
ಮುಲ್ಕಿ, : ಬಂಟರ ಸಂಘ ಮುಂಬಯಿಯ ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಮಹಾ ನಿರ್ದೇಶಕರಾದ ಪ್ರವೀಣ್ ಭೋಜ ಶೆಟ್ಟಿಯವರ ಮಾತೃಶ್ರೀ, ಎಲ್ಲೂರು ಮಲ್ಲಬೆಟ್ಟು ಪರಾಡಿ ದಿ. ಭೋಜ ಶೆಟ್ಟಿಯವರ ಧರ್ಮಪತ್ನಿ, ಎರ್ಲಮ್ ಪಾಡಿ ಚೆಂಡೆ ಬಾಯ್ಲ್ ದಿ.ಗಿರಿಜಾ ಮಹಾಬಲ ಹೆಗ್ಡೆ ದಂಪತಿಯ ಪುತ್ರಿ ನಳಿನ ಭೋಜ ಶೆಟ್ಟಿ(84)ಯವರು ಮಾರ್ಚ್ 5 ರಂದು ಮೂಲ್ಕಿಬಪ್ಪನಾಡು ರಾಷ್ಟೀಯ ಹೆದ್ದಾರಿಯ ಎದುರು,
ವೆಂಕಟಗಿರಿ ರೆಸಿಡೆನ್ಸಿ, ಇಲ್ಲಿ ಸ್ವರ್ಗಸ್ತರಾಗಿದ್ದಾರೆ,
ಮೃತರು ಪುತ್ರರಾದ ಪ್ರವೀಣ್ ಭೋಜ ಶೆಟ್ಟಿ, ಸುಧೀರ್ ಶೆಟ್ಟಿ , ಮಗಳು ವನಿತಾ ಸುಧಾಕರ್ ಶೆಟ್ಟಿ,
ಸೊಸೆ ನೈನಿತ ಪ್ರವೀಣ್ ಶೆಟ್ಟಿ, ಮೊಮ್ಮಕ್ಕಳಾದ ಅಭಿಷೇಕ್, ಪ್ರತಿಕ್ಷ, ಪ್ರಜ್ಞ, ಪ್ರತೀಕ್, ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ,
ಮೃತರ ಅಂತ್ಯ ಕ್ರಿಯೆಯಲ್ಲಿ ಮುಂಬಯಿಯ ಬಂಟರ ಸಂಘದ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಹಾಗೂ ದಕ್ಷಿಣ ಕನ್ನಡ , ಉಡುಪಿ, ಕಾಸರಗೋಡು ಜಿಲ್ಲೆಯ ಬಂಟರ ಸಂಘದ ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು,
ನಳಿನ ಭೋಜ ಶೆಟ್ಟಿ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಗೌರವ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ, ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು, ಜೊತೆ ಕೋಶಾಧಿಕಾರಿ ಶಶಿಧರ್ ಶೆಟ್ಟಿ ಇನ್ನಂಜೆ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಚಿತ್ರ ಆರ್ ಶೆಟ್ಟಿ, ಯುವ ವಿಭಾಗದ ಕಾರ್ಯ ಧ್ಯಕ್ಷ ಸವಿನ್ ಜೆ. ಶೆಟ್ಟಿ,
ಎಸ್ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷ ಉಳ್ತೂರು ಮೋಹನದಾಸ್ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಡಾ. ಪಿ ವಿ ಶೆಟ್ಟಿ, ಪದ್ಮನಾಭ ಪಯ್ಯಡೆ,
ಸಿ ಎ ಶಂಕರ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ,
ಹೇರಂಬ ಕೆಮಿಕಲ್ಸ್ ಆಡಳಿತ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ, ಎಮ್ ಆರ್ ಜಿ ಗ್ರೂಪಿನ ಡಾ. ಕೆ ಪ್ರಕಾಶ್ ಶೆಟ್ಟಿ, ವಿಕೆ ಗ್ರೂಪಿನ ಕೆ ಎಂ ಶೆಟ್ಟಿ, ಬಂಟರ ಸಂಘ ಮುಂಬೈಯ ವಿವಿಧ ಪ್ರಾದೇಶಿಕ ಸಮಿತಿಗಳ ಕಾರ್ಯಧ್ಯಕ್ಷರು ಪದಾಧಿಕಾರಿಗಳು ಮಹಿಳಾ ವಿಭಾಗದ ಪದಾಧಿಕಾರಿಗಳು, ಮುಂಬೈಯ ವಿವಿಧ ಜಾತೀಯ ಸಂಘಟನೆಯ ಅಧ್ಯಕ್ಷರು, ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ಸೂಚಿಸಿರುವರು.