September 22, 2026
Mumbai News Kannada
ತುಳುನಾಡು

ಕೊಂಡೆವೂರು ಮಠದಲ್ಲಿ ಲೋಕ ಕಲ್ಯಾಣಾರ್ಥ ಧನ್ವಂತರಿ ಹವನ



ಕೊಂಡೆವೂರು: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ದಿನಾಂಕ 20.09.2026ರ ಭಾನುವಾರ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ವೇದಮೂರ್ತಿ ಶ್ರೀ ಹರಿನಾರಾಯಣ ಮಯ್ಯ ಕುಂಬಳೆ ಇವರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ಧನ್ವಂತರಿ ಹವನ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಉದ್ಯಮಿ ಶ್ರೀ ಶ್ರೀನಿವಾಸ ನಾಯ್ಡುರವರು ನವೀಕೃತ ಅಂಗಣವನ್ನು ಲೋಕಾರ್ಪಣೆಗೊಳಿಸಿದರು.

ಬಳಿಕ ಪೂಜ್ಯ ಶ್ರೀಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ “ಧಾರ್ಮಿಕ ಸಭೆ”ಯಲ್ಲಿ ಭಾಗವಹಿಸಿದ್ದ ಶಬರಿಮಲೆ ತಂತ್ರಿಗಳಾದ ಬ್ರಹ್ಮಶ್ರೀ ಕಂಠಾರರು ಮಹೇಶ್ ಮೋಹನರ್ ಮಾತನಾಡಿ, “ಧಾರ್ಮಿಕ ಕ್ಷೇತ್ರಗಳು ಸಾಮಾಜಿಕವಾಗಿ ಹೇಗಿರಬೇಕೆಂಬುದಕ್ಕೆ ಕೊಂಡೆವೂರು ಮಠ ಮಾದರಿಯಾಗಿದೆ” ಎಂದು ನುಡಿದರು. ಎರ್ನಾಕುಲಂನ ಆಲುವಾ ತಂತ್ರ ವಿದ್ಯಾಪೀಠದ ಅಧ್ಯಕ್ಷರಾದ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ನಂತರ ಬೆಂಗಳೂರಿನ ಶ್ರೀ ಕೆ. ನಾರಾಯಣ್ ರವರು ನವೀಕರಣಗೊಳ್ಳಲಿರುವ ಶ್ರೀ ಗಾಯತ್ರೀ ಮಾತೆಯ ಗರ್ಭಗುಡಿಯ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು. ಬಳಿಕ ಶ್ರೀ ಶ್ರೀನಿವಾಸ ನಾಯ್ಡು ಮತ್ತು ಶ್ರೀ ಮಠದ ಶಾಲೆಗೆ ಬಸ್ ಕೊಡುಗೆಯಾಗಿ ನೀಡಿದ ಕರ್ನಾಟಕ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಶ್ರೀ ವಿನಯ ಭಟ್ ರವರನ್ನು ಶ್ರೀಗಳವರು ಸನ್ಮಾನಿಸಿದರು. 2026ರ ಜೀ ಟಿವಿಯ “ಸ ರಿ ಗ ಮ ಪ ಲಿಟಲ್ ಚಾಂಪ್ಸ್” ಖ್ಯಾತಿಯ ಮಂಗಳೂರಿನ ಅಶ್ವಿತ್ ಎ. ಜೆ. ಅವರನ್ನು ಇದೇ ವೇಳೆ ಗೌರವಿಸಲಾಯಿತು.

ಆಶ್ರಮದ “ಆಶ್ರಯ” ಯೋಜನೆಯಡಿಯಲ್ಲಿ ನಿರ್ಮಿಸಲಾದ 48ನೇ ಮನೆಯ ಕೀಲಿ ಕೈಯನ್ನು ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ರವರು ಫಲಾನುಭವಿ ಶ್ರೀಮತಿ ಸಜಿತಾ ಅವರಿಗೆ ಹಸ್ತಾಂತರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಶ್ರೀ ನಾರಾಯಣ್ ರವರು ಆಶ್ರಮದ ಸಮಾಜಮುಖಿ ಚಟುವಟಿಕೆಗಳಲ್ಲಿ ನಾವೆಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಆಶ್ರಮದ ಟ್ರಸ್ಟಿಗಳಾದ ಮೋನಪ್ಪ ಭಂಡಾರಿ ಮತ್ತು ಶ್ರೀ ಶಶಿಧರ ಶೆಟ್ಟಿ ಗ್ರಾಮ ಚಾವಡಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರು ಸತ್ಕಾರ್ಯಗಳ ಮೂಲಕ ಆಶ್ರಮದ ಬೆಳವಣಿಗೆಗೆ ಸಹಕರಿಸಿದ ಗಣ್ಯರನ್ನು ಅಭಿನಂದಿಸಿ, ಶ್ರೀ ಮಠವನ್ನು ಇನ್ನಷ್ಟು ಬೆಳೆಸೋಣ ಎಂದು ಕರೆ ನೀಡಿದರು.

ಶ್ರೀಗಳವರು ತಮ್ಮ ಆಶೀರ್ವಚನದಲ್ಲಿ, “ಭಗವಂತನ ಆರಾಧನೆಯನ್ನು ‘ಜನಸೇವೆಯೇ ಜನಾರ್ದನ ಸೇವೆ’ ಎಂದು ಭಾವಿಸಿ, ಸತ್ಕಾರ್ಯಗಳ ಮೂಲಕ ಸದಾ ಹೃದಯವಂತರಾಗಿ ಬಾಳಬೇಕು” ಎಂದು ಅನುಗ್ರಹಿಸಿದರು.

ವೇದಿಕೆಯಲ್ಲಿದ್ದ ಶ್ರೀ ಮಧುಸೂದನ್ ಅಯ್ಯರ್ ಪ್ರಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಶ್ರೀ ಅಶ್ವಿತ್ ಎ. ಜೆ. ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ, ಶ್ರೀ ದಿನಕರ್ ಹೊಸಂಗಡಿ ವಂದನಾರ್ಪಣೆ ನೆರವೇರಿಸಿದರು. ಶ್ರೀ ಶೈಲೇಶ್ ಮತ್ತು ಶ್ರೀ ಪ್ರಶಾಂತ್ ತೊಳಂಬರಮ್ ಕಾರ್ಯಕ್ರಮ ನಿರೂಪಿಸಿದರು.



Related posts

ಸ್ಯಾಬ್ರ ಕಟ್ಟೆ: ನಿವೃತ ಹಿರಿಯ ಬ್ಯಾಂಕ್ ಅಧಿಕಾರಿ ಗಳಿಗೆ ಸನ್ಮಾನ

Mumbai News Desk

ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ “ಮೂಲ್ಕಿಯ ಕೀರ್ತಿಶೇಷ ಸಾಧಕರು” ಕೃತಿ ಬಿಡುಗಡೆ ಸಮಾರಂಭ

Mumbai News Desk

ಸುರತ್ಕಲ್ ಬಂಟರ ಸಂಘದಲ್ಲಿ “ಆಟಿದ ಪೊರ್ಲು” ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಮುಷ್ಟಿ ಕಾಣಿಕೆ ಸಮರ್ಪಣೆ

Mumbai News Desk

ತುಳುವಿನ ಐತಿಹಾಸಿಕ ದಿನಕ್ಕೆ ‘ಟಾಸ್’ ಚಿತ್ರದ ಕಲರವ

Mumbai News Desk

ತುಳು ರಂಗಭೂಮಿಯಲ್ಲಿ ಐತಿಹಾಸಿಕ ಮೈಲಿಗಲ್ಲು:ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ನಿರ್ದೇಶನದ “ಜೋಡು ಜೀಟಿಗೆ “ 100ನೇ ಪ್ರದರ್ಶನ – 100 ಕಲಾವಿದರಿರುವ ಏಕೈಕ ತಂಡದ ಅಪೂರ್ವ ಸಾಧನೆ

Mumbai News Desk