ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಿಲಿ, ಮುಂಬಯಿ ಇವರ ವ್ಯವಸ್ಥಾಪಕತ್ವ ಹಾಗೂ ಸಂಯೋಜನೆಯಲ್ಲಿ ದಶಮಾನೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿನಾಂಕ : 17.12.2023 ಭಾನುವಾರ ಮಧ್ಯಾಹ್ನ 3:30 ಕ್ಕೆ ಜನ ಗಣ ಮನ ಸ್ಕೂಲ್, ನೆಮಾಡೆ ಗಲ್ಲಿ, ಜೂನಾ ಡೊಂಬಿವಲಿ (ಪ.) ಇಲ್ಲಿ ಸಿರಿಕಲಾಮೇಳ (ರಿ) ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ “ಕಂಸ ದಿಗ್ವಿಜಯ ಕಂಸ ವಧೆ” ಪೌರಾಣಿಕ ಯಕ್ಷಗಾನ ನಡೆಯಲಿದೆ.

ಯಕ್ಷಗಾನ ಮಧ್ಯಂತರ ದಲ್ಲಿ ನಡೆಯಲಿರುವ ಕಿರು ಸಭಾ ಕಾರ್ಯಕ್ರಮದಲ್ಲಿ ಬಂಟರ ಸಂಘ ಡೊಂಬಿವಲಿ, ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಶ್ರೀ ಆನಂದ ಶೆಟ್ಟಿ ಎಕ್ಕಾರು ಸಭಾಧ್ಯಕ್ಷತೆ ವಹಿಸಲಿರುವರು. ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ರಾಜೇಶ್ ಗೌಡ ಸಿಂದೂರ
ಉಪಸ್ಥಿತರಿರುವರು. ಶ್ರೀ ರಾಧಾಕೃಷ್ಣಶನೀಶ್ವರ ಮಂದಿರ, ಡೊಂಬಿವಲಿಯ ಪ್ರಧಾನ ಅರ್ಚಕರಾದ ಶ್ರೀ ಪ್ರಕಾಶ ಭಟ್ ಕಾನಾಂಗಿ ಶುಭ ಆಶೀರ್ವಚನ ನೀಡಲಿರುವರು.
ಅತಿಥಿ ಗಣ್ಯರು ಗಳಾಗಿ ಶ್ರೀ ಹರೀಶ ಶೆಟ್ಟಿ (ಗೌರವಾಧ್ಯಕ್ಷರು, ಶ್ರೀ ಜಗದಂಬಾ ಮಂದಿರ, ಡೊಂಬಿವಲಿ), ಶ್ರೀ ಸುಧೀರ್ ಶೆಟ್ಟಿ ವಂಡ್ಸ್ (ಪ್ರತಿಷ್ಠಿತ ಹೋಟೆಲ್ ಉದ್ಯಮಿ, ಕಲ್ಯಾಣ್), ರವಿ ಸನಿಲ್ (ಉಪಾಧ್ಯಕ್ಷರು, ರಾಧಾಕೃಷ್ಣ ಶನೀಶ್ವರ ಮಂದಿರ, ಡೊಂಬಿವಲಿ), ಲಕ್ಷ್ಮಣ ಪೂಜಾರಿ (ಪ್ರೀತಿ ಬ್ಯಾಂಕ್ವೆಟ್ ಹಾಲ್, ಡೊಂಬಿವಲಿ), ಗಣೇಶ ಶೆಟ್ಟಿ (ಉದ್ಯಮಿ, ಹೋಟೆಲ್ ರಂಜೀತ್ ಪ್ಯಾಲೇಸ್, ಡೊಂಬಿವಲಿ), ಶ್ರೀ ಅನಿಲ್ ಶೆಟ್ಟಿ (ಹೊಟೇಲ್ ಉದ್ಯಮಿ, ಕಲಾಪೋಷಕರು ಕಲ್ಯಾಣ್), ಶ್ರೀ ಜಯರಾಮ ಶೆಟ್ಟಿ (ಹೊಟೇಲ್ ಸಾಯಿರಾಜ್, ಡೊಂಬಿವಲಿ), ಶ್ರೀ ಸತೀಶ್ ಶೆಟ್ಟಿ (ಹೊಟೇಲ್ ಇಗೋ, ಡೊಂಬಿವಲಿ), ಶ್ರೀ ರಮೇಶ ಶೆಟ್ಟಿ (ಅಧ್ಯಕ್ಷರು, ಜಗಜ್ಯೋತಿ ಕಲಾವೃಂದ, ಡೊಂಬಿವಲಿ), ಶ್ರೀ ರಾಜು ಮೆಂಡನ್ ವಂಡೆ (ಅದ್ಯಕ್ಷರು, ಮೊಗವೀರ ಮಹಾಜನ ಸೇವಾ ಸಂಘ, ಹೋಬಳಿ, ಮುಂಬೈ), ಶ್ರೀ ಮೋಹನ ಸಾಲ್ಯಾನ್ (ಅಧ್ಯಕ್ಷರು, ಸಾಯಿನಾಥ್ ಮಿತ್ರ ಮಂಡಳಿ, ಡೊಂಬಿವಲಿ), ಶ್ರೀಮತಿ ಪ್ರಫುಲ್ಲ ದಿನೇಶ ಪೂಜಾರಿ (ಕಲಾಪೋಷಕರು,ಡೊಂಬಿವಲಿ), ಶ್ರೀ ಪುರುಷೋತ್ತಮ ಆಚಾರ್ಯ (ಮಾಲಕರು-ಪವನ್ ಜ್ಯುವೆಲ್ಲರ್ಸ್, ಡೊಂಬಿವಲಿ), ಶ್ರೀ ಗಣೇಶ ಮೊಗವೀರ (ಸಮಾಜ ಸೇವಕರು,ಡೊಂಬಿವಲಿ), ಶ್ರೀ ವಿಜಯ ಶೆಟ್ಟಿ ಸಜೀಪ (ಸಾಂಸ್ಕೃತಿಕ ಕಾರ್ಯಾಧ್ಯಕ್ಷರು, ಜಗದಂಬಾ ಮಂದಿರ, ಡೊಂಬಿವಲಿ), ಗೋಪಾಲ ಕೋಟ್ಯಾನ್ (ಕಲಾ ಸೇವಕರು,ಡೊಂಬಿವಲಿ), ಸತೀಶ ಸುವರ್ಣ (ಖ್ಯಾತ ಕ್ಯಾಟರಿಂಗ್ ಉದ್ಯಮಿ, ಡೊಂಬಿವಲಿ), ಶ್ರೀಮತಿ ಸುಮಿತ್ರ ಭಟ್ (ಕಲಾಪೋಷಕರು, ಡೊಂಬಿವಲಿ), ಶ್ರೀಮತಿ ಅನುಪಮಾ ಶೆಟ್ಟಿ (ಮಹಿಳಾ ಕಾರ್ಯದರ್ಶಿ, ಶಿವಸೇನಾ ಸೌಥ್ ಸೇಲ್, ಥಾಣೆ ಜಿಲ್ಲೆ), ಶ್ರೀ ಕೆ. ಟಿ. ಸಾಲ್ಯಾನ್ (ಕ್ಯಾಟರಿಂಗ್ ಉದ್ಯಮಿ, ಡೊಂಬಿವಲಿ), ಶ್ರೀ ಶರತ್ ಜಿ . ಮೊಗವೀರ (ಗುರುಸ್ವಾಮಿ, ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಲಿ) ಉಪಸ್ಥಿತರಿರುವರು.
ಯಕ್ಷಭಿಮಾನಿಗಳು ಹಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಬೇಕಾಗಿ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಲಿ, ಸ್ವಾಮಿಗಳು ಹಾಗೂ ಕಾರ್ಯಕರ್ತರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.