29 C
Mumbai
July 11, 2026
Mumbai News Kannada
ತುಳುನಾಡು

ಮೂಲ್ಕಿಯಲ್ಲಿ ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ 2026: ಕಲಾವಿದರ ಪಾಲ್ಗೊಳ್ಳುವಿಕೆ ಮುಖ್ಯ – ಗುರುಕಿರಣ್








​ಮೂಲ್ಕಿ: “ತುಳು ಸಿನಿಮಾ ರಂಗದ ಬೆಳವಣಿಗೆಗೆ ಕೋಸ್ಟಲ್ ಫಿಲ್ಮ್ ಅವಾರ್ಡ್ ಪ್ರೇರಣೆಯಾಗಿದೆ. ಸತತ 5ನೇ ಬಾರಿಗೆ ಸ್ಯಾಂಡೀಸ್ ಕಂಪನಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸುತ್ತಿದ್ದು, ಇದಕ್ಕೆ ಎಲ್ಲರ ಪ್ರೋತ್ಸಾಹ ಸಿಗಲಿ. ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸಿದಾಗ ಸಮಾರಂಭಕ್ಕೊಂದು ಮೆರುಗು ಬರುತ್ತದೆ,” ಎಂದು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು.
​ಅವರು ಮೂಲ್ಕಿಯ ಕೋಲ್ನಾಡ್‌ನ ಸುಂದರರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ಸಂದೇಶ್ ರಾಜ್ ಬಂಗೇರ ಇವರ ಸಾರಥ್ಯದ ಸ್ಯಾಂಡೀಸ್ ಕಂಪನಿ ಹಾಗೂ ಸಿನಿ ಗ್ಯಾಲಕ್ಸಿ ಅಸ್ತ್ರ ಗ್ರೂಪ್‌ನ ಸಹಕಾರದಲ್ಲಿ ಆಯೋಜಿಸಲಾಗಿದ್ದ 5ನೇ ವರ್ಷದ ‘ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ 2026’ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
​ಪ್ರಸಿದ್ಧ ಮಾನವ ಸಂಪನ್ಮೂಲ ತರಬೇತಿದಾರ ಶ್ರೀನಾಥ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಹಾಗೂ ಅಸ್ತ್ರ ಸಂಸ್ಥೆಯ ಲಂಚುಲಾಲ್ ಎ.ಎಸ್. ಮಾತನಾಡಿದರು.


​ವೇದಿಕೆಯಲ್ಲಿ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್, ಸತೀಶ್ ಪೂಜಾರಿ, ನೀಲಯ್ಯ ಅಗರಿ, ಶಶಿಧರ್ ಕೊಡಿಕಲ್, ಜಗನ್ನಾಥ್ ಶೆಟ್ಟಿ ಬಾಳ, ನಂದೀಶ್, ಸದಾನಂದ ಪೂಜಾರಿ, ಎಂ.ಎಸ್. ಕೋಟ್ಯಾನ್, ರಾಘವೇಂದ್ರ ರಾವ್, ಕೆಂಚನೂರು ಸೋಮನಾಥ ಶೆಟ್ಟಿ, ಸಚಿನ್ ಎ.ಎಸ್. ಉಪ್ಪಿನಂಗಡಿ, ಮನೋಜ್ ಶೆಟ್ಟಿ ದುಬೈ, ರವಿ ರೈ ಕಳಸ, ಆರ್.ಕೆ. ಬಂಗೇರ, ಮನೋಹರ್ ಶೆಟ್ಟಿ ನಂದಳಿಕೆ, ದೇವೇಂದ್ರ ಪೂಜಾರಿ ಮುಕ್ಕ ಮತ್ತಿತರರು ಉಪಸ್ಥಿತರಿದ್ದರು.
​ಸ್ಯಾಂಡೀಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಂದೇಶ್ ರಾಜ್ ಬಂಗೇರ ಅತಿಥಿಗಳನ್ನು ಗೌರವಿಸಿದರು. ಶರ್ಮಿಳಾ ಅಮೀನ್ ಮತ್ತು ವಿನೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
​ಕಾರ್ಯಕ್ರಮದಲ್ಲಿ ತುಳು ಚಿತ್ರರಂಗದ ದಿಗಿಲಾವರು (ದಿಗ್ಗಜರು), ನಿರ್ಮಾಪಕರು, ತಂತ್ರಜ್ಞರು, ಹಿರಿಯ-ಕಿರಿಯ ನಟ-ನಟಿಯರು ಮತ್ತು ಇನ್ನಿತರ ಗಣ್ಯರು ಭಾಗವಹಿಸಿದ್ದರು. ತುಳು ಚಿತ್ರರಂಗದ ನಟ-ನಟಿಯರಿಂದ ಹಾಗೂ ‘ಸಿಸ್ಲಿಂಗ್ ಗಾಯ್ಸ್’ ತಂಡದಿಂದ ಅದ್ಭುತ ನೃತ್ಯ, ರಸಮಂಜರಿ ಹಾಗೂ ಕಾಮಿಡಿ ಕಾರ್ಯಕ್ರಮಗಳು ಜರುಗಿದವು. 2025ರಲ್ಲಿ ತೆರೆಕಂಡಿರುವ ಒಟ್ಟು 8 ಸಿನಿಮಾಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್ ಹಾಗೂ ವರ್ಸಟೈಲ್ ಆಕ್ಟರ್ ಅವಾರ್ಡ್ ಸೇರಿದಂತೆ ಒಟ್ಟು 30 ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.


​ಕಲಾವಿದೆ ಸರೋಜಿನಿ ಶೆಟ್ಟಿಗೆ ಜೀವಮಾನದ ಸಾಧನೆ ಪ್ರಶಸ್ತಿ; ಕಾಪಿಕಾಡ್ ಅವರಿಗೆ ‘ವರ್ಸಟೈಲ್ ಆ್ಯಕ್ಟರ್’ ಪುರಸ್ಕಾರ
​ಸಂದೇಶ್ ರಾಜ್ ಬಂಗೇರ ಅವರ “ಸ್ಯಾಂಡೀಸ್ ಕಂಪನಿ” ಆಯೋಜನೆಯಲ್ಲಿ ಹಾಗೂ ಅಸ್ತ್ರ ಗ್ರೂಪ್ ಸಹಭಾಗಿತ್ವದಲ್ಲಿ ನಡೆದ ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ತುಳು ಸಿನಿಮಾ ಕ್ಷೇತ್ರದ 2025ರ ಅತ್ಯುತ್ತಮ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇದರ ಮೇಲೋಗರವಾಗಿದ್ದವು. ರಂಗಭೂಮಿ ಮತ್ತು ಸಿನಿಮಾ ಕಲಾವಿದೆ ಸರೋಜಿನಿ ಎಸ್. ಶೆಟ್ಟಿ ಅವರಿಗೆ ‘ಜೀವಮಾನದ ಸಾಧನೆ’ ಪುರಸ್ಕಾರ ಹಾಗೂ ಡಾ. ದೇವದಾಸ್ ಕಾಪಿಕಾಡ್ ಅವರಿಗೆ ‘ವರ್ಸಟೈಲ್ ಆ್ಯಕ್ಟರ್’ ಪುರಸ್ಕಾರ ನೀಡಿ ಗೌರವಿಸಲಾಯಿತು.


​ಪ್ರಶಸ್ತಿ ಪುರಸ್ಕೃತರ ವಿವರ:
​ಅತ್ಯುತ್ತಮ ಪರಿಣಾಮಕಾರಿ ಚಿತ್ರ: ಪಿದಾಯಿ
​ಅತ್ಯುತ್ತಮ ಬಾಲ ಕಲಾವಿದ (ನಟ): ಅಕ್ಷರ್ ಜೆ. ಶೆಟ್ಟಿ (ಚಿತ್ರ: ಜೈ)
​ಅತ್ಯುತ್ತಮ ಬಾಲ ಕಲಾವಿದೆ (ನಟಿ): ಲಕ್ಷ ಲಂಚುಲಾಲ್ (ಚಿತ್ರ: ಮೀರಾ)
​ಅತ್ಯುತ್ತಮ ಪೋಷಕ ನಟಿ: ರೂಪಾಶ್ರೀ ವರ್ಕಾಡಿ (ಚಿತ್ರ: ಮಿಡಲ್ ಕ್ಲಾಸ್ ಫ್ಯಾಮಿಲಿ)
​ಅತ್ಯುತ್ತಮ ಪೋಷಕ ನಟ: ನವೀನ ಡಿ. ಪಡೀಲ್ (ಚಿತ್ರ: ಜೈ)
​ಅತ್ಯುತ್ತಮ ಹಾಸ್ಯ ಕಲಾವಿದ: ಅರವಿಂದ್ ಬೋಳಾರ್ (ಚಿತ್ರ: ಜೈ)
​ಅತ್ಯುತ್ತಮ ನಿರ್ದೇಶಕ: ಸಂತೋಷ್ ಮಾಡ (ಚಿತ್ರ: ಪಿದಾಯಿ)
​ಯೂತ್ ಐಕಾನ್ (ಪುರುಷ): ಸ್ವರಾಜ್ ಶೆಟ್ಟಿ
​ಯೂತ್ ಐಕಾನ್ (ಮಹಿಳೆ): ಸಮತಾ ಅಮೀನ್
​ಅತ್ಯುತ್ತಮ ಹಿನ್ನೆಲೆ संगीत (ಸಂಗೀತ): ಕಾರ್ತಿಕ್ ಮೂಲ್ಕಿ (ಚಿತ್ರ: ನೆತ್ತರ್‌ಕೆರೆ)
​ಅತ್ಯುತ್ತಮ ಕಥೆ: ರಾಹುಲ್ ಅಮೀನ್ (ಚಿತ್ರ: ಮಿಡಲ್ ಕ್ಲಾಸ್ ಫ್ಯಾಮಿಲಿ)
​ಅತ್ಯುತ್ತಮ ಸಂಗೀತ ನಿರ್ದೇಶನ: ಲಿಖಿತ್ ಪ್ರಸಾದ್ (ಚಿತ್ರ: ಧರ್ಮ ಚಾವಡಿ)
​ಅತ್ಯುತ್ತಮ ಪರಿಚಯಾತ್ಮಕ ನಟ (Debut Actor Male): ಅಶ್ವಥ್ (ಚಿತ್ರ: ಮೀರಾ)
​ಅತ್ಯುತ್ತಮ ಪರಿಚಯಾತ್ಮಕ ನಟಿ (Debut Actor Female): ಧನ್ಯ ಪೂಜಾರಿ (ಚಿತ್ರ: ಧರ್ಮಚಾವಡಿ)
​ಅತ್ಯುತ್ತಮ ಪರಿಚಯಾತ್ಮಕ ನಿರ್ದೇಶಕ (Debut Director): ಸ್ವರಾಜ್ ಶೆಟ್ಟಿ (ಚಿತ್ರ: ನೆತ್ತರ್‌ಕೆರೆ)
​ಅತ್ಯುತ್ತಮ ಛಾಯಾಗ್ರಹಣ: ಉದಯ ಬಲ್ಲಾಳ್ (ಚಿತ್ರ: ನೆತ್ತರ್‌ಕೆರೆ)
​ಅತ್ಯುತ್ತಮ ಪಬ್ಲಿಸಿಟಿ ಡಿಸೈನ್: ದೇವಿ ರೈ (ಚಿತ್ರ: ನೆತ್ತರ್‌ಕೆರೆ)
​ಅತ್ಯುತ್ತಮ ಚಿತ್ರಕಥೆ: ರೂಪೇಶ್ ಶೆಟ್ಟಿ (ಚಿತ್ರ: ಜೈ)
​ಅತ್ಯುತ್ತಮ ಸಂಭಾಷಣೆ: ಪ್ರಸನ್ನ ಶೆಟ್ಟಿ ಬೈಲೂರು (ಚಿತ್ರ: ಜೈ)
​ಅತ್ಯುತ್ತಮ ಸಾಹಿತ್ಯ: ಅರುಣ್ ಉಳ್ಳಾಲ (ಚಿತ್ರ: ನೆತ್ತರ್‌ಕೆರೆ)
​ಅತ್ಯುತ್ತಮ ಸಂಕಲನ (Editing): ಗಣೇಶ್ ನೀರ್ಚಾಲು (ಚಿತ್ರ: ನೆತ್ತರ್‌ಕೆರೆ)
​ಅತ್ಯುತ್ತಮ ಕಲೆ (Art): ವಿಪಿನ್
​ಅತ್ಯುತ್ತಮ ಸಾಹಸ (Action): ಮಾಡ (ಚಿತ್ರ: ನೆತ್ತರ್‌ಕೆರೆ)
​ಅತ್ಯುತ್ತಮ ನೃತ್ಯ ಸಂಯೋಜನೆ: ನವೀನ್ ಶೆಟ್ಟಿ ಆರ್ಯನ್ (ಚಿತ್ರ: ಮಿಡಲ್ ಕ್ಲಾಸ್ ಫ್ಯಾಮಿಲಿ)
​ಅತ್ಯುತ್ತಮ ನಟ: ವಿನೀತ್ ಕುಮಾರ್ (ಚಿತ್ರ: ಮಿಡಲ್ ಕ್ಲಾಸ್ ಫ್ಯಾಮಿಲಿ)
​ಅತ್ಯುತ್ತಮ ನಟಿ: ದಿಶಾಲಿ ಪೂಜಾರಿ (ಚಿತ್ರ: ನೆತ್ತರ್‌ಕೆರೆ)
​ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ): ನಿಹಾಲ್ ತೌರೋ (ಚಿತ್ರ: ಪಿಲಿಪಂಜ)
​ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ): ವೈಖಂ ವಿಜಯಲಕ್ಷ್ಮಿ (ಚಿತ್ರ: ನೆತ್ತರ್‌ಕೆರೆ)
​ಅತ್ಯುತ್ತಮ ಖಳನಟ: ರಾಜದೀಪಕ್ ಶೆಟ್ಟಿ (ಚಿತ್ರ: ಜೈ)
​ಅತ್ಯುತ್ತಮ ಜನಪ್ರಿಯ ಚಿತ್ರ: ಮಿಡಲ್ ಕ್ಲಾಸ್ ಫ್ಯಾಮಿಲಿ
​ಅತ್ಯುತ್ತಮ ಸಾಮಾಜಿಕ ಪ್ರಭಾವದ ಚಿತ್ರ: ಮೀರಾ
​ಅತ್ಯುತ್ತಮ ಚಿತ್ರ: ಜೈ


​ಚಿತ್ರ ವರದಿ: ಜಗನ್ನಾಥ್ ಶೆಟ್ಟಿ ಬಾಳ



Related posts

ಕುಲಾಲ ಪರ್ಬ ಉದ್ಘಾಟನೆ.

Mumbai News Desk

ಮುಲ್ಕಿ : ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದಲ್ಲಿ ‘ವನ ಮಹೋತ್ಸವ’ ದಿನಾಚರಣೆ, ಹಸಿರು ಕ್ರಾಂತಿಗೆ ಕರೆ

Mumbai News Desk

ಮೂಲ್ಕಿ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್(ರಿ)ಇದರ ಅಧ್ಯಕ್ಷರಾಗಿ ವಾಸು ಎಸ್. ಪೂಜಾರಿ ಕೊಲಕಾಡಿ ಆಯ್ಕೆ

Mumbai News Desk

ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ‘ಭಾರತ್ ಬ್ಯಾಂಕ್’: ಬೆಳ್ತಂಗಡಿಯ ಸುಸಜ್ಜಿತ ಕಟ್ಟಡದಲ್ಲಿ ಶಾಖೆ ಕಾರ್ಯಾರಂಭ.

Mumbai News Desk

ಕುಲಶೇಖರ ವೀರನಾರಾಯಣ ದೇವಸ್ಥಾನದ ಮೇಲ್ಛಾವಣಿ  ಲೋಕಾರ್ಪಣೆ

Mumbai News Desk

ಹಿರಿಯ ಸಮಾಜ ಬಂಧುಗಳ ನಿಸ್ವಾರ್ಥ ಸೇವೆಯೇ ಸಂಘದ ಬೆಳವಣಿಗೆಗೆ ಅಡಿಪಾಯ – ಮೋಹನ್ ದಾಸ್ ಹೆಜ್ಮಾಡಿ

Mumbai News Desk