33.1 C
Karnataka
April 1, 2025
ಪ್ರಕಟಣೆಲೇಖನ

ಮುಂಬಯಿಯಲ್ಲಿ ಆಗಸ್ಟ್ 15ರಿಂದ ನಾಗಶ್ರೀ ಜಿ ಎಸ್ ತಂಡ ಮತ್ತು ಬಡಗುತಿಟ್ಟಿನ ಖ್ಯಾತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನ

ಮಹಾನಗರ ಮುಂಬಯಿ ಹಾಗೂ ಉಪ ನಗರದಲ್ಲಿ ಹೆಸರಾಂತ ಯುವ ಕಲಾವಿದೆ ನಾಗಶ್ರೀ ಅವರ ನಾಗಶ್ರೀ ಜಿ ಎಸ್ ತಂಡ ಮತ್ತು ಬಡಗುತಿಟ್ಟಿನ ಪ್ರಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗಳು 15 ಆಗಸ್ಟ್ 2025 ರಿಂದ 24 ಆಗಸ್ಟ್ 2025 ರ ವರೆಗೆ ನಡೆಯಲಿದೆ.


ಪ್ರದರ್ಶನಗೊಳ್ಳುವ ಪ್ರಸಂಗಗಳು :

  1. ಚಂದ್ರಹಾಸ ಚರಿತ್ರೆ
  2. ನಾಗಶ್ರೀ (ದಿ.ಜಿ.ಆರ್. ಕಾಳಿಂಗ ನಾವಡ ವಿರಚಿತ)
  3. ವೃಷಸೇನ ಕರ್ಣಪರ್ವ
  4. ವೀರ ಬರ್ಬರೀಕ
  5. ದಕ್ಷಯಜ್ಞ ಮೀನಾಕ್ಷಿ ಕಲ್ಯಾಣ
  6. ಭೀಷ್ಮವಿಜಯ
  7. ಸುಧನ್ವಾರ್ಜುನ
  8. ರಾಣಿ ಶಶಿಪ್ರಭೆ
  9. ಕೃಷ್ಣಾರ್ಜುನ
  10. ರಾಜ ರುದ್ರಕೋಪ
  11. ಕುಶ ಲವ
  12. ದೌಪದಿ ಪ್ರತಾಪ
  13. ಭಸ್ಮಾಸುರ ಮೋಹಿನಿ
  14. ಮಾರುತಿ ಪ್ರತಾಪ
  15. ಬಬ್ರುವಾಹನ ಕಾಳಗ
  16. ಜಾಂಬವತಿ ಕಲ್ಯಾಣ
  17. ವೀರಮಣಿ ಕಾಳಗ
  18. ಸುದರ್ಶನವಿಜಯ- ಕಾರ್ತವೀರ್ಯ
  19. ಶನೀಶ್ವರ ಮಹಾತ್ಮ
  20. ಅಭಿಮನ್ನು ಕಾಳಗ

ಹಿಮ್ಮೆಳದ ಕಲಾವಿದರು :ಭಾಗವತ – ವಿನಯಾ ಶೆಟ್ಟಿ (ಬೆಂಗಳೂರು), ಸುಬ್ರಯಾ ಭಟ್‌, ರಾಕೇಶ್ ಮಲ್ಯಾ ಅಕ್ಷಯ ಆಚಾರ್ಯ

ಮುಮ್ಮೇಳ ಕಲಾವಿದರು :
ಕಡಬಾಳ ಉದಯ ಹೆಗಡೆ, ಮಂದರ್ತಿ ಪ್ರಸನ್ನ ಶೆಟ್ಟಿಗಾರ ನಾಗಶ್ರೀ, ನಿಹಾರಿಕಾ ಭಟ್, ಪ್ರಶಾಂತ ವರ್ಧನ್ ವಿನಾಯಕ ಗುಂಡಬಾಳ ಕಾಸಾರಗೊಡು, ಸುಬ್ರಮಣ್ಯ ಹಾಗೂ ಇನ್ನಿತರರು.

ಯಕ್ಷಪ್ರಿಯರ ಬಳಗ ಮುಂಬಯಿಯ ರೂವಾರಿ, ಯಕ್ಷಗಾನದ ಅಪ್ಪಟ ಅಭಿಮಾನಿ, ಕಲಾವಿದ, ಕಲಾ ಪೋಷಕ, ಸಂಘಟಕ ಸೀತಾರಾಮ ಶೆಟ್ಟಿ ಆರೂರು ಇವರು ಮುಂಬೈಯಲ್ಲಿ ಯಕ್ಷಗಾನ ಪ್ರದರ್ಶನವನ್ನು ಸಂಘಟಿಸಲಿದ್ದಾರೆ.

ಯಕ್ಷಕಲಾಭಿಮಾನಿಗಳು ಈ ದಿನಗಳಲ್ಲಿ ಗಾನ-ನಾಟ್ಯವೈಭವ, ಕಾಲಮಿತಿ ಯಕ್ಷಗಾನ ಕಾರ್ಯಕ್ರಮಗಳು ಬೇಕಾದಲ್ಲಿ ಮುಂಬೈ ಸಂಚಾಲಕರಾದ ನಾಗಶ್ರೀ ಜಿ ಎಸ್ : 7760272829 ಹಾಗೂ
ಯಕ್ಷಗಾನ ಸಂಘಟಕ ಸೀತಾರಾಮ ಶೆಟ್ಟಿ ಆರೂರು : 7045516913 ಇವರನ್ನು ಸಂಪರ್ಕಿಸ ಬಹುದು.

ನಾಗಶ್ರೀ ಜಿ ಎಸ್
ಸಾಗರ ತಾಲೂಕು ಗೀಜಗಾರಿನ ಶ್ರೀಮತಿ ನಳಿನಿ ಜೆ ಎಸ್ ಹಾಗೂ ಶಿವಾನಂದ ಜೆಎಂ ಇವರ ಮಗಳಾಗಿ 15/06/ 1990 ರಲ್ಲಿ ಜನಿಸಿದ ನಾಗಶ್ರೀ ಜೆ ಎಸ್ ಅವರು ಬಿಬಿಎಂ ಪದವಿಧರೆ.

ಸಾಲಿಗ್ರಾಮ, ಪೇರ್ಡುರು, ಅಮೃತೇಶ್ವರಿ ಕಮಲಶಿಲೆ, ಸೌಕೂರು, ನೀಲಾವರ, ಬಗ್ವಾಡಿ ,ಗೋಳಿಗರಡಿ, ಹಟ್ಟಿಯಂಗಡಿ, ಜಲವಳ್ಳಿ ಮುಂತಾದ ಬಡಗಿನ ಮೇಳಗಳು ಮತ್ತು ಶ್ರೀ ಕಾಳಿಂಗ ಯಕ್ಷಕಲಾ, ವೈಭವ, ಸಿರಿಕಲಾ ಮೇಳ, ಟೀಮ್ ಉತ್ಸಾಹಿ ಬೆಂಗಳೂರು ಮುಂತಾದ ಹವ್ಯಾಸಿ ತಂಡಗಳು, ತೆಂಕಿನಲ್ಲಿ ಕೆಲವು ಪಾತ್ರಗಳನ್ನು ನಾಗಶ್ರೀ ಅವರು ಮಾಡಿರುತ್ತಾರೆ.
ಹೈದರಾಬಾದ್ ಕನ್ನಡ ಸಂಘದಿಂದ “ನಾಟ್ಯಮಯೂರಿ” ಪ್ರಜಾವಾಣಿ ವರ್ಷದ ಸಾಧಕರು 2020, ಹಾಗೂ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಹಾಗೂ ಪುರಸ್ಕಾರಗಳನ್ನು ಪಡೆದಿರುವ ಇವರು ಕನ್ನಡ, ತಮಿಳು ಧಾರಾವಾಹಿ ಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ಪ್ರಸಂಗಗಳಿಗೆ ಪ್ರಸಂಗ ಕಥಾ ಹಾಗೂ ಪದ್ಯ ರಚನೆ ಮಾಡಿರುತ್ತಾರೆ.
ಅಪ್ರತಿಮ ಕಲಾವಿದೆ ನಾಗಶ್ರೀಯವರು ಯಕ್ಷಗಾನ ರಂಗದಲ್ಲಿ ಇನ್ನೂ ಹೆಚ್ಚಿನ ಸಾಧನೆಗಯ್ಯಲಿ, ಕಲಾಮಾತೆಯ ಶ್ರೀರಕ್ಷೆ ಸದಾ ಅವರಿಗಿರಲಿ, ಕಲಾ ಪೋಷಕರ, ಕಲಾಭೀಮಾನಿಗಳ ನಲ್ಮೆಯ ಒಲುಮೆಯು ನಿರಂತರ ಇವರ ಮೇಲಿರಲಿ ಎಂಬ ಆಶಯ ನಮ್ಮದು.

Related posts

ಶ್ರೀ ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ ಇಲ್ಲಿ ನವೆಂಬರ್ 13 ರಂದುತುಳಸೀ ಪೂಜೆ ಹಾಗೂ ಕಾರ್ತಿಕ ದೀಪೋತ್ಸವ

Mumbai News Desk

ಜ.11. ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 64ನೇ ವಾರ್ಷಿಕೋತ್ಸವ ಮತ್ತು ಪಾರಿತೋಷಕ ವಿತರಣಾ ಸಮಾರಂಭ

Mumbai News Desk

ಫೆ. 04 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣಾ ಶಿಬಿರ.

Mumbai News Desk

ಪೆ 9: ಮೀರಾ – ಡಹಾಣು ಬಂಟ್ಸ್ ಕ್ರೀಡೋತ್ಸವ 2025

Mumbai News Desk

ಉದ್ಯಾವರ ಶ್ರೀ ಭಗವತಿ ಕ್ಷೇತ್ರ ಮಂಜೇಶ್ವರ : ಡಿ. 14ರಿಂದ 17ರ ತನಕ ನಡಾವಳಿ ಮಹೋತ್ಸವ ಹಾಗೂ ಭೇಟಿ ಉತ್ಸವ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ – ಲಲಿತ ಕಲಾ ವಿಭಾಗದ ವತಿಯಿಂದ ಭಜನಾ ಸ್ಪರ್ಧೆ ಹಾಗೂ ಕುಣಿತ ಭಜನಾ ಸ್ಪರ್ಧೆಗೆ ಆಹ್ವಾನ

Mumbai News Desk