
ಭಕ್ತರ ಸಹಕಾರದಿಂದ ಧಾರ್ಮಿಕ ಕಾರ್ಯ ಮಾಡಲು ಸಾಧ್ಯವಾಗಿದೆ: ಸುಂದರ್ ಕುಲಾಲ್ ಶಕ್ತಿನಗರ.
ಮಂಗಳೂರು: ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ತೃತೀಯ ವಾರ್ಷಿಕ ಪ್ರತಿಷ್ಠ ಮಹೋತ್ಸವ.ಮೇ24 ರವಿವಾರ ವಿವಿಧ ಧಾರ್ಮಿಕ ಶ್ರೀ ಕ್ಷೇತ್ರದ ತಂತ್ರಿಗಳಾದ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ಜನಾರ್ಧನ ಭಟ್ಟ ಮತ್ತು ವಿಪ್ರ ವೃಂದದವರು ಬಹುಳ ವಿಜೃಂಭಣೆಯಿಂದ ನಡೆಸಿದರು.

.
ಗಣಹೋಮ , ನಾಗದೇವರಿಗೆ ಪಂಚಾಮೃತ,ಸಾಮೂಹಿಕ ತಂಬಿಲ,ಆಶ್ಲೇಷ ಬಲಿ ಮತ್ತು ಪರಿವಾರ ಶಕ್ತಿಗಳಿಗೆ ಪರ್ವಪೂಜೆ, ಮಹಾಪೂಜೆ,ಮಹಾನ್ನಸಂತರ್ಪಣೆ ನಡೆಯಿತು.
ನಂತರ ರಾಜಾಂಗಣದಲ್ಲಿ ಐಶ್ವರ್ಯ ನವೀನ್ ಕುಲಾಲ್ ಕೊಡ್ಮಾನ್ ದಂಪತಿಗಳಿಂದ ದೀಪ ಬೆಳಗಿಸಿ ಭಜನಾ ಸಂಕೀರ್ತನೆ ಉದ್ಘಾಟಿಸಲಾಯಿತು,
ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುಂದರ ಕುಲಾಲ್ ಶಕ್ತಿನಗರ ಮಾತನಾಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ಭಕ್ತರು ವಿಶೇಷ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ ಅವರೆಲ್ಲರೂ ಸಹಕಾರದಿಂದ ವರ್ಷಪೂರ್ತಿ ವಿವಿಧ ಧಾರ್ಮಿಕ ಕಾರ್ಯಗಳು ಯಶಸ್ವಿಯಾಗಿ ನಡೆಯಲು ಸಾಧ್ಯವಾಗಿದೆ ಎಂದು ನುಡಿದರು.
ಕಾರ್ಯದರ್ಶಿ ಗಿರಿಧರ್ ಜೆ ಮುಲ್ಯ ಸ್ವಾಗತಿಸಿ, ಧನ್ಯವಾದ ನೀಡಿದರು.
ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಕದ್ರಿ, ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಸಂಕೀರ್ತನ ಸೇವಾ ವೃಂದ ಮತ್ತು ಶ್ರೀ ವೀರನಾರಾಯಣ ಭಕ್ತವೃಂದದವರಿಂದ ಭಜನಾ ಕಾರ್ಯಕ್ರಮವು ಜರಗಿತು, ಸಂಜೆ ಶ್ರೀ ದೇವರಿಗೆ ರಂಗಪೂಜೆ ಪ್ರಸಾದ ವಿತರಣೆಯಾಯಿತು. ಸಾವಿರಾರು. ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು ,
, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಅಧ್ಯಕ್ಷ ಮಯೂರ್ ಉಳ್ಳಾಲ್,
ಕ್ಷೇತ್ರದ ಆಡಳಿತ ಮೊಕ್ತೇಸರರಾದ . ಸುಂದರ ಕುಲಾಲ್ ಶಕ್ತಿನಗರ, ಸೇವಾ ಟ್ರಸ್ಟ್ (ರಿ)ಅಧ್ಯಕ್ಷರಾದ ಪ್ರೇಮಾನಂದ ಕುಲಾಲ್, ಮಾತೃ ಮಂಡಳಿ ಅಧ್ಯಕ್ಷೆ ಮಮತಾ ದೇವದಾಸ್, ಜೀರಣೊದ್ಧಾರ ಸಮಿತಿ ಅಧ್ಯಕ್ಷರಾದ ದಾಮೋದರ ಎ. ಮತ್ತು. ಕ್ಷೇತ್ರದ ಆಡಳಿತ ಮಂಡಳಿಯ ಗಿರಿಧರ್ ಜೆ. ಮೂಲ್ಯ (ಕಾರ್ಯದರ್ಶಿ), ದಯಾನಂದ ಪಿ.ಎಸ್. ಕುತ್ತಾರು (ಕೋಶಾಧಿಕಾರಿ),ಮೊಕ್ತೇಸರರಾದ ಮೋಹನ್ ದಾಸ್ ಅಳಪೆ, ರಾಜೇಶ್ ಕುಲಾಲ್ ಶಕ್ತಿನಗರ, ಸದಾನಂದ ಬಂಗೇರ ಕೆ. ಮುಡಿಪು, ಆನಂದ ಪಿ. ಉರ್ವ, ವಾಸುದೇವ ಮೂಲ್ಯ ಉಳಾಯಿಬೆಟ್ಟು ಮತ್ತು ರಮೇಶ್ ಎಂ. ಬಾಳ.
, ಶ್ರೀ ವೀರನಾರಾಯಣ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕಿರಣ್ ಅಟ್ಲೂರು.ಮತ್ತಿತರ ಪದಾಧಿಕಾರಿಗಳು. ಸುರೇಶ್ ಕುಲಾಲ್ ಮಂಗಳದೇವಿ.
ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.




