
ಮುಂಬಯಿಯ ಪ್ರಸಿದ್ಧ ಭಜನಾ ಮಂಡಳಿಗಳಲ್ಲಿ ಒಂದಾಗಿರುವ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಜರಿಮರಿ ಇದರ ಸದಸ್ಯರು ಭುವಾಜಿ ರವೀಂದ್ರ ಶಾಂತಿ ಯವರ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ಹರಿನಾಮ ಸಂಕೀರ್ತನೆ ಭಜನೆ ಕಾರ್ಯಕ್ರಮ ವನ್ನು ನಡೆಸಿ ಕೊಡಲಿರುವರು.
ಡಿಸೆಂಬರ್ 17 ರಂದು ಬೆಳಿಗ್ಗೆ 11.00 ರಿಂದ 1.00 ರ ವರಗೆ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರು, ಸಂಜೆ 5.00 ರಿಂದ 7.00 ರ ವರಗೆ ಶ್ರೀ ಕ್ಷೇತ್ರ ಕೊಡ್ಯಡ್ಕ, ಡಿ. 18 ರಂದು ಬೆಳಿಗ್ಗೆ 6.00 ರಿಂದ 8.00 ರ ವರಗೆ ಶ್ರೀ ಮಹಾ ವಿಷ್ಣು ಮಂದಿರ ಪುತ್ತೂರು, 11.30 ರಿಂದ 1.30 ರ ವರಗೆ ಶ್ರೀ ಕ್ಷೇತ್ರ ಹನುಮಗಿರಿ, ಸಂಜೆ 4.30 ರಿಂದ 6.30 ಶ್ರೀ ಕ್ಷೇತ್ರ ಕಬತಾರ್, ಡಿ.19 ರಂದು ಬೆಳಿಗ್ಗೆ10.00 ರಿಂದ 12.00 ರ ವರಗೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಉಚ್ಚಿಲ, ಮದ್ಯಾಹ್ನ 2.00 ರಿಂದ 3.00 ರ ವರಗೆ ಶ್ರೀ ಮಾರಿಯಮ್ಮ ದೇವಸ್ಥಾನ ಕಾಪು, 4.00 ರಿಂದ 5.00 ರ ವರಗೆ ಶ್ರೀ ಕೃಷ್ಣ ಮಠ ಉಡುಪಿ, ಸಂಜೆ 6.00 ರಿಂದ 7.00 ಶ್ರೀ ಕ್ಷೇತ್ರ ಅಂಬಲ್ಪಾಡಿ, ಡಿ.20 ರಂದು ಬೆಳಿಗ್ಗೆ 10.00 ರಿಂದ 12.00 ರ ವರಗೆ ಶ್ರೀ ವಿಷ್ಣು ದೇವಸ್ಥಾನ ಶಕ್ತಿ ನಗರ ಮಂಗಳೂರು, ಮಧ್ಯಾಹ್ನ 2.00 ರಿಂದ 3.30 ರ ವರಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು, ಸಂಜೆ 5.00 ರಿಂದ 6.30 ಶ್ರೀ ಭಗವತಿ ದೇವಸ್ಥಾನ ಸಶಿಹಿತ್ಲು, ಡಿ.21 ರಂದು ಬೆಳಿಗ್ಗೆ 10 ರಿಂದ 11.30 ರ ವರಗೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಮಣಿಲ, ಮುಂತಾದ ಕ್ಷೇತ್ರಗಳಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ.
ಉಮಾ ಮಹೇಶ್ವರಿ ಮಂದಿರದ ಆಡಳಿತ ಮೊಕ್ತೇಸರರಾದ ಶ್ರೀಮತಿ ಬಿ. ಕೆ. ಲಲಿತಾ ಶೀನ, ಹಿರಿಯರಾದ ಬಿ. ಎನ್. ಶೆಟ್ಟಿ, ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪ ಈ ಭಜನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಭಜನಾ ತಂಡಕ್ಕೆ ಶುಭ ಕೋರಿದರು.
.
.