34 C
Mumbai
March 6, 2026
Mumbai News Kannada
ಪ್ರಕಟಣೆ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) : ಸೆ. 5 ರಂದು 25ನೇ ಸಂಸ್ಥಾಪನಾ ದಿನಾಚರಣೆ, ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ





ಮುಂಬಯಿ : “ಸಂಘಟನೆಗಳ ಸಂಘಟನೆ” ಎಂದೇ ಕರೆಯಲ್ಪಡುವ, ಮಹಾನಗರದಲ್ಲಿನ ಎಲ್ಲಾ ಜಾತೀಯ ಸಂಘಟನೆಗಳನ್ನು ಒಗ್ಗೂಡಿಸಿ ಕಳೆದ 25 ವರ್ಷಗಳಿಂದ ತುಳು ಕನ್ನಡಿಗರ ಜನ್ಮಭೂಮಿಯಾದ ಪರಶುರಾಮ ಸೃಷ್ಟಿಯ  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸರ್ವತೋಮುಖ ಅಭಿವೃದ್ದಿಯ ಬಗ್ಗೆ ಯಶಸ್ವಿಯಗಿ ಹೋರಾಟ ನಡೆಸುತ್ತಾ ಬಂದಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.). ಎಂಜಿನಿಯರ್‌ಗಳು, ಡಾಕ್ಟರುಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಕಂಪನಿ ಸೆಕ್ರೆಟರಿಗಳು, ಡಾಕ್ಟರೇಟ್‌ ಪದವೀದರರುಗಳು, ಬ್ಯಾಂಕರ್‌ಗಳು, ಕೈಗಾರಿಕೋದ್ಯಮಿಗಳು, ಹೋಟೆಲ್ ಉದ್ಯಮಿಗಳು, ವಿವಿಧ ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು, ರಾಜಕೀಯ ನಾಯಕರು ಮತ್ತು ಇತರ ಗೌರವಾನ್ವಿತ  ಗಣ್ಯ ವ್ಯಕ್ತಿಗಳನ್ನು ಹೊಂದಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಶಿಕ್ಷಕರ ದಿನವಾದ  ಸೆಪ್ಟೆಂಬರ್ 5,  2000 ರಂದು ಲೋಕಾರ್ಪಣೆಗೊಂಡಿದೆ.  ಇದೀಗ  ಬೆಳ್ಳಿ ಹಬ್ಬದ ಸಮಾರಂಭದಲ್ಲಿರುವ ಸಮಿತಿಯ 25ನೇ ಸಂಸ್ಥಾಪನಾ ದಿನಾಚರಣೆಯು ಸೆ. 5 ರಂದು, ಶುಕ್ರವಾರ, ಸಂಜೆ 6 ಗಂಟೆಗೆ, ಮುಂಬಯಿ ಸಾಕೀನಾಕಾದ ಹೋಟೆಲ್ ಪೆನಿನ್ಸುಲಾ ಗ್ರ್ಯಾಂಡ್, ಇಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಇವರ ಉಪಸ್ಥಿತಿಯಲ್ಲಿ, ಸಮಿತಿಯ ಅಧ್ಯಕ್ಷರಾದ  ನಿತ್ಯಾನಂದ ಡಿ. ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.  

ಸಮಾರಂಭದಲ್ಲಿ ಶ್ರೀ ದಿಗಂಬರ ಜೈನ ಮಠ, ಮೂಡಬಿದಿರೆ, ದ.ಕ., ಇದರ ಜಗದ್ಗುರು ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವಾರ್ಯ ಮಹಾಸ್ವಾಮಿಜಿ ಯವರು ಆಶೀರ್ವಚನ ಮಾಡಲಿದ್ದು, ಕರ್ನಾಟಕ ಸರಕಾರದ ಮಾನ್ಯ ಸ್ವೀಕರ್ ಯು. ಟಿ. ಖಾದರ್ ಅವರು ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಸಮಾರಂಭದಲ್ಲಿ ಖ್ಯಾತ ಉದ್ಯಮಿ, ಸಮಾಜ ಸೇವಕ ಕನ್ಯಾನ ಸದಾಶಿವ ಶೆಟ್ಟಿ ಯವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ದಿಕ್ಸೂಚಿ ಬಾಷಣ ಮಾಡಲಿರುವರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ತನ್ನ 25ನೇ ವರ್ಷಾಚರಣೆಯ ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಕರಾವಳಿಯಿಂದ ಮುಂಬಯಿಗಾಗಮಿಸಿ ಸುಧೀರ್ಘ ಕಾಲ ಸಮಾಜ ಸೇವಾ ನಿರತವಾಗಿರುವ ಈ ಕೆಳಗಿನ 25 ತುಳು ಕನ್ನಡಿಗರ ಜಾತೀಯ ಸಂಘ ಸಂಸ್ಥೆಗಳಿಗೆ ವಿಶೇಷ ಕೃತಜ್ಞತಾಪೂರ್ವಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮೊಗವೀರ ವ್ಯವಸ್ಥಾಪಕ ಮಂಡಳಿ, ಬಂಟರ ಸಂಘ ಮುಂಬಯಿ,  ಬಿಲ್ಲವರ ಅಸೋಸಿಯೇಶನ್, ಮುಂಬಯಿ, ಬಿ.ಎಸ್.ಕೆ.ಬಿ. ಅಸೋಸಿಯೇಶನ್, ಸಯಾನ್, ಬಾಂಬೆ ಬಂಟ್ಸ್ ಅಸೋಸಿಯೇಶನ್, ದಿ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್, ಒಕ್ಕಲಿಗರ ಸಂಘ ಮಹಾರಾಷ್ಟ್ರ, ದೇವಾಡಿಗ ಸಂಘ, ಮುಂಬಯಿ, ಸಾಫಲ್ಯ ಸೇವಾ ಸಂಘ, ಭಂಡಾರಿ ಸೇವಾ ಸಮಿತಿ, ಅಖಿಲ ಕರ್ನಾಟಕ ಜೈನ್ ಸಂಘ, ಕುಲಾಲ ಸಂಘ, ಮುಂಬಯಿ, ಗಾಣಿಗ ಸಮಾಜ, ಮುಂಬಯಿ, ಪದ್ಮಶಾಲಿ ಸಮಾಜ ಸೇವಾ ಸಂಘ, ಹೆಗ್ಗಡೆ ಸೇವಾ ಸಂಘ, ತೀಯಾ ಸಮಾಜ, ಮುಂಬಯಿ, ರಜಕ ಸಂಘ, ಮುಂಬಯಿ, ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್, ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ, ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಷಿಯೇಶನ್ಸ್ ಮಹಾರಾಷ್ಟ್ರ,  ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್, ಜವಾಬ್, ಶಾಫಿ  ವೆಲ್ಫೇರ್ ಅಸೋಸಿಯೇಶನ್ ಮತ್ತು ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಷನ್, ಇತ್ಯಾದಿ. 

ಎಲ್ಲಾ ಸಮಾಜದ ಗಣ್ಯರು ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕಾಗಿ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಯ ಪರವಾಗಿ  ಗೌರವ ಅಧ್ಯಕ್ಷ ಪದ್ಮವಿಭೂಷಣ ಡಾ. ಬಿ. ಎಂ. ಹೆಗ್ಡೆ, ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್, ಉಪಾಧ್ಯಕ್ಷರುಗಳಾದ ಪಿ. ಧನಂಜಯ ಶೆಟ್ಟಿ, ಜಗದೀಶ್ ಅಧಿಕಾರಿ, ಹಿರಿಯಡ್ಕ ಮೊಹನ್ ದಾಸ್, ಡಾ. ಸುರೇಂದ್ರಕುಮಾರ್ ಹೆಗ್ಡೆ, ಚಂದ್ರಶೇಖರ ಆರ್. ಬೆಲ್ಚಡ, ನ್ಯಾ. ಆರ್. ಎಂ. ಭಂಡಾರಿ, ಜಿತೇಂದ್ರ ಗೌಡ, ನ್ಯಾ.  ಮೊಹಿದಿನ್ ಮುಂಡ್ಕೂರು, ಸಿಎ. ಐ. ಆರ್. ಶೆಟ್ಟಿ, ನ್ಯಾ. ಶಶಿಧರ್ ಯು. ಕಾಪು, ಡಾ. ಆರ್. ಕೆ. ಶೆಟ್ಟಿ, ತೋನ್ಸೆ ಡಾ. ವಿಜಯಕುಮಾರ್ ಶೆಟ್ಟಿ,  ಶ್ಯಾಮ್ ಎನ್. ಶೆಟ್ಟಿ, ಶ್ರೀನಿವಾಸ್ ಸಾಫಲ್ಯ, ಗಿರೀಶ್ ಬಿ. ಸಾಲಿಯಾನ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಎಂ. ಶೆಟ್ಟಿ, ಜಿಲ್ಲಾ ಕಾರ್ಯಾದರ್ಶಿಗಳಾದ ಜಿ. ಟಿ. ಆಚಾರ್ಯ, ಸುರೇಂದ್ರ ಮೆಂಡನ್, ಜಿಲ್ಲಾ ಕೋಶಾಧಿಕಾರಿ ಪ್ರಭಾಕರ ಬಂಗೇರ ಕಾರ್ಕಳ, ಎನ್. ಆರ್. ಐ. ಉಪಾಧ್ಯಕ್ಷ ಡಾ. ಫ್ರಾಂಕ್ ಫರ್ನಾಂಡಿಸ್, ಗೌರವ ಕಾರ್ಯದರ್ಶಿಗಳಾದ ದೇವದಾಸ್ ಕುಲಾಲ್, ಸಿ.ಎಸ್. ಗಣೇಶ್ ಶೆಟ್ಟಿ, ಹ್ಯಾರಿ ಸಿಕ್ವೇರಾ, ಗೌರವ ಕೋಶಾಧಿಕಾರಿ ಸದಾನಂದ ಎನ್. ಆಚಾರ್ಯ, ಗೌರವ ಜೊತೆ ಕೊಶಾಧಿಕಾರಿಗಳಾದ ತೋನ್ಸೆ ಸಂಜೀವ ಪೂಜಾರಿ, ರಾಕೇಶ್ ಭಂಡಾರಿ, ಮಹೇಶ್ ಕಾರ್ಕಳ, ಸಮಿತಿಯ ಮಾಜಿ ಅಧ್ಯಕ್ಷರುಗಳಾದ ನ್ಯಾ. ಪ್ರಕಾಶ್ ಎಲ್. ಶೆಟ್ಟಿ, ವಿಶ್ವನಾಥ ಮಾಡ, ಹರೀಶ್ ಕುಮಾರ್ ಶೆಟ್ಟಿ, ಧರ್ಮಪಾಲ ದೇವಾಡಿಗ ಎಲ್. ವಿ. ಅಮಿನ್, ಪ್ರವೀಣ್ ಭೋಜ ಶೆಟ್ಟಿ, ಬಿ. ರಮಾನಂದ ರಾವ್, ಹರೀಶ್ ಜಿ. ಅಮೀನ್, ಸೂರ್ಯಕಾಂತ್ ಜಯ ಸುವರ್ಣ, ವಿಲ್ಸನ್ ಫೆರ್ನಾಂಡಿಸ್, ಲಕ್ಷ್ಮಣ ಸಿ. ಪೂಜಾರಿ, ಸಮಿತಿಯ ವಕ್ತಾರ ದಯಾಸಾಗರ ಚೌಟ, ಸದಸ್ಯರುಗಳಾದ ವಿರಾರ್ ಶಂಕರ್ ಶೆಟ್ಟಿ, ಜಯಂತ್ ಕೆ. ಶೆಟ್ಟಿ, ರವಿ  ದೇವಾಡಿಗ, ನ್ಯಾ. ಗುಣಕರ ಶೆಟ್ಟಿ, ವಾಸು ದೇವಾಡಿಗ, ಕಿಶೋರ್ ಕುಮಾರ್ ಕುತ್ತ್ಯಾರ್, ಸಂತೋಷ್ ರೈ ಬೆಳ್ಳಿಪಾಡಿ, ತೋನ್ಸೆ ಅಶೋಕ್ ಎಸ್. ಶೆಟ್ಟಿ, ಜನಾರ್ಧನ ದೇವಾಡಿಗ, ರವಿರಾಜ್ ಕಲ್ಯಾಣಪುರ, ಪದ್ಮನಾಭ ಸಸಿಹಿತ್ಲು, ತುಳಸಿದಾಸ್ ಎಲ್. ಅಮಿನ್, ಡಾ. ಪ್ರಭಾಕರ್ ಶೆಟ್ಟಿ ಬೋಳ, ಉದಯ ಅಧಿಕಾರಿ, ನ್ಯಾ. ದಯಾನಂದ ಶೆಟ್ಟಿ, ಉತ್ತಮ್ ಶೆಟ್ಟಿಗಾರ್,  ಕೃಷ್ಣಕುಮಾರ್ ಎನ್. ಬಂಗೇರ, ದಿವಾಕರ್ ಶೆಟ್ಟಿ ಪೋಸ್ರಾಲ್, ಪ್ರಕಾಶ್ ಶೆಟ್ಟಿ ಸುರತ್ಕಲ್, ನ್ಯಾ. ಮೋರ್ಲಾ ರತ್ನಾಕರ್ ಶೆಟ್ಟಿ, ಲೋಕನಾಥ್ ಎಂ. ಪೂಜಾರಿ, ಸುಧಾಕರ್ ಉಚ್ಚಿಲ್, ರಾಮಚಂದ್ರ ಗಣಿಗ ಎಂ. ಎನ್. ಕರ್ಕೇರ

ನ್ಯಾ. ಸಂತೋಷ್ ಕುಮಾರ್ ಹೆಗ್ಡೆ, ಕರುಣಾಕರ ಹೇಜ್ಮಾಡಿ,  ಚಿತ್ರಾಪು ಕೆ. ಎಂ. ಕೋಟ್ಯಾನ್, ಪದ್ಮನಾಭ ಪೂಜಾರಿ, ಬಾಲಕೃಷ್ಣ ಪಿ. ಭಂಡಾರಿ, ಗಂಗಾಧರ್ ಎನ್. ಗೌಡ, ವಿಶ್ವನಾಥ ಹೆಗ್ಡೆ,  ಅಶೋಕ್ ಸುವರ್ಣ ಮತ್ತು ರಾಮಣ್ಣ ದೇವಾಡಿಗ ವಿನಂತಿಸಿದ್ದಾರೆ.

===

ಸಮಿತಿಯ ಸಾಧನೆಗಳಲ್ಲಿ ಕೆಲವು …………

2000ರ ಇಸವಿಗೆ ಮುನ್ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿರುದ್ಧ ನಡೆಯುತ್ತಿದ್ದ ಅಭಿವೃದ್ಧಿಯ ಉಲ್ಲಂಘನೆಗಳನ್ನು ಗಮನಿಸಿದ ಸಮಿತಿ, ಇಂಜಿನಿಯರ್ ಮತ್ತು ಸಮಾಜ ಸೇವಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರ ಸಮರ್ಥ ನಾಯಕತ್ವದಲ್ಲಿ, ನೈಜ ಅಭಿವೃದ್ಧಿಗೆ ಬದಲಾಗಿ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿದ್ದ ತಡೆಗಳ ವಿರುದ್ಧ ಧೃಢ ನಿಲುವು ತೆಗೆದುಕೊಂಡಿತು.

ಈ ನಿಟ್ಟಿನಲ್ಲಿ, ಶಿಕ್ಷಣ ಪಡೆದರೂ ಉದ್ಯೋಗ ಮತ್ತು ಉದ್ಯಮಾವಕಾಶಗಳಿಂದ ವಂಚಿತರಾಗುತ್ತಿದ್ದ ಕರಾವಳಿಯ ಯುವಜನತೆಗೆ ಅವಕಾಶ ಸೃಷ್ಟಿಸುವ ದೃಷ್ಟಿಯಿಂದ, ಸಮಿತಿ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳ ಪ್ರಸ್ತಾವನೆಗಳನ್ನು ನೀಡಿತು. ಸಮಿತಿ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಕೇಂದ್ರ ಮತ್ತು ರಾಜ್ಯದ ಅನೇಕ ಮುಖ್ಯ ನಾಯಕರೊಂದಿಗೆ ಸಂಪರ್ಕ ಸಾಧಿಸಿ, ಈ ಭಾಗದ ಪ್ರಗತಿಯ ಬೇಡಿಕೆಗಳನ್ನು ಅತ್ಯಂತ ಕ್ರಿಯಾಶೀಲವಾಗಿ ಮುಂದಿಟ್ಟಿತು. ಸಮಿತಿಯ ಬಲವಾದ ಹೋರಾಟದಿಂದ ಯಶಸ್ವಿಯಾದ ಪ್ರಮುಖ ಯೋಜನೆಗಳಲ್ಲಿ ಕೆಲವು,

ನಾಗಾರ್ಜುನ ವಿದ್ಯುತ್ ಯೋಜನೆ (ಇದೀಗ ಆದಾಣಿ ಪವರ್)

ಮಂಗಳೂರು ವಿಮಾನ ನಿಲ್ದಾಣ: ಅಂತಾರಾಷ್ಟ್ರೀಯ ಮಟ್ಟದ ಪರಿಷ್ಕರಣೆ ಹಾಗೂ ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆ.

ಮಂಗಳೂರು–ಬೆಂಗಳೂರು ರೈಲು ಸಂಪರ್ಕ, ಮರು ಆರಂಭ; ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಪರಿವರ್ತನೆ.

“ಗರೀಬ್ ರಥ್” ರೈಲು – ಮುಂಬೈ–ಮಂಗಳೂರು ನಡುವೆ ಆರಂಭ.

ಮಂಗಳೂರು–ಬೈಂದೂರು 6 ಲೇನ್ ರಾಷ್ಟ್ರೀಯ ಹೆದ್ದಾರಿ (120 ಕಿಮೀ) – ರೂ.700 ಕೋಟಿ ಕೇಂದ್ರ ಹೂಡಿಕೆ.

ವಿಶೇಷ ಆರ್ಥಿಕ ವಲಯಗಳು (SEZ) ಮತ್ತು ಐಟಿ ಉದ್ಯಾನವನಗಳು.

ಕುದುರೆಮುಖ ಐರನ್ ಓರ್ ಕಂಪೆನಿಗೆ ಲೀಸ್ ವಿಸ್ತರಣೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೇವಲ 10% ಉದ್ಯಮೀಕರಣಕ್ಕೆ ಅನುಮತಿ,

ಪ್ರತೀ ಕೈಗಾರಿಕೆಯಲ್ಲಿ 33% ಹಸಿರು ವಲಯ (Green Belt) ಕಡ್ಡಾಯ

317 ಕಿಮೀ ಉದ್ದದ ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ

24×7 ನಿರಂತರ ವಿದ್ಯುತ್ ಪೂರೈಕೆಗಾಗಿ ಸಮಿತಿಯ ವಿಶಿಷ್ಟ ಬೇಡಿಕೆ

2025ರ ಆಗಸ್ಟ್ 16ರಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ.



Related posts

ಜುಲೈ 12-ರಂದು ಅಂಧೇರಿ ಮೊಗವೀರ ಭವನದಲ್ಲಿ “ಚಂದ್ರಾವಳಿ ವಿಲಾಸ’ ‘ಗದಾಯುದ್ಧ’ ಪೌರಾಣಿಕ ಯಕ್ಷಗಾನ

Mumbai News Desk

ಆಗಸ್ಟ್ 10 : ಬಿಲ್ಲವ ಘಾಟ್ಕೋಪರ್ ಹಾಗೂ ತುಳು ಕೂಟ ಅಸಲ್ಪಾ, ಇದರ ಆಶ್ರಯದಲ್ಲಿ ‘ಘಾಟ್ಕೋಪರ್ ದ ಆಟಿದ ಒಂಜಿ ದಿನ’

Mumbai News Desk

ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸಮಿತಿ, ಡಿ. 1 ರಂದು ವಾರ್ಷಿಕ ಸ್ನೇಹ ಸಮ್ಮಿಲನ, ಕಿರು ನಾಟಕ ಸಾಧಕರಿಗೆ ಸನ್ಮಾನ,

Mumbai News Desk

ಕನ್ನಡ ಸಂಘ ಸಯನ್ ವತಿಯಿಂದ ಡಾ. ಸದಾನಂದ ಶೆಟ್ಟಿ ಯವರ ಮುಂದಾಳತ್ವದಲ್ಲಿ 08/02/2025 ರಂದು ಮುಂಬಯಿಯಲ್ಲಿ ಪ್ರಥಮ ಬಾರಿಗೆ ಬೃಹತ್‌ ಉಚಿತ ವೈದ್ಯಕೀಯ ಶಿಬಿರ

Mumbai News Desk

ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ “ಯಕ್ಷಧ್ರುವ ಪಟ್ಲ ಸಂಭ್ರಮ 2024”

Mumbai News Desk

ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಅಸಲ್ಪ :ಜ. 18ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಪರಿವಾರ ದೇವತೆಗಳಿಗೆ ದೀಪಾರಾಧನೆ.

Mumbai News Desk