April 1, 2025
ಲೇಖನ

ನಾಟಕ ಕ್ಷೇತ್ರದಲ್ಲಿ ಹೊಸ ದಾಖಲೆ ಸೃಷ್ಟಿಸಲು ಹೊರಟಿದೆ ಸಾಯಿಶಕ್ತಿ ಕಲಾಬಳಗ : ಒಂದೇ ದಿನ ಮೂರು ರಾಜ್ಯಗಳಲ್ಲಿ ನಾಟಕ ಪ್ರದರ್ಶನ

ಶ್ರೀಮತಿ ಲಾವಣ್ಯ ವಿಶ್ವಾಸ್ ಕುಮಾರ್ ದಾಸ್ ಸಾರಥ್ಯದ ತಂಡದಿಂದ ವಿಭಿನ್ನ ಪ್ರಯತ್ನ

ಮಂಗಳೂರು : ನಾಟಕ ರಂಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ಪ್ರಯತ್ನದಲ್ಲಿ, ಮಂಗಳೂರಿನ ಸಾಯಿಶಕ್ತಿ ಕಲಾಬಳಗ ಈಗಾಗಲೇ ಸಾಕಷ್ಟು ಹೆಸರನ್ನು ಹುಟ್ಟುಹಾಕಿದೆ. ಈ ತಂಡ ಇದೀಗ ಒಂದೇ ದಿನ ಮೂರು ರಾಜ್ಯಗಳಲ್ಲಿ ನಾಟಕ ಪ್ರದರ್ಶಿಸುವ ಮೂಲಕ ಹೊಸ ದಾಖಲೆ ಬರೆಯಲು ಮುಂದಾಗಿದೆ. ಇದು ನಾಟಕ ಕ್ಷೇತ್ರದಲ್ಲಿ ಅಪೂರ್ವ ಪ್ರಯತ್ನವಾಗಿದ್ದು , ನಾಟಕದ ಪ್ರಭಾವವನ್ನು ವಿಸ್ತರಿಸುವ ಮಹತ್ವಾಕಾಂಕ್ಷಿ ಯೋಜನೆ ಎಂದು ಪರಿಗಣಿಸಲಾಗಿದೆ. ಈ ವಿಶಿಷ್ಟ ಪ್ರಯತ್ನದ ಅಂಗವಾಗಿ, ತಂಡದ ಕಲಾವಿದರು ಕರ್ನಾಟಕ, ಕೇರಳ , ಮತ್ತು ಮುಂಬೈ ಮಹಾನಗರಿಯಲ್ಲಿ ಒಂದೇ ದಿನ ನಾಟಕ ಪ್ರದರ್ಶನ ನಡೆಸಲಿದ್ದಾರೆ. ತಂಡವು ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದ್ದು, ತಂತ್ರಜ್ಞಾನ ಮತ್ತು ಕ್ರಿಯಾತ್ಮಕತೆಯ ಸಹಾಯದಿಂದ ಈ ಮಹತ್ವಾಕಾಂಕ್ಷಿ ಪ್ರಯತ್ನವನ್ನು ತಲುಪಲು ಮುಂದಾಗಿದೆ.

ಸಾಯಿಶಕ್ತಿ ಕಲಾಬಳಗ ಕಳೆದ ಕೆಲವು ವರ್ಷಗಳಿಂದ ನಾಟಕ ರಂಗದಲ್ಲಿ ಕ್ರಿಯಾಶೀಲವಾಗಿದ್ದು, ಪೌರಾಣಿಕ ನಾಟಕಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ತಂಡವು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಇತಿಹಾಸಾತ್ಮಕ ಕಥಾಹಂದರವನ್ನು ಒಳಗೊಂಡ ನಾಟಕಗಳನ್ನು ಪ್ರಸ್ತುತಪಡಿಸುವ ಮೂಲಕ ವಿಭಿನ್ನ ಶೈಲಿಯ LED ತಂತ್ರಜ್ಞಾನಕ್ಕೆ ಪ್ರಾಧಾನ್ಯ ನೀಡಿದೆ. ಈ ಹೊಸ ಪ್ರಯತ್ನವು ನಾಟಕ ಕ್ಷೇತ್ರದಲ್ಲಿ ಹೊಸ ದಾರಿ ತೆರೆಯಲಿದೆ ಎಂದು ತಂಡದ ಸಾರಥಿ ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ತಿಳಿಸಿದ್ದಾರೆ.

ಒಂದೇ ದಿನ ಮೂರು ರಾಜ್ಯಗಳಲ್ಲಿ ನಾಟಕ ಪ್ರದರ್ಶಿಸುವ ಈ ಸಾಹಸವಂತರ ಪ್ರಯತ್ನ ಕಲಾಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದೆ. ನಾಟಕ ಪ್ರೇಮಿಗಳು ಈ ವಿಶೇಷ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಪ್ರದರ್ಶನಗಳು ಯಶಸ್ವಿಯಾಗುವುದರಿಂದ ನಾಟಕ ರಂಗದಲ್ಲಿ ಹೊಸತೊಂದು ಅಧ್ಯಾಯವನ್ನು ರಚಿಸಲಾಗುವುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

60 ವರ್ಷ ಇತಿಹಾಸ ಇರುವ ಸಾಯಿನಾಥ ಮಂದಿರ ಎಂಬ ಹೆಸರನ್ನು ಪಡೆದು ಕಳೆದ 50 ವರ್ಷಗಳಿಂದ ಸಮಾಜ ಸೇವೆಯನ್ನು ಮಾಡುತ್ತಿರುವ ಸುಮಾರು 250ಕ್ಕೂ ಹೆಚ್ಚು ಸದಸ್ಯರು ಇರುವ ‘ಸಾಯಿಶಕ್ತಿ ಕಲಾ ಬಳಗ ಎನ್ನುವ ಹೊಸ ತಂಡವನ್ನು ಕಟ್ಟಿ ಈ ಸಂಘದ ಮೂಲಕ ಅದೆಷ್ಟೋ ಕೆಲಸಕಾರ್ಯಗಳನ್ನು. ಮಾಡಿದ ಹೆಗ್ಗಳಿಕೆ ಸಾಯಿಬಾಬಾ ಮಂದಿರಕ್ಕಿದೆ. ಸಾಯಿಬಾಬಾನ ಮಹಿಮೆಯನ್ನು ಸಾರುವ ಕಥಾನಕವನ್ನು ಕನ್ನಡ ಮತ್ತು “ಸಾಯಿನಾಥ ಶಿರಡಿ ಬಾಬಾ’ ಎನ್ನುವ ನಾಟಕ ಹಾಗೂ ಯಕ್ಷಗಾನವನ್ನು ಆಡಿ ತೋರಿಸಿದ ಹೆಗ್ಗಳಿಕೆ ತಂಡಕ್ಕಿದೆ. ಸಾಂಸ್ಕೃತಿಕ ಚಟುವಟಿಕೆಯನ್ನು ಬೇರೆ ತಂಡದಿಂದ ಆಯೋಜನೆ ಮಾಡುವ ಬದಲು ನಮ್ಮದೇ ತಂಡವನ್ನು ಕಟ್ಟಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇನ್ನಷ್ಟು
ಸಾಧನೆ ಮಾಡಬೇಕೆನ್ನುವ ನೆಲೆಯಲ್ಲಿ ದಕ್ಷಿಣ ಕನ್ನಡ
ಜಿಲ್ಲೆಯಲ್ಲೇ ಮೊದಲ ಮಹಿಳಾ ತಂಡದ ಸಾರಥಿಯಾಗಿ
‘ಸಾಯಿ ಶಕ್ತಿ ಕಲಾ ಬಳಗ’ ಎಂಬ 100ಕ್ಕು ಹೆಚ್ಚು ಉತ್ಸಾಹಿ ಕಲಾವಿದರಿರುವ ಯಕ್ಷಗಾನ ಮತ್ತು ನಾಟಕದ ತಂಡವನ್ನು ಕಟ್ಟಿದಹೆಗ್ಗಳಿಕೆ ತಂಡದ ಸಾರಥಿ ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ಇವರಿಗಿದೆ. ನಾಟಕ ರಂಗದಲ್ಲಿ ನಮ್ಮ ಮೊದಲ ಹೆಜ್ಜೆ “ಬೊಳ್ಳಿ ಮಲೆತ ಶಿವಶಕ್ತಿಲು” ಆಕಾಶದಲ್ಲಿ ಮಿನುಗುತ್ತಿರುವ ಹೊತ್ತಿನಲ್ಲಿ ಇನ್ನೊಂದು ಬೆಳ್ಳಿಯನ್ನು ಮಿನುಗಿಸುವ ನೆಲೆಯಲ್ಲಿ ಹೊಸ ಹೆಜ್ಜೆಯನ್ನಿಟ್ಟಿದ್ದೇವೆ.

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ ಅಶ್ರಿತ ಸಾಯಿಶಕ್ತಿ ಕಲಾಬಳಗದ ಎರಡನೇ ಕಲಾ ಕಾಣಿಕೆ ಶ್ರೀಯುತ ಕೀರ್ತನ್ ಭಂಡಾರಿ ರಚಿಸಿದ ತಂಡದ ಸಾರಥಿ ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ಇವರ ನಿರ್ಮಾಣ ಮತ್ತು ನಿರ್ದೇಶನದ , ಶಿನೋಯ್ ವಿ ಜೋಸೆಫ್ ಧ್ವನಿ ಮುದ್ರಿಸಿದ, ಮುಖೇಶ್ ಸೂಟರ್ ಪೇಟೆ ಮತ್ತು ವಿಶಾಲ್ ರಾಜ್ ಕೋಕಿಲ ಇವರ ಸಂಗೀತದಲ್ಲಿ ಮೂಡಿ ಬಂದ, ಬಿ.ಎಸ್ .ಕಾರಂತ್ ಇಂಚರ ಇವರ ಹಿನ್ನೆಲೆ ಸಂಗೀತದ, ಗೌರವ್ ಶೆಟ್ಟಿಗಾರ್ ಮಠದಕಣಿ ಇವರ ಸಮಗ್ರ ನಿರ್ವಹಣೆಯಲ್ಲಿ ಮೂಡಿ ಬಂದ ಅದ್ದೂರಿ ತುಳು ಜನಪದ ನಾಟಕ ಜೋಡು ಜೀಟಿಗೆ ಒಂದೇ. ದಿನದಲ್ಲಿ ಮೂರು. ರಾಜ್ಯಗಳಲ್ಲಿ. ತನ್ನ ಪ್ರದರ್ಶನ ನೀಡುವ ಮೂಲಕ ಹೊಸ ದಾಖಲೆ ಬರೆಯಲು ಮುಂದಾಗಿದ್ದಾರೆ.

Related posts

ಬಲೀಂದ್ರ ದೇವರು ತಮ್ಮ ರಾಜ್ಯಕ್ಕೆ ತಾವೇ ಬಂದ್ರು ಹೊಲಿಯೇ‌ ಬಾ… ಕೂ…ಕೂ…ಕೂ….

Mumbai News Desk

ಮೈಸಂದಾಯೆ

Mumbai News Desk

ದೀಪಾವಳಿ …….ಬೆಳಕಿನೆಡೆಗೆ ಬದುಕು

Mumbai News Desk

ಭಿಕ್ಷುಕ,ಬೀದಿ ಮಗು ಮತ್ತು ಬದುಕು

Mumbai News Desk

ಬಡತನದ ಬೇಗೆಯಲ್ಲಿ ಹೂವಾಗಿ ಅರಳಿದ ಸುನೀಲ ದಂಗಾಪೂರ

Mumbai News Desk

ಭಾರತ – ಚೀನಾ 62 ರ ಯುದ್ಧದನೆನಪುಗಳ ಅರುಣಾಚಲಕ್ಕೊಂದು ಸುತ್ತು

Mumbai News Desk