July 23, 2026
Mumbai News Kannada
ಸುದ್ದಿ

“ಡ್ರಾಗನ್–ಆನೆ ಒಗ್ಗಟ್ಟಿಗೆ ಕರೆಯೊಡ್ಡಿದ ಷಿ, ಸಹಕಾರಕ್ಕೆ ಬದ್ಧತೆ ತೋರಿದ ಮೋದಿ”







ಟಿಯಾಂಜಿನ್ (ಚೀನಾ), ಆಗಸ್ಟ್ 31:
ಚೀನಾದ ಟಿಯಾಂಜಿನ್ ನಗರದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO)ಯ 25ನೇ ಶಿಖರ ಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವೆ ಮಹತ್ವದ ಮಾತುಕತೆ ನಡೆಯಿತು. ಹಲವು ವರ್ಷಗಳ ಗಡಿಬಿಡಿ ನಂತರ ಎರಡೂ ರಾಷ್ಟ್ರಗಳ ನಾಯಕರ ನೇರ ಸಂವಾದವು ಹೊಸ ಬದಲಾವಣೆಯ ನಿರೀಕ್ಷೆ ಮೂಡಿಸಿದೆ.

ಮಾತುಕತೆಯಲ್ಲಿ ಗಡಿ ಪ್ರದೇಶದ ಶಾಂತಿ ಹಾಗೂ ಸ್ಥಿರತೆ ಮುಖ್ಯ ಚರ್ಚೆಯ ವಿಷಯವಾಗಿತ್ತು. ಪ್ರಧಾನಮಂತ್ರಿ ಮೋದಿ “ಭಾರತ-ಚೀನಾ ಗಡಿ ಪ್ರದೇಶದಲ್ಲಿ ಪರಸ್ಪರ ಗೌರವ, ಶಾಂತಿ ಮತ್ತು ದೈರ್ಯ ಅಗತ್ಯ. ಶಾಂತಿಯುತ ಗಡಿ ವಾತಾವರಣವೇ ನಮ್ಮ ಭವಿಷ್ಯದ ಸಹಕಾರದ ನಾಂದಿ” ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗಡಿ ನಿರ್ವಹಣೆಯ ಹೊಸ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೈಲಾಶ್ ಮನ್‌ಸರೋವರ ಯಾತ್ರೆ ಪುನರ್‌ಪ್ರಾರಂಭ ಹಾಗೂ ಭಾರತ–ಚೀನಾ ನೇರ ವಿಮಾನ ಸೇವೆಗಳ ಪುನರುಜ್ಜೀವನ ಕುರಿತು ಸಹ ಒಪ್ಪಂದ ಕಾದಿದೆ. ಇದರಿಂದ ಸಾಂಸ್ಕೃತಿಕ ಹಾಗೂ ಮಾನವೀಯ ಸಂಪರ್ಕಗಳಿಗೆ ಹೊಸ ಬಾಗಿಲು ತೆರೆಯುವ ನಿರೀಕ್ಷೆಯಿದೆ.

ಅಧ್ಯಕ್ಷ ಷಿ ಜಿನ್‌ಪಿಂಗ್ ತಮ್ಮ ಮಾತಿನಲ್ಲಿ “ಭಾರತ ಮತ್ತು ಚೀನಾ ದೊಡ್ಡ ನಾಗರಿಕತೆಗಳ ಪ್ರತಿನಿಧಿಗಳು. ನಾವು ಸ್ಪರ್ಧಿಗಳು ಅಲ್ಲ, ಸಹಭಾಗಿಗಳು. ಡ್ರಾಗನ್ ಮತ್ತು ಆನೆ ಒಟ್ಟಿಗೆ ಬಂದಾಗ ವಿಶ್ವಕ್ಕೆ ಶಾಂತಿ ಹಾಗೂ ಅಭಿವೃದ್ಧಿಯ ಸಂದೇಶ ತಲುಪುತ್ತದೆ” ಎಂದು ಉಪಮೆ ನೀಡಿದರು.

ಪ್ರಧಾನಿ ಮೋದಿ ಕೂಡ “2.8 ಬಿಲಿಯನ್ ಜನರ ಕಲ್ಯಾಣಕ್ಕಾಗಿ ನಮ್ಮ ಸಹಯೋಗ ಅತ್ಯಗತ್ಯ. ವಿಶ್ವ ಮಾನವತೆಯ ಹಿತಕ್ಕಾಗಿ ಭಾರತ-ಚೀನಾ ಸಂಬಂಧ ಬಲವಾಗಬೇಕು” ಎಂದು ಒತ್ತಿಹೇಳಿದರು.

ಅಂತರರಾಷ್ಟ್ರೀಯ ರಾಜಕೀಯ ಪಠ್ಯದಲ್ಲಿ, ಅಮೆರಿಕದ ವ್ಯಾಪಾರ ನೀತಿ ಹಾಗೂ ಜಾಗತಿಕ ಸವಾಲುಗಳ ನಡುವೆ ಈ ಭೇಟಿ ಬಹುಮುಖ್ಯವಾಗಿದ್ದು, ‘ಗೋಲ್ಬಲ್ ಸೌತ್’ ಹಾಗೂ ಬಹುಧ್ರುವ ವಿಶ್ವದಲ್ಲಿ ಭಾರತ-ಚೀನಾ ನವ ಸಂಬಂಧದ ಪ್ರಾರಂಭ ಎಂದು ವೀಕ್ಷಿಸಲಾಗುತ್ತಿದೆ.

ಈ ಮಾತುಕತೆಗಳಿಂದ ಇಬ್ಬರು ಶಕ್ತಿಶಾಲಿ ರಾಷ್ಟ್ರಗಳ ನಡುವೆ ವಿಶ್ವಾಸ ಹಾಗೂ ಸಹಕಾರದ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ನಿರೀಕ್ಷೆ ಮೂಡಿದೆ.




Related posts

ಬೆಂಗಳೂರು : ದಕ್ಷಿಣ ಕನ್ನಡಿಗರ ಸಂಘದ ಸಂಭ್ರಮಾಚರಣೆ, ಸಾಧಕರಿಗೆ ಪ್ರಶಸ್ತಿ, ಕರ್ನಿರೆ ವಿಶ್ವನಾಥ ಶೆಟ್ಟಿಯವರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ,

Mumbai News Desk

ಡಹಾಣೂವಿನ ಸಮಾಜ ಸೇವಕ ಅಶೋಕ್  ಎಸ್. ಶೆಟ್ಟಿ ಉಳೆಪಾಡಿ ಇವರಿಗೆ ಸನ್ಮಾನ.

Mumbai News Desk

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದ) ಅಧ್ಯಕ್ಷ ವೈ. ಸುಕುಮಾರ್, ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

Mumbai News Desk

ರಾಷ್ಟ್ರೀಯ ಫುಟ್ಬಾಲ್ ಆಟಗಾರ ರವೀಂದ್ರನಾಥ ಶೆಟ್ಟಿ ನಿಧನ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (12/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಮುಂಬೈ ಆಘಾತಕಾರಿ: ಚೆಂಬೂರಿನಲ್ಲಿ ಕಾಳಿಮಾತೆಯ ವಿಗ್ರಹ ‘ಮಾತೆ ಮೇರಿ’ ರೂಪದಲ್ಲಿ, ಆಕ್ರೋಶದ ನಂತರ ಅರ್ಚಕನ ಬಂಧನ

Mumbai News Desk