April 25, 2025
ಸುದ್ದಿ

ವಿಲೇಪಾರ್ಲೆ : ಕೆಡವಲಾದ ಜೈನ ಮಂದಿರದ ಪಕ್ಕದ ಹೋಟೆಲ್ ಗೆ ಬಿಎಂಸಿ(BMC)ಯಿಂದ ನೋಟಿಸ್ ಜಾರಿ



ಬ್ರಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ವಿಲೇಪಾರ್ಲೆ ಪೂರ್ವದಲ್ಲಿರುವ ನೇಮೀನಾಥ್ ಕೋ- ಆಪರೇಟಿವ್ ಹೌಸಿಂಗ್ ಸೊಸೈಟಿ ಆವರಣದಲ್ಲಿರುವ ಜೈನ ದೇವಾಲಯವನ್ನು ದ್ವಂಸಗೊಳಿಸಿದ ಒಂದು ವಾರದ ನಂತರ ನಾಗರಿಕ ಸಂಸ್ಥೆ ಬುಧವಾರ ರಾಮಕೃಷ್ಣ ಹೋಟೆಲಿಗೆ ಅನಧಿಕೃತ ನಿರ್ಮಾಣಕ್ಕಾಗಿ ನೋಟಿಸ್ ನೀಡಿದೆ.
ಬಿಎಂಸಿ ಅಧಿಕಾರಿಗಳು ಮೂಲ ಕಟ್ಟಡ ಯೋಜನೆಯನ್ನು ಅಸ್ತಿತ್ವದಲ್ಲಿರುವ ರಚನೆಯೊಂದಿಗೆ ಹೋಲಿಸಿ, ಬದಲಾವಣೆಗಳನ್ನು ಖಚಿತಪಡಿಸಿಕೊಂಡ ನಂತರ, ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನಾ (MRTP) ಕಾಯ್ದೆ, 1996ರ ಸೆಕ್ಷನ್ 53(1)ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ನಾಗರಿಕ ಸಂಸ್ಥೆಯ ಮೂಲಗಳು ತಿಳಿಸಿವೆ.
ಹೋಟೆಲ್ ಮಾಲೀಕರು 30 ದಿನಗಳ ಒಳಗೆ ನೋಟಿಸಿಗೆ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ,ಬದಲಾವಣೆಗಳು ಕಾನೂನು ಬದ್ಧವಾಗಿವೆ ಎಂದು ದಾಖಲೆಗಳೊಂದಿಗೆ ತೋರಿಸಬೇಕು ಇಲ್ಲದಿದ್ದರೆ ಅವುಗಳನ್ನು ಕೆಡವಬೇಕಾಗುತ್ತದೆ ಎಂದವರು ತಿಳಿಸಿದ್ದಾರೆ.
ಈಗ ಕೆಡವಲಾಗಿರುವ ಜೈನ ದೇವಾಲಯದ ಟ್ರಸ್ಟಿಗಳು ಈ ಕ್ರಮವನ್ನು ಸ್ವಾಗತಿಸಿದ್ದು ಹೋಟೆಲ್ ನ ಅನಧಿಕೃತ ವಿಸ್ತರಣೆಯ ಬಗ್ಗೆ ಹಲವು ವರ್ಷಗಳಿಂದ ದೂರು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.ಹೊಟೇಲ್ ನೇಮೀನಾಥ್ ಸಹಕಾರಿ ವಸತಿ ಸಂಕಿರ್ಣದಲ್ಲಿ ಹಲವಾರು ಅಪಾಟ್ಮೆಂಟ್ ಗಳನ್ನು ಹೊಂದಿದ್ದು ಅವುಗಳನ್ನು ವಾಣಿಜ್ಯವಾಗಿ ಬಾಡಿಗೆಗೆ ನೀಡುವ ಅತಿಥಿ ಕೊಠಡಿಗಳಾಗಿ ಪರಿವರ್ತಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದಲ್ಲದೆ ಹೋಟೆಲ್ ಮಾಲೀಕರು ದೇವಾಲಯದ ಪಕ್ಕದಲ್ಲಿಯೇ ತಾತ್ಕಾಲಿಕ ಇಟ್ಟಿಗೆ ಮತ್ತು ಗಾರೆ ರಚನೆಯನ್ನು ನಿರ್ಮಿಸಿದ್ದಾರೆ ಎಂದು ಕೆಡವರಾದ ದೇವಾಲಯವನ್ನು ನಿರ್ವಹಿಸುತ್ತಿದ್ದ ಶ್ರೀ 1008 ದಿಗಂಬರ್ ಜೈನ ಮಂದಿರ ಟ್ರಸ್ಟ್ ನ ಸದಸ್ಯ ತಿಳಿಸಿದರು. ನಾವು 2006 ರಿಂದ ಅಕ್ರಮ ನಿರ್ಮಾಣಗಳ ಕುರಿತು ದೂರು ನೀಡುತ್ತಿದ್ದೇವೆ ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ತಿಳಿಸಿದರು.
ಅನಧಿಕೃತ ನಿರ್ಮಾಣಕ್ಕಾಗಿ ಜೈನ ದೇವಾಲಯಕ್ಕೂ ಇದೇ ರೀತಿಯ ನೋಟಿಸ್ ಗಳನ್ನು ನೀಡಲಾಗಿದೆ ಎಂದು ಟ್ರಸ್ಟಿಗಳು ತಿಳಿಸಿದ್ದು, ಏಪ್ರಿಲ್ 7ರಂದು ನಗರ ಸಿವಿಲ್ ನ್ಯಾಯಾಲಯವು ದೇವಾಲಯದ ಟ್ರಸ್ಟ್ ನ ವಿರುದ್ಧದ ಮನವಿಯನ್ನು ತಿರಸ್ಕರಿಸಿತು. ಆದರೆ ಟ್ರಸ್ಟ್ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಏಳು ದಿನಗಳವರೆಗೆ ಮಧ್ಯಂತರ ರಕ್ಷಣೆ ನೀಡಿತು. ಮಧ್ಯಂತರ ರಕ್ಷಣೆ ಏಪ್ರಿಲ್ 15 ರಂದು ಮುಕ್ತಾಯಗೊಂಡಿದ್ದರೂ, ಟ್ರಸ್ಟಿಗಳು ಬಾಂಬೆ ಹೈಕೋರ್ಟ್ ನಿಂದ ಧ್ವಂಸಕ್ಕೆ ತಡೆಯಾಜ್ಞೆ ಪಡೆಯುವ ಮೊದಲು, ಮರುದಿನ ದೇವಾಲಯವನ್ನು ಕೆಡವಲಾಯಿತು.
ಬಿಎಂಸಿ ಯ ಕ್ರಮವನ್ನು ಖಂಡಿಸಿ ಏಪ್ರಿಲ್ 19ರಂದು ಸಾವಿರಾರು ಜೈನರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಮೂರು ದಿನಗಳ ನಂತರ ಎಪ್ರಿಲ್ 22ರಂದು ರಾಜ್ಯ ಅಲ್ಪಸಂಖ್ಯಾತ ಆಯೋಗವು ಈ ವಿಷಯವನ್ನು ಗಮನಕ್ಕೆ ತೆಗೆದುಕೊಂಡು ಸ್ಥಳದ ಸಮೀಕ್ಷೆಯನ್ನು ನಡೆಸಿತು. ದೇವಾಲಯವನ್ನು ಕೆಡವಲು ಅತಿಯಾದ ಬಲಪ್ರಯೋಗ ಮತ್ತು ಆತುರದಿಂದ ವರ್ತಿಸಿದ್ದಕ್ಕಾಗಿ ಆಯೋಗವು ಬಿಎಂಸಿಯನ್ನು ತರಟಾಗೆ ತೆಗೆದುಕೊಂಡಿತು. ಆವರಣದಲ್ಲಿನ ಎಲ್ಲಾ ಅನಧಿಕ್ರತ ರಚನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅದು ಬಿಎಂಸಿಗೆ ನಿರ್ದೇಶನ ನೀಡಿತು.

Related posts

ಸಿ ಎ ಪರೀಕ್ಷೆ ಫಲಿತಾಂಶ 2024 ಸ್ನೇಹ ಶಿವಪ್ಪ ಮೊಗವೀರ ಉತ್ತೀರ್ಣ

Mumbai News Desk

ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ವಿಜಯ್ ಬಿ ಹೆಗ್ಡೆ ನಿಧನ

Mumbai News Desk

ಮೈಲ್ ಸ್ಟೋನ್ ಮಿಸ್ ಮತ್ತು ಮಿಸೆಸ್ ಗ್ಲೋಬಲ್ ಇಂಟರ್ನ್ಯಾಷನಲ್ ವರ್ಲ್ಡ್ ಪೇಜೆಂಟ್ 2024, ಪ್ರಭಾ ಸುವರ್ಣ ಟೂರಿಸಂ ಎಂಬಾಸಿಡರ್ ಆಗಿ ಆಯ್ಕೆ

Mumbai News Desk

ಬೆಲ್ಜಿಯಂನಲ್ಲಿ ಭಾರತದಿಂದ ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬಂಧನ

Mumbai News Desk

ವೆಂಕಪ್ಪ ನಾರಾಯಣ ಶೆಟ್ಟಿ ನಿಧನ.

Mumbai News Desk

2024 ಸಾಲಿನ 12ನೇ ತರಗತಿಯ ಫಲಿತಾಂಶ – ದೀಪಾ ಭಾಸ್ಕರ್ ಕಾಂಚನ್ ಗೆ  ಶೇ 85.67% ಅಂಕ 

Mumbai News Desk