರ್ಶ ವಿದ್ಯಾನಿಕೇತನ ಪ್ರೌಢಶಾಲೆ,ಮೀರಾ ರೋಡ್ ನ,ವಾರ್ಷಿಕ ಕ್ರೀಡಾಕೂಟ,

Mumbai News Desk

ಡೊಂಬಿವಲಿ ಕರ್ನಾಟಕ ಸಂಘ:ಕ್ರೀಡಾ ವಿಭಾಗದ ಒಳಾಂಗಣ ಕ್ರೀಡಾಕೂಟಕ್ಕೆ ಅದ್ದೂರಿಯ ಚಾಲನೆ     

Mumbai News Desk

N.E.S ಸೋಸೈಟಿಯ ಅಭಿನವ ಪಬ್ಲಿಕ್ ಸ್ಕೂಲ್ (CBSE Board) ನ ವಾರ್ಷಿಕ ಕ್ರೀಡಾಕೂಟ

Mumbai News Desk

ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಕಮಿಟಿ (AMW);    ಅಂತರಾಷ್ಟ್ರೀಯ ವೇಟ್ ಲಿಫ್ಟರ್ ಉದಯ  ಶೆಟ್ಟಿ  ಆಯ್ಕೆ

Mumbai News Desk

ಗುರುಪುರ ಬಂಟರ ಮಾತೃ ಸಂಘಕ್ಕೆ  ಪುಣೆ, ಪಡುಬಿದ್ರಿ ಇಲ್ಲಿ ನಡೆದ ಕ್ರೀಡಾಕೂಟದಲ್ಲಿ ಅವಳಿ ಪ್ರಶಸ್ತಿಗಳು

Mumbai News Desk

ವಸಯಿ ಕಲಾ ಕ್ರಿಡೋತ್ಸವ ದಲ್ಲಿ  ಥ್ರೋ ಬಾಲ್ ಆಟದಲ್ಲಿ ಉಷಾ ಶ್ರೀಧರ ಶೆಟ್ಟಿ  ಕರ್ನಿರೆ ಇವರ ನಾಯಕತ್ವ ತಂಡಕ್ಕೆ  ಪ್ರಥಮ ಸ್ಥಾನ . 

Mumbai News Desk