September 6, 2026
Mumbai News Kannada
ಸುದ್ದಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟ. ಸಮಾಜ ಕಲ್ಯಾಣ ಯೋಜನೆಯಡಿ ಮಂಜೂರಾದ ಸಹಾಯಧನ ವಿತರಣೆ.





   ಮಂಗಳೂರು ಅ 2.    ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು  ಐಕಳ ಹರೀಶ್ ಶೆಟ್ಟಿಯವರು ಸಮಾಜ ಕಲ್ಯಾಣ ಯೋಜನೆಯಡಿ ಒಕ್ಕೂಟದ ಮಹಾ ನಿರ್ದೇಶಕರಾದ  ಬೆಳ್ಳಾಡಿ ಅಶೋಕ್ ಎಸ್.ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ  ಕುಂದಾಪುರದ ಹೇರಿಕುದ್ರು ಗ್ರಾಮದ ನಿವಾಸಿ ಪ್ರೇಮಾ ಶೇಡ್ತಿಯವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಮಂಜೂರು ಮಾಡಿದ ಸಹಾಯಧನದ ಚೆಕ್ಕನ್ನು ಪಲಾನುಭವಿಯ ಸಹೋದರಿ ಗೀತಾ ಶೇಡ್ತಿಯವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು.

 ಮಹಾ ನಿರ್ದೇಶಕರಾದ  ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ  ಕುಂದಾಪುರದ ಹಲ್ತೂರು- ಉಳ್ತೂರು ಗ್ರಾಮದ ನಿವಾಸಿ  ಶೆಟ್ಟಿಯವರು ಕಿಡ್ನಿ ವೈಫಲ್ಯವಾಗಿ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಮಂಜೂರು ಮಾಡಿದ ಸಹಾಯಧನದ ಚೆಕ್ಕನ್ನು ಪಲಾನುಭವಿಯ ಪತಿ ಉದಯ್ ಶೆಟ್ಟಿಯವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು.

 ಒಕ್ಕೂಟದ ಪೋಷಕ ಸದಸ್ಯರಾದ  ಅಶೋಕ್ ವಿಠ್ಠಲ್ ಶೆಟ್ಟಿ ಸೂರ್ಗೋಳಿ ಇವರ ಶಿಫಾರಸ್ಸಿನ ಮೇರೆಗೆ  ಕುಂದಾಪುರದ ಕನ್ಯಾನ ಗ್ರಾಮದ ನಿವಾಸಿ ಜ್ಯೋತಿಯವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಮಂಜೂರು ಮಾಡಿದ ಸಹಾಯಧನದ ಚೆಕ್ಕನ್ನು ಅವರ ಸಹೋದರ ರತ್ನಾಕರ್ ಆಚಾರ್ಯ ರವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು..

 ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ  ಕುಂದಾಪುರದ ಉಳ್ತೂರಿನ ನಿವಾಸಿ ಪ್ರಭಾವತಿ ಶೆಟ್ಟಿಯವರು ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಮಂಜೂರು ಮಾಡಿದ ಸಹಾಯಧನದ ಚೆಕ್ಕನ್ನು  ಫಲಾನುಭವಿಯ ಗಂಡ  ತೇಜಪ್ಪ ಶೆಟ್ಟಿಯವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು.*



Related posts

ಡಹಾಣೂವಿನ ಬೀದಿಗಳಲ್ಲಿ ಗಣರಾಯನ ದರ್ಬಾರು.

Mumbai News Desk

ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆ ಧರ್ಮಸ್ಥಳದಲ್ಲಿ ಬಿಡುಗಡೆ

Mumbai News Desk

ಶ್ರೀ ಭಗವತೀ ಕ್ಷೇತ್ರ ಉಪ್ಪಳ, ಮುಂಬಯಿ ಸಮಿತಿ ರಚನೆ

Mumbai News Desk

ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ನ ಹಿರಿಯ ನಾಯಕ ಸುರೇಶ್ ಕಲ್ಮಾಡಿ ನಿಧನ

Mumbai News Desk

ಬಟ್ಟೆ ಕುದ್ರು ದುರ್ಗಿ ಶ್ರೀಯಾನ್ ನಿಧನ.

Mumbai News Desk

ಕಾಂತಾವರ : ಶೋಧನ್ ಜೈನ್ ಕೊಡಗುತ್ತು ನಿರ್ಮಿಸಿದ ಕಾಂತೇಶ್ವರ ದೇವರ ಭಕ್ತಿ ಗೀತೆಯ ಆಲ್ಬಂ ಸಾಂಗ್ ಲೋಕಾರ್ಪಣೆ

Mumbai News Desk