
ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿ ಸಿಲುಕಿದ್ದ ನಾಸ ಗಗನಯಾತ್ರಿ, ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಿದ್ದಾರೆ, ಇವರ ಆಗಮನ ಕೇವಲ ಅಮೆರಿಕಕ್ಕೆ ಮಾತ್ರವಲ್ಲ ಭಾರತಕ್ಕೂ ಸಂತಸ ತಂದಿದೆ. ಇವರ ಸುರಕ್ಷಿತ ಬರುವಿಕೆಗಾಗಿ ಭಾರತದಲ್ಲೂ ಎಲ್ಲರೂ ಪ್ರಾರ್ಥಿಸಿದ್ದರು.
ಸುನಿತಾ ಅವರ ತಂದೆ ಡಾ. ದೀಪಕ್ ಪಾಂಡ್ಯ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಜುಲಾಸನ್ ಗ್ರಾಮದ ನಿವಾಸಿ. ಅವರು 1957ರಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದರು ಮತ್ತು ಅಲ್ಲಿ ಉರ್ಸುಲಿನ್ ಬೋನಿ ಅವರನ್ನು ವಿವಾಹವಾದರು.
ಸುನಿತಾ ಅವರು ಸೆಪ್ಟಂಬರ್ 19ರ 1965 ರಂದು ಓಹಿಯೋದ ಯೂಕ್ಲಿಡ್ ನಲ್ಲಿ ಜನಿಸಿದರು.
ಗಾಂಧಿನಗರದಿಂದ ಸುಮಾರು 40 ಕಿ. ಮೀಟರ್ ದೂರದಲ್ಲಿರುವ ಜುಲಾಸನ್ ಗ್ರಾಮದಲ್ಲಿ ಸುನಿತ ವಿಲಿಯಮ್ಸ್ ಅವರು ಆಳವಾದ ಸಂಪರ್ಕ ಹೊಂದಿದ್ದಾರೆ ಸುಮಾರು 7,000 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ವಿವಿಧ ಜಾತಿ ಮತ್ತು ಸಮುದಾಯಗಳ ಜನರು ವಾಸಿಸುತ್ತಿದ್ದಾರೆ. ಸುನೀತಾ ಅವರು ತನ್ನ ಯಶಸ್ವಿ ಬಾಹ್ಯಕಾಶ ಯಾನದ ಬಳಿಕ ಈ ಗ್ರಾಮಕ್ಕೆ ಎರಡು ಬಾರಿ ಬಂದಿದ್ದರು. ವಿಲಿಯನ್ಸ್ ಕುಟುಂಬ ಜುಲಾಸನ್ ನಲ್ಲಿ ಆಸ್ತಿಗಳನ್ನು ಹೊಂದಿದ್ದು, 1960ರ ದಶಕದ ಉತ್ತರಾರ್ದದಲ್ಲಿ ಸುನಿತಾ ಅವರ ನೆನಪಿಗಾಗಿ ಅಲ್ಲಿ ಒಂದು ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಅವರ ತಂದೆಯ ಪೂರ್ವಜರಮನೆ ಇನ್ನೂ ಇದೆ, ಆದರೆ ಈಗ ಶಿಥಿಲಾವಸ್ತೆಯಲ್ಲಿದೆ. ಸುನಿತಾ ಅವರು 2007ರಲ್ಲಿ ಸ್ಥಳೀಯ ಶಾಲೆಯ ಅಭಿವೃದ್ಧಿಗಾಗಿ ಎರಡುವರೆ ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದರು. ಜುಲಾಸನ್ ಗ್ರಾಮಸ್ಥರು ಸುನಿತಾ ವಿಲಿಯನ್ಸ್ ಅವರನ್ನು ಸ್ಪೂರ್ತಿ ಎಂದು ಪರಿಗಣಿಸುತ್ತಾರೆ, ಅವರು ಬಾಹ್ಯಾಕಾಶ ಯಾನಕ್ಕೆ ಹೋದಾಗಲೆಲ್ಲ ಅವರ ಯಶಸ್ಸಿಗಾಗಿ ಪ್ರಾರ್ಥಿಸುತ್ತಾರೆ.
ಇದು ಸುನೀತಾ ಅವರ ಮೂರನೇ ಬಾಹ್ಯಾಕಾಶ ಪ್ರಯಾಣವಾಗಿದ್ದು ಇದಕ್ಕೂ ಮೊದಲು ಅವರು 2006 ಮತ್ತು 2012ರಲ್ಲಿ 322 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದರು. ಕಲ್ಪನಾ ಚಾವ್ಲಾ ನಂತರ ನಾಸಾ ಮೂಲಕ ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತ ಮೂಲದ ಮಹಿಳೆ ಸುನಿತಾ.