32 C
Mumbai
March 7, 2026
Mumbai News Kannada
ಪ್ರಕಟಣೆ

ಚಿತ್ರಕಲಾವಿದ ಜಯ್ ಸಾಲಿಯನ್ ಅವರಿಗೆ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಗೌರವ





ಮುಂಬೈ: ಚಿತ್ರಕಲಾ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ನಿಷ್ಠೆ, ಸಮರ್ಪಣೆ ಹಾಗೂ ಸೃಜನಾತ್ಮಕತೆಯಿಂದ ಸೇವೆ ಸಲ್ಲಿಸುತ್ತಿರುವ ಮುಂಬೈ ಪವೈಯ ನಿವಾಸಿ ಜಯ್ ಸಾಲಿಯನ್ ಅವರು ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ ಚಿತ್ರಪಟ ಯೂನಿಯನ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

​ಚಿತ್ರಕಲಾ ಕ್ಷೇತ್ರದಲ್ಲಿ ಅವರು ಮಾಡಿರುವ ಗಮನಾರ್ಹ ಸಾಧನೆ ಹಾಗೂ ಸಮಾಜೋಪಯೋಗಿ ಕಾರ್ಯಗಳಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ–2025’ ಅನ್ನು ಘೋಷಿಸಲಾಗಿದೆ. ಸದ್ಯ ಜಯ್ ಸಾಲಿಯನ್ ಅವರು ಪವೈಯ ಎ.ಎಂ. ನಾಯಕ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜನೆವರಿ 25ರಂದು ಪ್ರದಾನ:

ಮುಂಬೈಯ ಪ್ರಭಾದೇವಿಯಲ್ಲಿರುವ ರವೀಂದ್ರ ನಾಟ್ಯ ಮಂದಿರದಲ್ಲಿ 2026ರ ಜನೆವರಿ 25ರಂದು ಆಯೋಜಿಸಲಾಗಿರುವ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಚಿತ್ರರಂಗ, ಸಾಮಾಜಿಕ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳ ಗಣ್ಯರು ಭಾಗವಹಿಸಲಿದ್ದಾರೆ.

ಬಾಲ್ಯದಿಂದಲೇ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಜಯ್ ಸಾಲಿಯನ್ ಅವರ ಸಾಧನೆಯ ಹಾದಿ ಸುಲಭದ್ದಾಗಿರಲಿಲ್ಲ. ಆರ್ಥಿಕ ಸಂಕಷ್ಟ, ಮಾರ್ಗದರ್ಶನದ ಕೊರತೆ ಹಾಗೂ ಸಾಮಾಜಿಕ ಅಡೆತಡೆಗಳ ನಡುವೆಯೂ ಕಠಿಣ ಪರಿಶ್ರಮದಿಂದ ಶಿಕ್ಷಣ ಪೂರ್ಣಗೊಳಿಸಿ, ಚಿತ್ರಕಲೆಯಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯನ್ನು ರೂಢಿಸಿಕೊಂಡಿದ್ದಾರೆ.

​ವಾಸ್ತವಿಕತೆ, ಸೃಜನಶೀಲತೆ ಹಾಗೂ ವಿನೂತನ ಸ್ಪಷ್ಟತೆಯುಳ್ಳ ಅವರ ಕಲಾಕೃತಿಗಳಲ್ಲಿ ಸಾಮಾಜಿಕ ವಾಸ್ತವ, ಮಾನವೀಯ ಭಾವನೆಗಳು ಮತ್ತು ಸಾಂಸ್ಕೃತಿಕ ಪ್ರತಿಬಿಂಬಗಳು ಎದ್ದು ಕಾಣುತ್ತವೆ. ಇವರ ಸಾಧನೆಯನ್ನು ಗುರುತಿಸಿ ಗೌರವ ಸಂದಿರುವುದು ಚಿತ್ರಕಲಾ ಕ್ಷೇತ್ರ ಹಾಗೂ ಸಾಮಾಜಿಕ ವಲಯದಲ್ಲಿ ಸಂತಸ ಮೂಡಿಸಿದ್ದು, ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.



Related posts

ಕಲಾಜಗತ್ತಿನ ಆಯೋಜನೆಯಲ್ಲಿ ವಿಶಿಷ್ಟ ಪರಿಕಲ್ಪನೆಯೊಂದಿಗೆ ಮೂಡಿಬಂದು ಜನರನ್ನು ರಂಜಿಸಲಿರುವ “ಬೊಂಬಾಯಿಡ್ ತುಳುನಾಡ್ ” ತುಳು ಉತ್ಸವ

Mumbai News Desk

ಜ. 12. ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ : ಕೋಟಿ -ಚೆನ್ನಯ ಕ್ರೀಡೋತ್ಸವ

Mumbai News Desk

ಸೆ. 22 ರಿಂದ ಗೋರೆಗಾಂವ್‌ನ ಶ್ರೀ ಶಾಂತಾ ದುರ್ಗಾದೇವಿ ಮಂದಿರದಲ್ಲಿ ನವರಾತ್ರಿ ಮಹೋತ್ಸವ

Mumbai News Desk

ಫೆ 10:ಮೀರಾ -ದಾಹಣು ಬಂಟ್ಸ್ ನ ಕ್ರೀಡೋತ್ಸವ 2024,

Mumbai News Desk

ಜ 22: ಯಕ್ಷ ಪ್ರಿಯ ಬಳಗ ಮೀರಾ ಭಯಂದರ್ ಇದರ ವತಿಯಿಂದ* ಶ್ರೀ ರಾಮ*  ಯಕ್ಷಗಾನ

Mumbai News Desk

ನ. 19 ರಂದು ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ (ರಿ) – 21ನೇ ವಾರ್ಷಿಕೋತ್ಸವ.

Mumbai News Desk