September 23, 2026
Mumbai News Kannada
ಪ್ರಕಟಣೆ

ಆ. 8: ವರ್ಲಿ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಆಶ್ರಯದಲ್ಲಿ ‘ತುಳುನಾಡ ಸಂಸ್ಕೃತಿದ ಆಟಿದ ಕೂಟ’



ಮುಂಬಯಿ: ವರ್ಲಿ ಮಧುಸೂದನ್ ಮಿಲ್ ಕಾಂಪೌಂಡ್‌ನಲ್ಲಿರುವ ಅತಿ ಪುರಾತನ ಶ್ರೀ ಸಿದ್ಧೇಶ್ವರ ಕ್ಷೇತ್ರದಲ್ಲಿ, ಪಡುಬಿದ್ರಿ ಬೆಂಗ್ರೆ ಕೈವಲ್ಯ ರಮೇಶ್ ಗುರುಸ್ವಾಮಿಯವರು ಸ್ಥಾಪಿಸಿರುವ ‘ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್’ನ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗದ ಆಶ್ರಯದಲ್ಲಿ ‘ತುಳುನಾಡ ಸಂಸ್ಕೃತಿದ ಆಟಿದ ಕೂಟ’ ಕಾರ್ಯಕ್ರಮವು ಆಗಸ್ಟ್ 8ರ ಶನಿವಾರ ಸಂಜೆ 6 ಗಂಟೆಗೆ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಫೌಂಡೇಶನ್‌ನ ಆಡಳಿತ ಧರ್ಮದರ್ಶಿ ಶಾಂಭವಿ ಆರ್. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಸಂಸ್ಥೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕವಿತಾ ಶೆಟ್ಟಿ ಅವರ ನೇತೃತ್ವದಲ್ಲಿ ಈ ಸಮಾರಂಭ ಆಯೋಜನೆಗೊಂಡಿದೆ.

ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ, ಯಕ್ಷಗಾನ ಕಲಾವಿದ ಹಾಗೂ ಸಂಘಟಕರಾದ ವಾಸುದೇವ ಶೆಟ್ಟಿ ಮಾರ್ನಾಡು ಅವರು “ಆಟಿ ತಿಂಗಳ ನೆನಪುಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಸಮಾರಂಭದ ಆರಂಭದಲ್ಲಿ ಭಜನೆ ಮತ್ತು ಮಹಾಮಂಗಳಾರತಿ ನಡೆಯಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಭೆಯ ಕೊನೆಯಲ್ಲಿ ಮಹಿಳಾ ವಿಭಾಗದ ಸದಸ್ಯೆಯರು ಮನೆಯಲ್ಲಿ ತಯಾರಿಸಿದ ಆಟಿ ತಿಂಗಳ ಸಾಂಪ್ರದಾಯಿಕ ತಿನಿಸುಗಳನ್ನು ಆಗಮಿಸಿದ ಸರ್ವ ಭಕ್ತಾದಿಗಳಿಗೆ ಉಣಬಡಿಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಫೌಂಡೇಶನ್‌ನ ಸರ್ವ ಬಂಧುಗಳು, ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಸ್ಥಾಪಕರು, ಆಡಳಿತ ಮಂಡಳಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗದ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.



Related posts

ಫೆ.3 ರಂದು ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಆ. 10 ರಂದು ಮುನಿರಾಜ್ ಜೈನ್ ಶ್ರದ್ಧಾಂಜಲಿ ಸಭೆ

Mumbai News Desk

ನ. 8-9, ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ ಡೊಂಬಿವಲಿ66ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಡಿ. 24ರಂದು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ

Mumbai News Desk

ವಿಜಯಕುಮಾರ್ ಕೊಡಿಯಾಲ್ ಬೈಲ್ ರಿಗೆ ರಂಗಚಾವಡಿ ಪ್ರಶಸ್ತಿ

Mumbai News Desk

ಆ.16: ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ ವರಮಹಾಲಕ್ಷ್ಮೀ ಪೂಜೆ

Mumbai News Desk