October 21, 2026
Mumbai News Kannada
ಮಹಾರಾಷ್ಟ್ರ

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣ ವಚನ



ಮಹಾರಾಷ್ಟ್ರ ರಾಜಕೀಯ ಇತಿಹಾಸದಲ್ಲಿ ಇಂದು ಒಂದು ಮಹತ್ವದ ಘಟ್ಟಕ್ಕೆ ಸಾಕ್ಷಿಯಾಗಿದೆ. ಇತ್ತೀಚೆಗೆ ನಿಧನರಾದ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಇಂದು ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಈ ನೇಮಕಾತಿಯೊಂದಿಗೆ ಮಹಾರಾಷ್ಟ್ರ ರಾಜ್ಯದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಎಂಬ ಐತಿಹಾಸಿಕ ಕೀರ್ತಿಗೆ ಸುನೇತ್ರಾ ಪವಾರ್ ಪಾತ್ರರಾಗಿದ್ದಾರೆ.
ಈ ಹಿಂದೆ ನಡೆದ ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುನೇತ್ರಾ ಪವಾರ್ ಅವರನ್ನು ಸರ್ವಾನುಮತದಿಂದ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಉಪಸ್ಥಿತಿಯಲ್ಲಿ ಈ ಪ್ರಮಾಣವಚನ ಕಾರ್ಯಕ್ರಮ ಜರುಗಿತು. ಸದ್ಯ ರಾಜ್ಯಸಭಾ ಸದಸ್ಯೆಯಾಗಿರುವ ಸುನೇತ್ರಾ ಪವಾರ್ ಅವರು ಅಜಿತ್ ಪವಾರ್ ಅವರ ನಿಧನದಿಂದ ತೆರವಾಗಿರುವ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಶೀಘ್ರದಲ್ಲೇ ಸ್ಪರ್ಧಿಸುವ ನಿರೀಕ್ಷೆಯಿದೆ. ಅಜಿತ್ ಪವಾರ್ ಅವರು ನಿರ್ವಹಿಸುತ್ತಿದ್ದ ಅಬಕಾರಿ ಮತ್ತು ಕ್ರೀಡಾ ಖಾತೆಗಳನ್ನು ಅವರು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಹೂಗುಚ್ಛಗಳು, ಬ್ಯಾಂಡ್‌ಗಳು ಮತ್ತು ದೊಡ್ಡ ಸಭೆಗಳನ್ನು ಒಳಗೊಂಡಿರುವ ಸಾಮಾನ್ಯ ಪ್ರಮಾಣ ವಚನ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಪ್ರಮಾಣ ವಚನ ಸಮಾರಂಭವನ್ನು ಸರಳ ರೀತಿಯಲ್ಲಿ ನಡೆಸಲಾಯಿತು.

ಪ್ರಮಾಣವಚನ ಸಮಾರಂಭದ ನಂತರ, ಸುನೇತ್ರಾ ಪವಾರ್ ತಮ್ಮ ಇತರ ಕುಟುಂಬ ಸದಸ್ಯರೊಂದಿಗೆ ಬಾರಾಮತಿಗೆ ತೆರಳಿದ್ದಾರೆಂದು ಹೇಳಲಾಗಿದೆ.
ಪ್ರಮಾಣವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಭಾರತೀಯ ಜನತಾ ಪಕ್ಷದ ಇತರ ಸಚಿವರು ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಬಣದ ಹಿರಿಯ ನಾಯಕರಾದ ಪ್ರಫುಲ್ ಪಟೇಲ್, ಸುನಿಲ್ ತತ್ಕರೆ ಮತ್ತು ಛಗನ್ ಭುಜಬಲ್ ಭಾಗವಹಿಸಿದ್ದರು.



Related posts

ಮಹಾರಾಷ್ಟ್ರದಲ್ಲಿ ಎನ್‌ಸಿಎಂಸಿ (NCMC) ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿ: ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ಸೌಲಭ್ಯ

Mumbai News Desk

ಶ್ರೀ ದುರ್ಗಾ ಕಾಳಿ ಮಂದಿರ, ಅಂಬರ್ ನಾಥ್ ನವರಾತ್ರಿ ಉತ್ಸವ ಸಂಪನ್ನ.

Mumbai News Desk

ಬೊಯಿಸರ್   ಶ್ರೀ ಸೋಮೇಶ್ವರ ಮಂದಿರದಲ್ಲಿ 15ನೇ ವಾರ್ಷಿಕ ಮಹಾಪೂಜೆ, ಸಂಪನ್ನ,

Mumbai News Desk

ಕಲಂಬೋಲಿ  ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ದ  34 ನೆ  ವಾರ್ಷಿಕ ಮಹಾಪೂಜೆ .

Mumbai News Desk

ಮಾಹಾರಾಷ್ಟ್ರ ವಿಧಾನ ಸಭಾ ಚುನಾವಣೆ : “ಎಣ್ಣೆ” ಪ್ರಿಯರಿಗೆ ವಿಶೇಷ ಮಾಹಿತಿ.

Mumbai News Desk

ಓಲ್ಡ್ ಮಾಂಕ್, ರಾಯಲ್ ಚಾಲೆಂಜ್, ಆಂಟಿಕ್ವಿಟಿ, ಬ್ಯಾಗ್‌ಪೈಪರ್ ಹಾಗೂ ಓಲ್ಡ್ ಕ್ಯಾಸ್ಕ್‌ಗೆ FSSAI ಶಾಕ್: ರಮ್-ವಿಸ್ಕಿ ಅಂದುಕೊಂಡು ಕುಡಿದಿದ್ದಕ್ಕೆ ಬಿತ್ತು ಬ್ಯಾನ್ ಮಾರ್ಕ್!!!!,

Mumbai News Desk