September 7, 2026
Mumbai News Kannada
ಪ್ರಕಟಣೆ

ಆದಿ ಕಿಲ್ಲಾಡಿ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ದೈವಸ್ಥಾನ, ಕಿಲ್ಪಾಡಿ, ಮೂಲ್ಕಿ : ಫೆ. 7ಕ್ಕೆ. ಸಿರಿಸಿಂಗಾರದ ನೇಮೋತ್ಸವ





ಆದಿ ಕಿಲ್ಲಾಡಿ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ದಿನಾಂಕ 07-02-2026ನೇ ಶನಿವಾರದಂದು ವಾರ್ಷಿಕ ಸಿರಿಸಿಂಗಾರದ ನೇಮೋತ್ಸವವು ಜರಗಲಿರುವುದು.
ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಆಗಮಿಸಿ, ಶ್ರೀ ದೈವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಿ, ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವದ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಧ್ಯಕ್ಷರು ಮತ್ತು ಸರ್ವಸದಸ್ಯರು ಆಡಳಿತ ಸಮಿತಿ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮುಂಬೈ ಸಮಿತಿ ಆದಿ ಕಿಲ್ಲಾಡಿ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ದೈವಸ್ಥಾನ, ಕಿಲ್ಪಾಡಿ,
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮುಂಬಯಿ ಸಮಿತಿ.
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಆದಿ ಕಿಲ್ಪಾಡಿ ಶ್ರೀ ಧೂಮಾವತಿ ಸೇವಾ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಹಾಗೂ ಕಿಲ್ಪಾಡಿ ಗ್ರಾಮಸ್ಥರು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

ಕಾರ್ಯಕ್ರಮಗಳ ವಿವರ

ದಿನಾಂಕ: 06-02-2026, ಶುಕ್ರವಾರ
ಬೆಳಿಗ್ಗೆ 9:00 ರಿಂದ:

  • ಶ್ರೀ ನಾಗದೇವರ ಸನ್ನಿಧಿಯಲ್ಲಿ: ಶ್ರೀ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಆಶ್ಲೇಷಾ ಬಲಿ, ಪ್ರಸನ್ನ ಪೂಜೆ ಹಾಗೂ ಶ್ರೀ ರಕ್ತೇಶ್ವರಿಗೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ.
  • ಶ್ರೀ ದೈವ ಸನ್ನಿಧಿಯಲ್ಲಿ: ಪಂಚಾಮೃತ ಅಭಿಷೇಕ ಹಾಗೂ ಶ್ರೀ ದೈವಗಳಿಗೆ ಕಾಲಾವಧಿ ನಡೆಯುವ ನವಕ ಕಲಶಾಭಿಷೇಕ, ನೂತನ ರಜತ ಖಡ್ಗಕ್ಕೆ (ಆಯುಧ) ಕಲಶಾಭಿಷೇಕ ಪನಿಯಾರ ಸೇವೆ.
    ಸಂಜೆ 5:30ಕ್ಕೆ:
  • ನಾಗಸಾನಿಧ್ಯದ ಶ್ರೀ ರಕ್ತೇಶ್ವರಿಗೆ ತಂಬಿಲ ಸೇವೆ.
    ಸಂಜೆ 5:30ರಿಂದ:
  • ಕೈದುಪೂಜೆ (ತಂಬಿಲ ಸೇವೆ), ಶ್ರೀ ಕಾಂತಬಾರೆ ಬೂದಬಾರೆಯವರಿಗೆ ಅಗೇಲು ಸೇವೆ, ತುಡರ ಬಲಿ (ಊರಪರವೂರ ದಾನಿಗಳ ಸಹಕಾರದಲ್ಲಿ).
  • ವಿಶೇಷ ಸೇವೆ: ಶ್ರೀ ಜಾರಂದಾಯ ದೈವಕ್ಕೆ ರಜತ ಖಡ್ಸಲೆ (ಆಯುಧ) ಸಮರ್ಪಣೆ.
    ದಿನಾಂಕ: 07-02-2026, ಶನಿವಾರ
  • ಬೆಳಿಗ್ಗೆ 7:30ರಿಂದ: ಶುದ್ಧ ಹೋಮ.
  • ಬೆಳಿಗ್ಗೆ 9:30ಕ್ಕೆ: ಚಪ್ಪರ ಮುಹೂರ್ತ.
  • ಬೆಳಿಗ್ಗೆ 11:00ಕ್ಕೆ: ಭಂಡಾರ ಇಳಿಯುವುದು.
  • ಮಧ್ಯಾಹ್ನ 1:00ಕ್ಕೆ: ಅನ್ನಸಂತರ್ಪಣೆ.
  • ಸಂಜೆ 4:30ರಿಂದ 5:30ರವರೆಗೆ: ಆದಿ ಕಿಲ್ಪಾಡಿ ಶ್ರೀ ಧೂಮಾವತಿ ಕುಣಿತ ಭಜನಾ ಮಂಡಳಿಯವರಿಂದ ಕುಣಿತ ಭಜನೆ.
  • ಗೌರವ ಸನ್ಮಾನ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಸಿಂಧು ಗುಜರನ್ ಅವರಿಗೆ ಸನ್ಮಾನ.
  • ಸಂಜೆ 5:30ಕ್ಕೆ: ಶ್ರೀ ಉಳ್ಳಾಯ ದೈವದ ನೇಮ.
  • ಸಂಜೆ 6:30ಕ್ಕೆ: ಶ್ರೀ ಮೈಸಂದಾಯ ದೈವದ ನೇಮ.
  • ರಾತ್ರಿ 8:30ಕ್ಕೆ: ಶ್ರೀ ಕಾಂತಬಾರೆ-ಬೂದಬಾರೆಯ ವೀರ ಚರಿತ್ರೆಯ ಪಠಣ (ಪಾರ್ದನ).
  • ರಾತ್ರಿ 9:00ಕ್ಕೆ: ಶ್ರೀ ಧೂಮಾವತಿ ಜಾರಂದಾಯ ಬಂಟ ದೈವಗಳ ನೇಮ.
  • ನಂತರ: ಶ್ರೀ ಪಂಜುರ್ಲಿ ದೈವದ ನೇಮ, ಭಂಡಾರ ನಿರ್ಗಮನ.
    ದಿನಾಂಕ: 09-02-2026, ಸೋಮವಾರ
  • ಬೆಳಿಗ್ಗೆ 8:00ರಿಂದ: ಶುದ್ಧ ಹೋಮ.



Related posts

ಮಾ. 08 ರಂದು ಥಾಣೆಯಲ್ಲಿ ಸಾಫಲ್ಯ ಸೇವಾ ಸಂಘದ ಮುಖವಾಣಿ’ಸಾಫಲ್ಯ’ ತ್ರೈಮಾಸಿಕದ ಬೆಳ್ಳಿ ಹಬ್ಬ ಹಾಗೂ ಮಹಿಳಾ ದಿನಾಚರಣೆ

Mumbai News Desk

ನ. 1ರಂದು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋದಯ 70ರ ಸಂಭ್ರಮ.

Mumbai News Desk

ಸ್ಪಂದನ ಯುವ ವೃಂದದ ‘ಸ್ಪಂದನ ದಶ ಸಂಭ್ರಮ-2026’: ಮೇ 3ರಂದು ಸಾಧಕರಿಗೆ ಪ್ರಶಸ್ತಿ ಪ್ರದಾನ

Mumbai News Desk

ಜ.21 ರಂದು ವಸಾಯಿ ತಾಲೂಕು ಮೊಗವೀರ ಸಂಘ, ತುಳು-ಕನ್ನಡಿಗರಿಗಾಗಿ ವಾಲಿಬಾಲ್, ತ್ರೋಬಾಲ್ ಪಂದ್ಯಾಟ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ: ಜು. 16ರಂದು ಮಾಸಿಕಸಂಕ್ರಮಣ ಪೂಜೆ

Mumbai News Desk

ಶ್ರೀ ಮಹಾ ವಿಷ್ಣು ಮಂದಿರ – ಡೊಂಬಿವಲಿ, ತಾ.25 ಮತ್ತು 26 ನವೆಂಬರ್ ರಂದು ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮ.

Mumbai News Desk