November 10, 2026
Mumbai News Kannada
ಪ್ರಕಟಣೆ

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ: ಸೆಪ್ಟೆಂಬರ್ 27ರಂದು ಸುವರ್ಣ ಸಂಭ್ರಮ: ದಾಸರ ಭಜನಾ ಸ್ಪರ್ಧೆ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ





















ಡೊಂಬಿವಲಿ: ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ (ಸಂಚಾಲಕರು: ಮುಂಬ್ರಾ ಮಿತ್ರ ಭಜನಾ ಮಂಡಳಿ) ಇದರ ಆಶ್ರಯದಲ್ಲಿ ಮಂದಿರದ ಸುವರ್ಣ ಸಂಭ್ರಮದ ಅಂಗವಾಗಿ “ಸುವರ್ಣ ಸಂಭ್ರಮ – ದಾಸರ ಭಜನಾ ಸ್ಪರ್ಧೆ – 2026” ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭವು ಇದೇ ಬರುವ ಸೆಪ್ಟೆಂಬರ್ 27, 2026ರ ಭಾನುವಾರ ಡೊಂಬಿವಲಿ ಪೂರ್ವದ ಎಂಐಡಿಸಿ (MIDC) ಫೈರ್ ಬ್ರಿಗೇಡ್ ರಸ್ತೆಯಲ್ಲಿರುವ ಎಲ್.ಐ.ಸಿ. (L.I.C.) ಕಚೇರಿ ಸಮೀಪದ ಶಿವಂ (ಮೆಜೆಸ್ಟಿಕ್ ಬ್ಯಾಂಕ್ವೆಟ್ ಹಾಲ್) ಸಭಾಂಗಣದಲ್ಲಿ ಬೆಳಿಗ್ಗೆ 9.00ರಿಂದ ರಾತ್ರಿ 7.00ರ ವರೆಗೆ ಜರುಗಲಿದೆ.

ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ ದಾಸರ ಭಜನಾ ಸ್ಪರ್ಧೆಯ ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ಸಮಾಜ ಸೇವಕರಾದ ಶ್ರೀ ಕುಶಾಲ್ ಕೋಟ್ಯಾನ್, ಮುಂಬೈನ ಚಿಣ್ಣರ ಬಿಂಬ ಚಾರಿಟೇಬಲ್ ಟ್ರಸ್ಟ್ (ರಿ.) ಡೊಂಬಿವಲಿ ಪ್ರಾದೇಶಿಕ ಮುಖ್ಯಸ್ಥರಾದ ಶ್ರೀಮತಿ ಮೈನಾ ಪಿ. ಶೆಟ್ಟಿ ಹಾಗೂ ಸಮಾಜ ಸೇವಕಿ ಶ್ರೀಮತಿ ಶ್ಯಾಮಲಾ ಪೂಜಾರಿ ಉಪಸ್ಥಿತರಿದ್ದು ಚಾಲನೆ ನೀಡಲಿದ್ದಾರೆ.



















ಭಜನಾ ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, ಕುಣಿತ ಭಜನಾ ಸ್ಪರ್ಧೆಯಲ್ಲಿ 10 ತಂಡಗಳು ಹಾಗೂ ಕುಳಿತ ಭಜನಾ ಸ್ಪರ್ಧೆಯಲ್ಲಿ 12 ತಂಡಗಳು ಭಾಗವಹಿಸಲಿವೆ.

ಸಂಜೆ 6.00ಕ್ಕೆ ಸಭಾ ಕಾರ್ಯಕ್ರಮ: ಸಂಜೆ 6.00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ:







































































































  • ಶ್ರೀ ಸತೀಶ್ ಶೆಟ್ಟಿ – ಮಾಜಿ ಕಾರ್ಯಾಧ್ಯಕ್ಷರು, ಬಂಟರ ಸಂಘ ಮುಂಬೈ, ಭಿವಂಡಿ–ಬದ್ಲಾಪುರ ಪ್ರಾದೇಶಿಕ ಸಮಿತಿ
  • ಶ್ರೀ ಜಯಂತ್ ಶೆಟ್ಟಿ – ಜೊತೆ ಕಾರ್ಯದರ್ಶಿ, ಬಂಟರ ಸಂಘ ಮುಂಬೈ, ಡೊಂಬಿವಲಿ ಪ್ರಾದೇಶಿಕ ಸಮಿತಿ
  • ಶ್ರೀ ಹರೀಶ್ ಸಾಲಿಯಾನ್ – ಕಾರ್ಯಾಧ್ಯಕ್ಷರು, ಬಿಲ್ಲವರ ಅಸೋಸಿಯೇಷನ್ ಮುಂಬೈ, ಕಲ್ವಾ ಸ್ಥಳೀಯ ಕಚೇರಿ

ಹಾಗೂ ಮಂದಿರದ ಪದಾಧಿಕಾರಿಗಳಾದ:

  • ಡಾ. ದಿವಾಕರ್ ಶೆಟ್ಟಿ (ಇಂದ್ರಾಳಿ) – ಕಾರ್ಯಾಧ್ಯಕ್ಷರು, ಸುವರ್ಣ ಮಹೋತ್ಸವ ಸಮಿತಿ
  • ಶ್ರೀ ಆನಂದ್ ಶೆಟ್ಟಿ (ಎಕ್ಕಾರ್) – ಕಾರ್ಯಾಧ್ಯಕ್ಷರು, ನಿಧಿ ಸಂಗ್ರಹ ಸಮಿತಿ
  • ಶ್ರೀ ಸುಬ್ಬಯ್ಯ ಶೆಟ್ಟಿ (ಸೂರಿಂಜೆ) – ಕಾರ್ಯಾಧ್ಯಕ್ಷರು, ಸ್ಮರಣ ಸಂಚಿಕೆ ಸಮಿತಿ
  • ಶ್ರೀ ಸುಕುಮಾರ್ ಶೆಟ್ಟಿ – ಕಾರ್ಯಾಧ್ಯಕ್ಷರು, ಕಾರ್ಯಕ್ರಮ ಸಮಿತಿ
  • ಶ್ರೀ ಇಂದುಶೇಖರ್ ಸುವರ್ಣ – ಅಧ್ಯಕ್ಷರು, ಮಂದಿರ ಸಮಿತಿ
  • ಶ್ರೀ ನಿತಿನ್ ಪ್ರಕಾಶ್ ಪುತ್ರನ್ – ಗೌರವ ಅಧ್ಯಕ್ಷರು
  • ಶ್ರೀ ಅರವಿಂದ್ ಪದ್ಮಶಾಲಿ – ಉಪಾಧ್ಯಕ್ಷರು
  • ಶ್ರೀ ಪ್ರವೀಣ್ ಶೆಟ್ಟಿ – ಕೋಶಾಧಿಕಾರಿ
  • ಶ್ರೀ ಚಂದ್ರಶೇಖರ್ ಸಾಲಿಯಾನ್ – ಜೊತೆ ಕಾರ್ಯದರ್ಶಿ
  • ಶ್ರೀ ಲತೇಶ್ ಸಾಲಿಯಾನ್ – ಜೊತೆ ಕೋಶಾಧಿಕಾರಿ
  • ಶ್ರೀಮತಿ ಸವಿತಾ ಸಾಲಿಯಾನ್ – ಕಾರ್ಯಾಧ್ಯಕ್ಷರು, ಮಹಿಳಾ ವಿಭಾಗ ಇವರು ಉಪಸ್ಥಿತರಿರಲಿದ್ದಾರೆ.

ಹಿರಿಯ ಸದಸ್ಯರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ಮಂದಿರದ ಸುವರ್ಣ ಸಂಭ್ರಮದ ಅಂಗವಾಗಿ ಹಿರಿಯ ಸದಸ್ಯರಾದ ಶ್ರೀ ನಾರಾಯಣ್ ಸಾಲಿಯಾನ್ ದಂಪತಿ, ಶ್ರೀ ಸುರೇಶ್ ನಾಯಕ್ ದಂಪತಿ, ಶ್ರೀಮತಿ ಮನೋರಮಾ ಮೆಂಡನ್, ಶ್ರೀಮತಿ ದೇವಕಿ ಪೂಜಾರಿ ಹಾಗೂ ಶ್ರೀಮತಿ ದೇವಕಿ ಸುವರ್ಣ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಗುವುದು.























ಈ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮಸ್ತ ತುಳು–ಕನ್ನಡಿಗರು, ಭಕ್ತಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಇಂದು: ಗೊರೇಗಾವ್ ಪೂರ್ವದ ಜಯ ಲೀಲಾ ಸಭಾಗೃಹದಲ್ಲಿ* ನಾಗೇಶ್ ಎಂ ಕೋಟ್ಯಾನ್* ಶ್ರದ್ದಾಂಜಲಿ ಸಭೆ.

Mumbai News Desk

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ, ಮಾ  28 :ನಿಧಿ ಕುಂಭ ಪ್ರತಿಷ್ಠಾಪನ ಮಹೋತ್ಸವ .

Mumbai News Desk

ಡಿ 24 ರಂದು ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ 29ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ.

Mumbai News Desk

ಗೊರೆಗಾಂವ್‌ ಪೂರ್ವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಜು21: ಗುರುಪೂರ್ಣಿಮಾ  ಆಚರಣೆ,

Mumbai News Desk

ಡೊಂಬಿವಲಿ: ಸೆ. 6ರಂದು ಮುದ್ದು ಮಕ್ಕಳ ‘ರಾಧಾ–ಕೃಷ್ಣ’ ಫ್ಯಾನ್ಸಿ ಡ್ರೆಸ್ ಸ್ಪರ್ಧೆ

Mumbai News Desk

ತುಳು ಸಂಘ ಬೊರಿವಲಿ  ಸೆ. 19 ರಂದು  15ನೇ  ವಾರ್ಷಿಕ ಮಹಾಸಭೆ

Mumbai News Desk