
ಶ್ರೀ ಮಣಿಕಂಠ ಸೇವಾ ಸಮಿತಿ ವಸಾಯಿ ,ಇದರ 22ನೇ ವರ್ಷದ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ಡಿ.13 ರಂದು ಬುಧವಾರ , ವಸಾಯಿ ಪಶ್ಚಿಮ ,ದತ್ತನಿ ಮಾಲ್ ನ ಆರ್ನ ಸ್ವರ್ಣ ಬಾಂಕ್ವೆಟ್ ಹಾಲ್ ನಲ್ಲಿ , ಜಯಶೀಲ ಗುರುಸ್ವಾಮಿ ,ಮೀರಾ ರೋಡ್ ,ಇವರ ಮಾರ್ಗದರ್ಶನದಲ್ಲಿ ಜರಗಲಿದೆ.
ಕಾರ್ಯಕ್ರಮದ ವಿವರ :
ಬೆಳ್ಳಿಗ್ಗೆ 6 ಗಂಟೆಯಿಂದ ಗಣಹೋಮ(ಕೃಷ್ಣ ಭಟ್ ನಾಲಸೋಪರ ,ಇವರಿಂದ)
ಬೆಳ್ಳಿಗ್ಗೆ 9 ರಿಂದ 11 ರ ತನಕ ಸ್ಥಳೀಯ ಮಹಿಳೆಯರಿಂದ ಭಜನೆ.
11 ರಿಂದ 12 ಗಂಟೆ ತನಕ ಭಜನೆ (ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಮೀರಾ ರೋಡ್ ,ಇವರಿಂದ)
ಮಧ್ಯಾಹ್ನ 12 ರಿಂದ 1.30 ರ ತನಕ ಮಹಾಪೂಜೆ, ಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ .
1.30 ರಿಂದ 4 ರ ತನಕ ಅನ್ನ ಸಂತರ್ಪಣೆ.
ವಸಾಯಿ ಪರಿಸರದ ಶ್ರೀ ಅಯ್ಯಪ್ಪ ಭಕ್ತರು, ತುಳು-ಕನ್ನಡಿಗರು ಮಹಾಪೂಜೆಯಲ್ಲಿ ಉಪಸ್ಥಿತರಿರುವಂತ್ತೆ , ಶ್ರೀ ಮಣಿಕಂಠ ಸೇವಾ ಸಮಿತಿಯ ಗೌರವ ಅಧ್ಯಕ್ಷ ಕರ್ನೂರು ಶಂಕರ್ ಆಳ್ವ, ಅಧ್ಯಕ್ಷ ಯಶೋಧರ ವಿ ಕೋಟ್ಯಾನ್, ಉಪಾಧ್ಯಕ್ಷ ಎಕ್ಕಾರ್ ದಿನೇಶ್ ಹೆಗ್ಡೆ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ರಾಧಾಕೃಷ್ಣ ಶೆಟ್ಟಿ, ಜತೆ ಕೋಶಾಧಿಕಾರಿ ಸುಧೀರ್ ಸಾಲ್ಯಾನ್, ಪೂಜಾ ಸಮಿತಿಯ ಸಲಾಹಗಾರರಾದ ದಿನೇಶ್ ಭಂಡಾರಿ, ಉಮೇಶ್ ಕಾಂತವರ ವಿನಂತಿಸಿದ್ದಾರೆ.
ವಿ.ಸೂ. : ಭಕ್ತರು ತರುವ ಹೂ, ಹಣ್ಣು-ಕಾಯಿ,ಫಲವಸ್ತು, ಅನ್ನದಾನ ವಸ್ತುಗಳನ್ನು ಹರಕೆ ರೂಪದಲ್ಲಿ ಸ್ವೀಕರಿಸಲಾಗುವುದು.
.
.
.
.